ಚೈತ್ರಾ ಕುಂದಾಪುರ ಅರೆಸ್ಟ್‌: ಅನಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡೋದು ಸರಿಯಲ್ಲ, ಜ್ಞಾನೇಂದ್ರ

By Girish Goudar  |  First Published Sep 13, 2023, 1:17 PM IST

ಅತಿವೃಷ್ಟಿ ಆದಾಗ ನಮ್ಮ ಸರಕಾರ ಪರಿಹಾರ ಕೊಟ್ಟಿತ್ತು. ಈಗ ಅನಾವೃಷ್ಟಿ ಆಗಿದೆ ಸರಕಾರ ಪರಿಹಾರ ಕೊಡಬೇಕು. ಸರಕಾರ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಬರ ಪರಿಹಾರ ನೀಡಲು ರಾಜ್ಯ ಸರಕಾರ ಅಗತ್ಯ ಬಿದ್ದಲ್ಲಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ತಕ್ಷಣ ಈ ಬಗ್ಗೆ ಗಮನಹರಿಸಿ ಪರಿಹಾರ ಕೊಡಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ 


ಶಿವಮೊಗ್ಗ(ಸೆ.13):  ಚೈತ್ರಾ ಕುಂದಾಪುರ ತಪ್ಪು ಮಾಡಿದ್ರೆ ಕಾನೂನು‌ ಕ್ರಮ ಕೈಗೊಳ್ಳಲಿ, ಅನಗತ್ಯವಾಗಿ‌ ಹಿಂದೂಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸಚಿವ ಡಿ. ಸುಧಾಕರ್ ಅವರ ವಿರುದ್ಧ ಎಫ್ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಧಾಕರ್ ಅವರಿಗೆ ಒಂದು ಕಾನೂನು, ಬೇರೆಯವರಿಗೆ ಒಂದು ಕಾನೂನಿನಲ್ಲ ಎಂದು ಹೇಳಿದ್ದಾರೆ. 

ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ನಾನು ಕೂಡ ಮಾಧ್ಯಮದಲ್ಲಿ ಗಮನಿಸಿದ್ದೇನೆ. ದಲಿತರಿಗೆ ಅನ್ಯಾಯ ಆಗಬಾರದು, ಪ್ರಕರಣವನ್ನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಏನು ಪ್ರತಿಕ್ರಿಯಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಅಂತ ತಿಳಿಸಿದ್ದಾರೆ. 

Tap to resize

Latest Videos

undefined

7 ಕೋಟಿ ಡೀಲ್‌, ದ್ವೇಷ ಭಾಷಣ ಮಾಡುವ ಚೈತ್ರಾ ಕುಂದಾಪುರ ಬಂಧನಕ್ಕೂ ಮುನ್ನ ಇದ್ದಿದ್ದು ಮುಸ್ಲಿಂರ ಮನೆಯಲ್ಲಿ!

ಶಿವಮೊಗ್ಗ ಜಿಲ್ಲೆಯಲ್ಲಿ ಬರಗಾಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ ಅವರು, ಈ ವರ್ಷ ಮಲೆನಾಡಿನಲ್ಲಿ ಕಡಿಮೆ ಮಳೆಯಾಗಿದೆ. ಮಲೆನಾಡಿನಲ್ಲಿ ಇಷ್ಟು ಕಡಿಮೆ ಪ್ರಮಾಣದ ಮಳೆ ಆಗಿರಲಿಲ್ಲ. ಭತ್ತದ ನಾಟಿ ಅರ್ಧಂಬರ್ಧ ಆಗಿದೆ. ಗದ್ದೆಗಳು ಒಣಗಿ ಹೊಡೆ ಬಂದಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ  ಕುಡಿಯುವ ‌ನೀರಿಗೂ ಸಮಸ್ಯೆ ಆಗಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಅಂತ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಅತಿವೃಷ್ಟಿ ಆದಾಗ ನಮ್ಮ ಸರಕಾರ ಪರಿಹಾರ ಕೊಟ್ಟಿತ್ತು. ಈಗ ಅನಾವೃಷ್ಟಿ ಆಗಿದೆ ಸರಕಾರ ಪರಿಹಾರ ಕೊಡಬೇಕು. ಸರಕಾರ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಬರ ಪರಿಹಾರ ನೀಡಲು ರಾಜ್ಯ ಸರಕಾರ ಅಗತ್ಯ ಬಿದ್ದಲ್ಲಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ತಕ್ಷಣ ಈ ಬಗ್ಗೆ ಗಮನಹರಿಸಿ ಪರಿಹಾರ ಕೊಡಬೇಕು. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ಪಂಪ್ ಸೆಟ್ ಇದ್ದರೂ ವಿದ್ಯುತ್ ಇಲ್ಲದೇ ಬೆಳೆ ಬೆಳೆಯಲಾಗುತ್ತಿಲ್ಲ ಎಂದು ಹೇಳಿದ್ದಾರೆ. 

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರಗ ಜ್ಞಾನೇಂದ್ರ, ಕಾವೇರಿ ನಿರ್ವಹಣಾ ಮಂಡಳಿಗೆ ಮನವರಿಕೆ ಮಾಡಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ. 
ಇನ್ನು ಬಿ.ಕೆ. ಹರಿಪ್ರಸಾದ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಕಾಂಗ್ರೆಸ್ ಒಳಕುದಿ ಹೊರ ಬರುತ್ತಿದೆ. ಹರಿಪ್ರಸಾದ್ ಮುನ್ನಲೆಗೆ ಬಂದಿದ್ದಾರೆ ಅಷ್ಟೇ. ಇನ್ನು ಬಹಳಷ್ಟು ಜನ ಮಾತನಾಡುವವರು ಇದ್ದಾರೆ ಎಂದು ಹೇಳಿದ್ದಾರೆ. 

click me!