
ಬೆಂಗಳೂರು(ನ.30): ಸಂವಿಧಾನ ನಮ್ಮ ದೇಶದಲ್ಲಿ ಸರ್ವೋಚ್ಛ ಅಧಿಕಾರ ಹೊಂದಿರುವ ಕಾನೂನಾಗಿದ್ದು, ಯಾವುದೇ ಧರ್ಮ ಅನುಸರಿಸುವ ಅವಕಾಶವನ್ನು ಸಂವಿಧಾನ ಕೊಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
‘ಸಂವಿಧಾನದ ಹಾದಿಯಲ್ಲಿ’ ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂವಿಧಾನದ ಮುಂದೆ ಎಲ್ಲ ಧರ್ಮವೂ ಸಮಾನ ಎಂದು ಹೇಳಿದರು. ದೇಶದ ಸ್ವಾಂತಂತ್ರ್ಯಕ್ಕೆ ಸಾಕಷ್ಟು ಜನ ಶ್ರಮಿಸಿದ್ದು, ಪ್ರತಿಯೊಬ್ಬರಿಗೆ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ಸಿದ್ದರಾಂಯ್ಯ ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಕಾಂಗ್ರೆಸ್ ಈ ದೇಶಕ್ಕೆ ಏನು ಮಾಡಿದೆ ಅಂತಾ ಕೇಳುವ ಬಿಜೆಪಿಗೆ ಸಂವಿಧಾನ ಕೊಟ್ಟಿದ್ದೇ ಕಾಂಗ್ರೆಸ್ ಎಂಬ ಅರಿವಿಲ್ಲವೇ ಎಂದು ಪ್ರಶ್ನಿಸಿದರು. ಮಹಾತ್ಮಾ ಗಾಂಧಿಜಿಯನ್ನು ಕೊಂದ ಗಿರಾಕಿಗಳ ವಂಶದವರಾದ ಬಿಜೆಪಿಯವರಿಗೆ ಸಂವಿಧಾನ, ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಆರ್ ಎಸ್ಎಸ್ ಇತ್ತು. ಆದರೆ ಸ್ವಾತಂತ್ರ ಹೋರಾಟದಲ್ಲಿ ಹೆಡ್ಗೆವಾರ್, ಗೋಲವಾಲ್ಕರ್ ಕೊಡುಗೆ ಶೂನ್ಯ ಎಂದು ಮಾಜಿ ಮುಖ್ಯಮಂತ್ರಿ ತೀವ್ರ ವಾಗ್ದಾಳಿ ನಡೆಸಿದರು. ಅಸಮಾನತೆಯನ್ನು ಉಸಿರಾಡುವ ಬಿಜೆಪಿ ಮೇಲ್ವರ್ಗದ ಪಾರುಪತ್ಯ ಪುನರ್ ಸ್ಥಾಪಿಸುವ ಕನಸು ಕಾಣುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