Mekedatu Politics: ಹೈಜಾಕ್‌ ಮಾಡೋಕೆ ಮೇಕೆದಾಟು ಎಚ್‌ಡಿಕೆ ಯೋಜನೆಯಾ?: ಸಿದ್ದರಾಮಯ್ಯ

By Kannadaprabha News  |  First Published Dec 30, 2021, 5:45 AM IST

*  ಮೇಕೆದಾಟು ಯೋಜನೆಯ ವಿವರವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದವರು ನಾವು
*  ನಾನು ಮುಖ್ಯಮಂತ್ರಿ ಆಗಿದ್ದಾಗ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿದ್ದೆವು
*  ನಮ್ಮ ಯೋಜನೆ ಅನುಷ್ಠಾನಗೊಳಿಸಲಿಕ್ಕಾಗಿ ನಾವು ಪಾದಯಾತ್ರೆ ಆರಂಭಿಸಿದ್ದೇವೆ 


ಬೆಂಗಳೂರು(ಡಿ.30):  ‘ಮೇಕೆದಾಟು ಯೋಜನೆ(Mekedatu Project) ಹೈಜಾಕ್‌ ಮಾಡೋಕೆ ಅದೇನು ಕುಮಾರಸ್ವಾಮಿ ಮಾಡಿದ ಯೋಜನೆನಾ? ನಾನು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಿದ್ದೆವು. ನಮ್ಮ ಯೋಜನೆಗಾಗಿ ನಾವು ಪಾದಯಾತ್ರೆ ನಡೆಸಿದರೆ ಕುಮಾರಸ್ವಾಮಿ(HD Kumaraswamy) ಅವರಿಗೆ ಏಕೆ ಹೊಟ್ಟೆಉರಿ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಯಾತ್ರೆಯನ್ನು ಕಾಂಗ್ರೆಸ್‌(Congress) ಹೈಜಾಕ್‌ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೇಕೆದಾಟು ಯೋಜನೆಯ ವಿವರವನ್ನು ಕೇಂದ್ರ ಸರ್ಕಾರಕ್ಕೆ(Central Government) ಕಳಿಸಿದವರು ನಾವು. ನಾನು ಮುಖ್ಯಮಂತ್ರಿ ಆಗಿದ್ದಾಗ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿದ್ದೆವು. ನಮ್ಮ ಯೋಜನೆ ಅನುಷ್ಠಾನಗೊಳಿಸಲಿಕ್ಕಾಗಿ ನಾವು ಪಾದಯಾತ್ರೆ ಆರಂಭಿಸಿದ್ದೇವೆ. ಕುಮಾರಸ್ವಾಮಿ ಅವರಿಗೆ ಏಕೆ ಹೊಟ್ಟೆಯುರಿ? ಇದು ಅವರ ಯೋಜನೆಯಾ ಎಂದು ಪ್ರಶ್ನಿಸಿದರು.

Tap to resize

Latest Videos

undefined

Karnataka Politics ದೆಹಲಿಗೆ ಹೋಗಿ ಏನೇನು ಮಾಡ್ತಿದ್ದಾರೆ ಎಲ್ಲಾ ಗೊತ್ತಿದೆ, ಎಚ್‌ಡಿಕೆ ವಿರುದ್ಧ ಡಿಕೆಶಿ ಬಾಂಬ್

ಪಾದಯಾತ್ರೆ(Padayatra) ಹೈಜಾಕ್‌ ಅಂದ್ರೆ ಅರ್ಥ ಏನು? ಅದೇನು ಸರ್ಕಾರಿ ಕಾರ್ಯಕ್ರಮನಾ ಹೈಜಾಕ್‌ ಮಾಡಲಿಕ್ಕೆ? ರಾಜಕೀಯ ಪಕ್ಷವಾಗಿ ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ. ನಾಡಿನ ಜನರ ಅಗತ್ಯ ನೀರಾವರಿ ಯೋಜನೆಗಾಗಿ ನಮ್ಮ ಹೋರಾಟ ಎಂದರು.

ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳಿಂದ(Covid Guidelines0 ಪಾದಯಾತ್ರೆಗೆ ತೊಂದರೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಸರ್ಕಾರ ನೈಟ್‌ ಕರ್ಫ್ಯೂ(Night Curfew) ಜಾರಿ ಮಾಡಿದೆ. ಆದರೆ ನಾವು ಪಾದಯಾತ್ರೆ ನಡೆಸುವುದು ಬೆಳಗ್ಗೆ. ನೈಟ್‌ ಕರ್ಫ್ಯೂನಿಂದ ನಮ್ಮ ಯಾತ್ರೆಗೆ ಯಾವುದೇ ತೊಂದರೆ ಆಗುವುದಿಲ್ಲ. ಪಾದಯಾತ್ರೆ ಜ.9ರಂದು ಆರಂಭವಾಗಿ 19ಕ್ಕೆ ಮುಕ್ತಾಯವಾಗಲಿದೆ. ಕಾಂಗ್ರೆಸ್‌ನ ಎಲ್ಲ ರಾಜ್ಯ ನಾಯಕರು, ಸಹಸ್ರಾರು ಕಾರ್ಯಕರ್ತರು, ಇತರೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೂ ಆಹ್ವಾನ ನೀಡಲಾಗಿದೆ. ಇದು ಪಕ್ಷಾತೀತ ಹೋರಾಟ. ಎಲ್ಲರೂ ನಿಯಮಗಳನ್ನು ಪಾಲಿಸಿ ಪಾದಯಾತ್ರೆ ನಡೆಸಲಿದ್ದೇವೆ ಎಂದರು.

