ರಾಯರ ಮಠಕ್ಕೂ ತಟ್ಟಿದ ವಕ್ಫ್ ಬಿಸಿ! ಮಂತ್ರಾಲಯ ಜಾಗ ಆದೋನಿ ನವಾಬ್ ಕೊಟ್ಟಿದ್ದು ಎಂದ ಸಿಎಂ ಇಬ್ರಾಹಿಂ!

By Ravi Janekal  |  First Published Nov 17, 2024, 4:05 PM IST

ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿ, ಹಿಂದೂ ದೇಗುಲ, ಶಾಲೆಗಳ ಜಾಗ 'ವಕ್ಫ್ ಆಸ್ತಿ' ಎಂದು ಹೆಸರು ನಮೂದಾಗಿ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ವಕ್ಫ್ ವಿವಾದ ಮಂತ್ರಾಲಯಕ್ಕೂ ತಟ್ಟಿದೆ. 


ರಾಯಚೂರು ನ.17): ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರೈತರ ಪಹಣಿ, ಹಿಂದೂ ದೇಗುಲ, ಶಾಲೆಗಳ ಜಾಗ 'ವಕ್ಫ್ ಆಸ್ತಿ' ಎಂದು ಹೆಸರು ನಮೂದಾಗಿ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ವಕ್ಫ್ ವಿವಾದ ಮಂತ್ರಾಲಯಕ್ಕೂ ತಟ್ಟಿದೆ. 

ಹೌದು ಪ್ರಸ್ತುತ ರಾಜ್ಯಾದ್ಯಂತ ವಕ್ಫ್ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ 'ಮಂತ್ರಾಲಯ ಜಾಗ ನವಾಬರು ಕೊಟ್ಟಿದ್ದು' ಎಂಬ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಇಂದು ರಾಯಚೂರುಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು ಅದನ್ನ ವಕ್ಫ್ ಬೋರ್ಡ್ ಅಂತಾ ಯಾರಾದ್ರೂ ಕೇಳಲು ಹೋಗಿದ್ರಾ? ರಾಘವೇಂದ್ರ ಸ್ವಾಮೀಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದಿದ್ರು. ಆಗ ಮಂತ್ರಾಲಯ ಖಾಜಿಗೆ ಕೊಟ್ಟ ಜಾಗ ಕ್ಯಾನ್ಸಲ್ ಮಾಡಿ ಆಂದೋನಿ ನವಾಬ್‌ರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು. ಈ ಕಥೆ ನಾನು ಹೇಳಿದ್ದಲ್ಲ ಮಂತ್ರಾಲಯ ಸ್ವಾಮೀಜಿಗಳೇ ಹೇಳಿದ್ದಾರೆ ಎಂದರು.

Tap to resize

Latest Videos

undefined

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ಇನ್ನು ಶೃಂಗೇರಿ ಶಾರದಾಪೀಠದ ಮೇಲೆ ಪೇಶ್ವೆಯರು ದಾಳಿ ಮಾಡಿದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾಪೀಠವನ್ನು ಸ್ಥಾಪನೆ ಮಾಡಿದರು. ಇದು ಇತಿಹಾಸ, ಇದು ನಮ್ಮ ಪರಂಪರೆ, ಇದು ನಮ್ಮ ಸಂಸ್ಕೃತಿ. ಆದರೆ ಇದೆಲ್ಲ ಸಾಮರಸ್ಯ ಬಿಟ್ಟು ಈ ಚಿಲ್ಲರೇ ಮುಂಡೆವು ರಾಜಕಾರಣಕ್ಕೆ ಬಂದು ಈ ಸಂಸ್ಕೃತಿಯನ್ನ ಹಾಳು ಮಾಡುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.

