Foreign Languages: ಮಲ್ಲೇಶ್ವರಂ ಬಾಲಕಿಯರ ಕಾಲೇಜಲ್ಲಿ ವಿದೇಶಿ ಭಾಷಾ ಕಲಿಕೆ ಕೇಂದ್ರ

By Kannadaprabha NewsFirst Published Dec 5, 2021, 3:00 AM IST
Highlights
  • ಬಾಲಕಿಯರ ಕಾಲೇಜಲ್ಲಿ ವಿದೇಶಿ ಭಾಷಾ ಕಲಿಕೆ ಕೇಂದ್ರ
  • 430 ಸರ್ಕಾರಿ ಪದವಿ ಕಾಲೇಜುಗಳ ಸುಧಾರಣೆಗೆ ಪಣ

ಬೆಂಗಳೂರು(ಡಿ.05): ಮಲ್ಲೇಶ್ವರಂನ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ಕ್ಯಾಂಪಸ್ಸನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಿ ಅಲ್ಲಿ ವಿದೇಶಿ ಭಾಷೆಗಳನ್ನು ಕಲಿಯುವ ಸುಸಜ್ಜಿತ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳ(College) ಸುಧಾರಣೆಗೆ ನಮ್ಮ ಸರ್ಕಾರ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಶಿಕ್ಷಣ ಸಂಸ್ಥೆಗಳಲ್ಲಿ ನೂರಕ್ಕೆ ನೂರರಷ್ಟುಡಿಜಿಟಲ್‌ ಕಲಿಕೆ ಮತ್ತು ಸ್ಮಾರ್ಟ್‌ ತರಗತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಬಹುಮುಖ ಪ್ರತಿಭಾವಂತರನ್ನಾಗಿ ಮಾಡಲಾಗುತ್ತಿದೆ. ಜತೆಗೆ ಇಸ್ಫೋಸಿಸ್‌, ಮಹೀಂದ್ರ ಮಹೀಂದ್ರ, ನಾಸ್ಕಾಂ ಮುಂತಾದ ದೈತ್ಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆಯಾಯ ಕಾಲೇಜಿಗೆ ಬೇಕಾದ ಮೈಕ್ರೋಸೈಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

Egg Scheme : ಶಾಲಾ‌ ಮಕ್ಕಳಿಗೆ ಮೊಟ್ಟೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟ, ಸ್ವಾಮೀಜಿಗಳಿಂದ ಎಚ್ಚರಿಕೆ

ಇದೇ ವೇಳೆ ತಂತ್ರಜ್ಞಾನ ಪರಿಣಿತ ರಾಮಸ್ವಾಮಿ ಅವರು ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನಕ್ಕೆಂದು ಕಾಲೇಜಿಗೆ .10 ಲಕ್ಷ ದಾನ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀರಾಮ್‌, ಕಾಲೇಜಿನ ಪ್ರಾಂಶುಪಾಲ ರವಿ, ಉಪಪ್ರಾಂಶುಪಾಲ ರವಿಶಂಕರ್‌ ಉಪಸ್ಥಿತರಿದ್ದರು.

click me!