ನಾನು ಗಂಡಾಗದಿದ್ರೂ ಚಿಂತೆಯಿಲ್ಲ, ಹೆಣ್ಣಾಗದಿದ್ರೂ ಪರವಾಗಿಲ್ಲ : ಜನರ ಪ್ರೀತಿ ಇದೆ

By Kannadaprabha News  |  First Published Feb 8, 2021, 9:05 AM IST

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಭಾವುಕರಾದರು. 


 ಚಾಮರಾಜನಗರ (ಫೆ.08):  ನಾನು ಗಂಡಾಗದಿದ್ದರೂ ಚಿಂತೆಯಿಲ್ಲ, ಹೆಣ್ಣಾಗದಿದ್ದರೂ ಪರವಾಗಿಲ್ಲ, ಮಕ್ಕಳನ್ನು ಹೆರದಿದ್ದರೂ ಚಿಂತೆಯಿಲ್ಲ. ಅದರೆ, ಕೋಟಿ ಕೋಟಿ ಜನರ ಪ್ರೀತಿ ವಿಶ್ವಾಸ ನನ್ನ ಮೇಲಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮಜೋಗತಿ ಭಾವುಕರಾಗಿ ನುಡಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ಸಾಮಾನ್ಯ ಕಲಾವಿದೆಯಾದ ನಾನು ಈ ಮಟ್ಟಕ್ಕೆ ಬೆಳೆದು ಅಕಾಡೆಮಿ ಅಧ್ಯಕ್ಷರಾಗಲು ಕೋಟ್ಯಂತರ ಕನ್ನಡಿಗರ ಆಶೀರ್ವಾದ ಕಾರಣ ಎಂದರು.

Latest Videos

undefined

ಮಂಜಮ್ಮ ಜೋಗತಿಗೆ ಒಲಿದ ಪದ್ಮಶ್ರೀ: ಬಳ್ಳಾರಿಗೆ ದೊರೆತ ಬಹುದೊಡ್ಡ ಪ್ರಶಸ್ತಿ..! .

ಅಭಿನಂದನಾ ಭಾಷಣ ಮಾಡಿದ ನಾದಬ್ರಹ್ಮ ಡಾ.ಹಂಸಲೇಖ, ಭಾರತೀಯ ಜಾನಪದ ಸಂಗೀತಕ್ಕೆ ಹೊಸ ಶಾಸ್ತ್ರೀಯತೆ ಸ್ಪರ್ಶ ನೀಡುವ ಮೂಲಕ ಅದನ್ನು ಮುಂದಿನ ತಲಾಂತರಗಳವರೆಗೆ ಉಳಿಸಿ, ಬೆಳೆಸುವ ಸಲುವಾಗಿ ಸಂಶೋಧನೆ ನಡೆಸಿ ದೇಸಿ ಸಂಗೀತ ಲಿಪಿ ಸಿದ್ಧಪಡಿಸಲಾಗಿದೆ ಎಂದರು.

ಅಭಿನಂದನಾ ಭಾಷಣ ಮಾಡಿದ ಹಂಸಲೇಖಾ, ಜನಪದಕ್ಕೀಗ ಬರವಣಿಗೆ ಬಂದಿದೆ. ಆದರೆ, ಇನ್ನೂ ಶಾಸೊತ್ರೕಕ್ತವಾಗಲ್ಲ. ಜಾನಪದ ತಾಳ ಮೇಳಕ್ಕೆ ದುಂದುಮೆ ಮತ್ತು ಸಂಗೀತ ಶಾಸ್ತ್ರ ಐದನಿ ಸಂಗೀತ ಶಾಸ್ತ್ರ ದ ಬಗ್ಗೆ ಅಧ್ಯಯನ ನಡೆಸಿ ಅದನ್ನು ಸಿದ್ಧಪಡಿಸಲಾಗಿದ್ದು, ಸಂಗೀತ ಪಠ್ಯ ಕ್ರಮಕ್ಕೆ ಸೇರಿಸುವ ನಿಟ್ಟಿನಲ್ಲಿ ಅನುಮೋದನೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜನಪದ ಕಲಾವಿದರಿಗೆ ಹಾಗೂ ರಾಜ್ಯದ ಇಬ್ಬರು ಜಾನಪದ ತಜ್ಞರಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಇಬ್ಬರಿಗೆ ಪುಸ್ತಕ ಬಹುಮಾನ ನೀಡಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಗೌರವಿಸಿದರು. ಸಚಿವ ಸುರೇಶ ಕುಮಾರ ಇದ್ದರು.

click me!