ಜಮೀರ್ ಹೇಳಿಕೆ ತಪ್ಪು:

ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ 'ಕರಿಯ' ಪದ ಬಳಕೆ ಮಾಡಿರುವುದು ತಪ್ಪು. ಜಮೀರ್‌ನ ಬೆಳೆಸಿದ್ದೇ ಕುಮಾರಸ್ವಾಮಿ. ಈಗ ಅವರೇ ತಿರುಗಿಬಿದ್ದಿದ್ದಾರೆ. ಮಾಡಿದ್ದುಣ್ಣೋ ಮಹಾರಾಯ ಎಂದು ಹೆಚ್‌ಡಿಕೆಗೆ ಟಾಂಗ್ ನೀಡಿದರು ಮುಂದುವರಿದರು, ಕುಮಾರಸ್ವಾಮಿ ಸಾಕಿದ್ದು ಅವರಿಗೆ ಇಂದು ಮುಳುವಾಗಿದೆ ಇದು ದುರ್ದೈವ.
ನಾವು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು. ಜಮೀರ ಅಹ್ಮದ್ ಸಾಮಾನ್ಯ ವ್ಯಕ್ತಿಯಲ್ಲ. ಒಬ್ಬ ಮಂತ್ರಿ. ಅವರ ಅಭಿಪ್ರಾಯ ಸರ್ಕಾರದ ಅಭಿಪ್ರಾಯವಾಗಿರುತ್ತೆ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಆ ರೀತಿ ಮಾತನಾಡುವುದು ಆಮೇಲೆ ಕ್ಷಮೆ ಕೇಳುವುದು ಎಷ್ಟು ಸರಿ? ಹೀಗಾಗಿ ಒಕ್ಕಲಿಗರ ಸಮಾಜಕ್ಕೆ ನಾನೇ ಕ್ಷಮೆ ಕೇಳಿದ್ದೇನೆ ಎಂದರು.

ರಾಯಚೂರು: ಒಂದು ಕೋಣೆಗೆ 12 ಪ್ರಶ್ನೆ ಪತ್ರಿಕೆ, 24 ಅಭ್ಯರ್ಥಿಗಳು! ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮತ್ತೆ ಯಡವಟ್ಟು!

ಇನ್ನು ದೇವೇಗೌಡರ ಕುಟುಂಬ ಖರೀದಿ ಮಾಡುತ್ತೇನೆ ಎಂಬಂತ ಮಾತುಗಳನ್ನಾಡಿದ್ದಾರೆ. ಯಾರಿಗೆ ಯಾರು ಖರೀದಿ ಮಾಡಲು ಆಗುತ್ತಾ? ದೇವೇಗೌಡರು ಈ ದೇಶದ ಮಾಜಿ ಪ್ರಧಾನಿ. 93 ವರ್ಷದ ಹಿರಿಯರು, ಕನಿಷ್ಠ ಪಕ್ಷ ಅವರ ವಯಸ್ಸಿಗಾದರೂ ನಾವು ಗೌರವ ಕೊಡಬೇಕು. ರಾಜಕೀಯ ಸೈದ್ದಾಂತಿಕವಾಗಿ ಟೀಕೆ ಮಾಡಿ. ದೇವೇಗೌಡರೇ ನೀವು ಕೇವಲ ಮಕ್ಕಳು, ಮೊಮ್ಮಕ್ಕಳಿಗೆ ಸಪೋರ್ಟ್ ಮಾಡುತ್ತೀರಿ. ಅದು ತಪ್ಪು, ಪುತ್ರ ವಾತ್ಸಲ್ಯ ಜಾಸ್ತಿ ಇದೆ. ನೀವು ಸಾರ್ವಜನಿಕ ಸ್ವತ್ತು ಹೊರತು ಕುಟುಂಬದ ಸ್ವತ್ತಲ್ಲ. ಇದರ ಬಗ್ಗೆ ದೇವೇಗೌಡರನ್ನ ಪ್ರಶ್ನಿಸಬೇಕು ಆದರೆ ಅದನ್ನು ಬಿಟ್ಟು ನೀನು ಬಾ ಖರೀದಿ ಮಾಡ್ತೀನಿ ಅಂತ ಹೇಳೋದ್ರಲ್ಲಿ ಅರ್ಥವೇನಿದೆ ಎಂದು ಸಚಿವ ಜಮೀರ್ ಅಹ್ಮದ್‌ ಹೇಳಿಕೆಗೆ ಮಾತಿನಲ್ಲೇ ತಿವಿದರು.

click me!