* ಬೊಕ್ಕಸಕ್ಕೆ ಹಣ ಉಳಿಸಲು ಟೆಂಡರ್‌ನಲ್ಲಿ ಬದಲಾವಣೆ ತಂದಿದ್ದಾರೆ
* ತೆರಿಗೆ ಸಂಗ್ರಹದ ಗುರಿಯನ್ನೇ ಬೊಮ್ಮಾಯಿ ಪರಿಷ್ಕರಿಸಿದ್ದಾರೆ
* ಹೆಚ್ಚುವರಿ ತೆರಿಗೆ ಎಲ್ಲಿಂದ ಸಂಗ್ರಹಿಸಬಹುದು ಎಂದೂ ಹೇಳಿದ್ದಾರೆ
ಬೆಂಗಳೂರು(ಡಿ.30): ರಾಜ್ಯದ ಆರ್ಥಿಕತೆಯನ್ನು 2025ರ ವೇಳೆಗೆ 500 ಶತಕೋಟಿ ಡಾಲರ್‌ಗಳಿಗೆ (ಸುಮಾರು 37 ಲಕ್ಷ ಕೋಟಿ ರು.) ಹೆಚ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಗುರಿ ಹೊಂದಿದ್ದು, ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ(N Manjunath) ಪ್ರಸಾದ್ ತಿಳಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಮಾಧ್ಯಮ ಆಡಳಿತ ಅಭಿವೃದ್ಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ(Karnataka) ಆಡಳಿತದಲ್ಲಿ ಸುಧಾರಣೆ ಹಾಗೂ ಸುಸ್ಥಿರ ಆರ್ಥಿಕತೆಗಾಗಿ ಮುಖ್ಯಮಂತ್ರಿ ಅವರು ಹಲವು ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಜನಪರವಾದ ಯಾವುದೇ ಪ್ರಸ್ತಾವನೆಗಳಿಗೆ ನಮಗಿಂತ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಯೋಚನೆಗಳೇ ವಿಭಿನ್ನವಾಗಿವೆ. 2025ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು(Economy) 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ಇದಕ್ಕೆ ತಮ್ಮ ಮುಂಬರುವ ಬಜೆಟ್‌ನಲ್ಲಿ(Budget) ಸ್ಪಷ್ಟರೂಪ ನೀಡಲಿದ್ದಾರೆ ಎಂದರು.
undefined
BBMP: ಬೆಂಗ್ಳೂರಲ್ಲಿ 3 ವರ್ಷವಾದ್ರೂ ಒಂಟಿ ಮನೆಗಿಲ್ಲ ಅನುದಾನ..!
ಅದೇ ರೀತಿ ಕಳೆದ ಐದು ತಿಂಗಳ ಆಡಳಿತದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿತಾಯ ಆಗುವಂತೆ ಟೆಂಡರ್ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತಂದಿದ್ದಾರೆ. 50 ಲಕ್ಷ ರು.ಗಳಿಗಿಂತ ಹೆಚ್ಚಿನ ಮೊತ್ತದ ಪ್ರತಿಯೊಂದು ಟೆಂಡರ್ ಅನ್ನು ಬಿಡ್‌ಗೆ ಅಂತಿಮಗೊಳಿಸುವ ಮುಂಚೆ ಅದನ್ನು ಕಾನೂನುಬದ್ಧವಾಗಿ ರೂಪಿಸಲಾಗಿದೆಯೇ, ಯಾರಿಗಾದರೂ ಒಬ್ಬರಿಗೆ ಟೆಂಡರ್ ಸಿಗುವಂತೆ ತಯಾರಿಸಲಾಗಿದೆಯೇ ಎಂಬುದು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ತಜ್ಞರನ್ನೊಳಗೊಂಡ ಎರಡು ಸಮಿತಿ ರಚಿಸಿದ್ದಾರೆ.