ಜೆಡಿಎಸ್‌ ಪಾದಯಾತ್ರೆ ಕಾಂಗ್ರೆಸ್‌ನಿಂದ ಹೈಜಾಕ್‌: HDK

ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್‌ ಪಕ್ಷ ಪಾದಯಾತ್ರೆ ಹಮ್ಮಿಕೊಂಡು ಹೈಜಾಕ್‌ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ದೂರಿದ್ದರು.

Mekedatu Project: ಮೇಕೆದಾಟು ಮಕ್ಮಲ್ ಟೋಪಿ, ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ರಾಮನಗರ ತಾಲೂ​ಕಿನ ಬಿಡ​ದಿ​ಯಲ್ಲಿ ಪುರ​ಸಭಾ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಜೆಡಿ​ಎಸ್‌(JDS) ಅಭ್ಯ​ರ್ಥಿ​ಗಳ ಪರ ರೋಡ್‌ ಶೋ ಮೂಲಕ ಪ್ರಚಾರ ನಡೆಸುವ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತನಾಡಿ, ಪಾದ​ಯಾತ್ರೆ ಆರಂಭ​ವಾ​ಗಿದ್ದೇ ದೇವೇ​ಗೌ​ಡ​ರಿಂದ. ಮೇಕೆ​ದಾಟು ವಿಚಾ​ರ​ದಲ್ಲಿ ಜೆಡಿಎಸ್‌(JDS) ಪಕ್ಷವೂ ಹೋರಾಟ ಮಾಡುತ್ತಿದೆ. ರಾಜ್ಯ​ಪಾ​ಲರು ಮತ್ತು ಮುಖ್ಯ​ಮಂತ್ರಿ​ಗ​ಳಿಗೂ ಮನವಿ ಕೊಟ್ಟಿದೆ ಎಂದರು.

2013ರಲ್ಲಿ ಕೃಷ್ಣೆಯ ಕಡೆಗೆ ಕಾಂಗ್ರೆಸ್‌ ನಡಿಗೆ ಎಂದು ಪಾದ​ಯಾತ್ರೆ ಮಾಡಿ​ದ್ದರು. ಕೃಷ್ಣಾ​ನದಿ ಯೋಜ​ನೆಗೆ(Krishna River Project) ವರ್ಷಕ್ಕೆ 10 ಸಾವಿರ ಕೋಡ್ತೀವಿ ಅಂತ ಹೇಳಿ​ದ್ದರು. ಆದರೆ, 5 ವರ್ಷ​ದಲ್ಲಿ ಕೊಟ್ಟಿದ್ದು ಕೇವಲ 8 ಸಾವಿರ. ಆದರೆ, ಹನಿ​ ನೀರು ರೈತರ ಜಮೀ​ನಿಗೆ ಹರಿ​ಯ​ಲಿಲ್ಲ. ಕೃಷ್ಣಾ ನದಿ(Krishna River) ಯೋಜ​ನೆಗೆ ಸಂಬಂಧಿ​ಸಿ​ದಂತೆ ಮೈನ್‌ ಕೆನಾಲ್‌ ನಿರ್ಮಿ​ಸಿ​ದ್ದಾರೆ. ಆದರೆ, ಡಿಸ್ಟ್ರಿ​ಬ್ಯೂ​ಷನ್‌ ಕೆನಾಲ್‌ ನಿರ್ಮಿ​ಸಿಲ್ಲ. ಇವರು ಗುತ್ತಿ​ಗೆ​ದಾ​ರ ಜೊತೆ ಸೇರಿ ದುಡ್ಡು ಹಂಚಿ​ಕೊಂಡರು. ಇದು ಸಾಧನೆಯೇ ಎಂದು ಟೀಕಿಸಿದರು.

ಜನರನ್ನು ಮರಳು ಮಾಡಲು ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್‌ ನಾಯಕರು ಪಾದ​ಯಾತ್ರೆ ಹೊರ​ಟಿ​ದ್ದಾರೆ. ಜೆಡಿಎಸ್‌ ಕೊಟ್ಟ ನೀರಾ​ವರಿ ಯೋಜ​ನೆ​ಗ​ಳಿಗೂ ಕಾಂಗ್ರೆಸ್‌ನ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್‌ನವರು ಈಗ ಹೈಜಾಕ್‌ ಮಾಡಿ​ ತರಾ​ತು​ರಿ​ಯಲ್ಲಿ ಪಾದ​ಯಾತ್ರೆ ಹಮ್ಮಿ​ಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಮೇಕೆ​ದಾಟು ಯೋಜನೆ ಸಾಧ್ಯ​ವಿಲ್ಲ. ಅದು ಜನತಾ ದಳದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದರು. 
 

click me!