ಈ ಸಮಿತಿಯು ಟೆಂಡರ್ ದಾಖಲೆಗಳನ್ನು ಸಾರ್ವಜನಿಕ ವೇದಿಕೆಗೆ ತೆರೆದಿಟ್ಟು ಬರುವ ಅಭಿಪ್ರಾಯಗಳನ್ನು ಆಧರಿಸಿ ಅದರಲ್ಲಿ ಯಾವುದಾದರೂ ಹಿತಾಸಕ್ತಿ, ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸುತ್ತದೆ. ಅಲ್ಲದೆ, ಯಾವುದೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ಕೂಡ ಮುಖ್ಯಮಂತ್ರಿಗಳು ನಿರ್ದಿಷ್ಟಕಾಲ ಮಿತಿ ನಿಗದಿಪಡಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟುಹಣ ಉಳಿತಾಯವಾಗಲಿದೆ. ಜತೆಗೆ ಪ್ರತಿಯೊಂದು ಟೆಂಡರ್‌ನಲ್ಲೂ ಪಾರದರ್ಶಕತೆ ಬರುತ್ತದೆ ಎಂದು ಹೇಳಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗೆ ನೀಡಿದ್ದ ತೆರಿಗೆ ಸಂಗ್ರಹದ ಗುರಿಯನ್ನು ಮುಖ್ಯಮಂತ್ರಿ ಪರಿಷ್ಕರಿಸಿದ್ದಾರೆ. ನವೆಂಬರ್ ಅಂತ್ಯದವರೆಗೆ ಬಹುತೇಕ ಇಲಾಖೆಗಳಲ್ಲಿ ಶೇ.70ರಷ್ಟುತೆರಿಗೆ ಸಂಗ್ರಹದ ಗುರಿ ಸಾಧಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ನೀವು ಹಾಕಿಕೊಂಡಿರುವ ಗುರಿಯೇ ಕಡಿಮೆ ಇದೆ ಎಂದು ಹೆಚ್ಚುವರಿಯಾಗಿ 20 ಸಾವಿರ ಕೋಟಿ ರು. ಸಂಗ್ರಹದ ಗುರಿ ನೀಡಿದ್ದಾರೆ. ಅಲ್ಲದೆ ಎಲ್ಲೆಲ್ಲಿಂದ ಈ ಹೆಚ್ಚುವರಿ ತೆರಿಗೆ(Tax) ಸಂಗ್ರಹಿಸಬಹುದೆಂಬುದನ್ನೂ ತಾವೇ ಮಾಹಿತಿ ನೀಡಿದ್ದಾರೆ. ಇದರ ಫಲವಾಗಿ ಈಗ ಸಿಎಂ ಕೊಟ್ಟಗುರಿಗಿಂತ ಹೆಚ್ಚು ಆದಾಯ(Revenue) ಸಂಗ್ರಹಿಸುವ ವಿಶ್ವಾಸ ವಿವಿಧ ಇಲಾಖೆಗಳಿಂದ ವ್ಯಕ್ತವಾಗುತ್ತಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.
Indefinite Strike: ಬೆಂಗ್ಳೂರಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ?
ಬಿಬಿಎಂಪಿಯೇ ಬೀದಿದೀಪಗಳ ನಿರ್ವಹಣೆ ಮಾಡ್ಬೇಕು: ಸಿಎಂ ಬೊಮ್ಮಾಯಿ
ಬೆಂಗಳೂರಿನ(Bengaluru) ಪ್ರಮುಖ ಆರ್ಟೀರಿಯಲ್ ರಸ್ತೆಗಳ ಪ್ರತಿ ಕಾಮಗಾರಿಯ ಬಗ್ಗೆ ರೋಡ್ ಹಿಸ್ಟರ್ ನಿರ್ವಹಣೆ ಮಾಡಬೇಕು. ನಗರದ ಬೀದಿ ದೀಪಗಳಿಗೆ ಎಲ್‌ಇಡಿ ಲೈಟ್ ಅಳವಡಿಸಲು ಮರು ಟೆಂಡರ್ ಆಗುವವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡಬೇಕೆಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು.
ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ಪದೇ ಪದೇ ರಿಪೇರಿ ಮಾಡುತ್ತಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಆರ್ಟೀರಿಯಲ್ ರಸ್ತೆಗಳಲ್ಲಿ ನಡೆಯುವ ಕಾಮಗಾರಿಗಳ ಹಿಸ್ಟರಿ ನಿರ್ವಹಣೆಗೆ ಈಗಾಗಲೇ ಆಯುಕ್ತರಿಗೆ ಸೂಚಿಸಲಾಗಿದೆ. ಸ್ಮಾರ್ಟ್ ಸಿಟಿ(Smartcity) ಯೋಜನೆಯಡಿ ಹಲವಾರು ಯೋಜನೆಗಳು ನಡೆಯುತ್ತಿದ್ದು, ಈ ಬಗ್ಗೆ ಪೂರ್ಣ ವಿವರದ ನಾಲ್ಕು ಸಾವಿರ ಪುಟಗಳ ಉತ್ತರವನ್ನು ಸಿಟಿಯಲ್ಲಿ ಒದಗಿಸಲಾಗಿದೆ. ಇದನ್ನು ಪರಿಶೀಲಿಸಿ ಸದಸ್ಯರು ಯಾವುದೇ ಸಲಹೆಗಳಿದ್ದರೆ ನೀಡಬಹುದು ಎಂದರು.