ದಕ್ಷಿಣ ಕನ್ನಡ: 30 ವರ್ಷಗಳ ಬಳಿಕ ಫಲ್ಗುಣಿ ನದಿಯಲ್ಲಿ ಪ್ರವಾಹ ಸ್ಥಿತಿ..!

By Kannadaprabha NewsFirst Published Aug 2, 2024, 11:35 AM IST
Highlights

ಕೊಡಗು ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಗುರುವಾರ ಮಳೆ ಇಳಿಮುಖವಾಗಿದ್ದು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದ ಕೆಲವೆಡೆ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ವರ್ಷಗಳ ಬಳಿಕ ಫಲ್ಗುಣಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಮಠ, ದೇವಸ್ಥಾನ ಹಾಗೂ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
 

ಬೆಂಗಳೂರು(ಆ.02):  ಕೊಡಗು ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಗುರುವಾರ ಮಳೆ ಇಳಿಮುಖವಾಗಿದ್ದು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದ ಕೆಲವೆಡೆ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ವರ್ಷಗಳ ಬಳಿಕ ಫಲ್ಗುಣಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಮಠ, ದೇವಸ್ಥಾನ ಹಾಗೂ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಆದೇ ರೀತಿ ಘಟಪ್ರಭಾ ನದಿ ನೀರಿನ ಮಟ್ಟ ಏರಿಕೆಯಾಗಿ ಬೆಳಗಾವಿಯ ಗೋಕಾಕ್‌ಗೆ ಮತ್ತೆ ನೀರು ನುಗ್ಗಿದ್ದು, ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿ ಚಾಮರಾಜನಗರ ಜಿಲ್ಲೆಯ 6 ತಾಲೂಕುಗಳು ನಡುಗಡ್ಡೆಯಂತಾಗಿವೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಾದ್ಯಂತ ಮತ್ತು ಉತ್ತರ ಕನ್ನಡದ ? ತಾಲೂಕು ಗಳಲ್ಲಿ ಶಾಲಾ-ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

Latest Videos

ಕರ್ನಾಟಕದಲ್ಲಿ ವರುಣನ ಆರ್ಭಟ: ಡ್ಯಾಂಗಳಿಂದ ಹೆಚ್ಚು ನೀರು ಬಿಡುಗಡೆ, ನದಿಗಳಲ್ಲಿ ಭಾರೀ ಪ್ರವಾಹ..!

ಮತ್ತೆ ನೆರೆ: 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರದಲ್ಲಿ ಭಾರೀ ಮಳೆಸುರಿಯುತ್ತಿದೆ. ಭಟ್ಕಳ, ಕಾರವಾರ ದಲ್ಲಿ ಮಂಗಳೂರು-ಗೋವಾ ಹೆದ್ದಾರಿ ಮೇಲೆ ನೀರು ಹರಿಯುತ್ತಿರುವುದರಿಂದ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಹೊನ್ನಾವರದ ಗುಂಡಬಾಳ, ಅಂಕೋಲಾದ ಕೇಣಿ ನವಿ ಪ್ರವಾಹದಿಂದ ತಗ್ಗು ಪ್ರದೇಶ ಜಲಾವೃತವಾ ಗಿದೆ. ಒಟ್ಟು 10 ಕಾಳಜಿ ಕೇಂದ್ರ ತೆರೆದಿದ್ದು 550 ಮಂದಿ ಆಶ್ರಯ ಪಡೆದಿದ್ದಾರೆ.

30 ವರ್ಷದ ಬಳಿಕ ಫಲ್ಗುಣಿಯಲ್ಲಿ ಪ್ರವಾಹ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಫಲ್ಗುಣಿ ನದಿ ಪ್ರವಾಹ ಉಕ್ಕೇರಿ ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿದೆ.ಗುರು ಪುರ ಪ್ರದೇಶವಂತೂ ಪ್ರವಾಹದಿಂದ ಅಕ್ಷ ರತಃ ನಲುಗಿಹೋಗಿದೆ. ಗುರುಪುರದ ವಜ್ರ ದೇಹಿ ಮಠದ ಆವರಣಕ್ಕೆ ನೀರು ನುಗ್ಗಿದ್ದು, ಗೋಶಾಲೆಯಲ್ಲಿದ್ದ ಗೋವುಗಳನ್ನು ಬೇರೆಡೆ ಕೊಂಡೊಯ್ದು ರಕ್ಷಿಸಲಾಯಿತು. ಇನ್ನು ವಾಮಂಜೂರಿನ ಶ್ರೀ ಅಮೃತೇಶ್ವರ ದೇವಾ ಲಯ ಸಂಪೂರ್ಣ ಜಲಾವೃತಗೊಂಡಿದೆ. ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಬಹುತೇಕ ಜಲಾವೃತಗೊಂಡು ದ್ವೀಪದಂತಾ ಗಿದೆ. ಉಡುಪಿ ಜಿಲ್ಲೆಯಲ್ಲಿ ಸೌವರ್ಣಿಕಾ, ಸೀತಾ, ಉಡುಪಿಯ ಸ್ಪರ್ಣ, ಕಾಪುವಿನ ಪಾಪನಾಶಿನಿ ನದಿಗಳು ತುಂಬಿ ಹರಿಯುತ್ತಿದ್ದು, ಇನ್ನು ಕಾರ್ಕಳದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಇನ್ನು ಮಲೆನಾಡಲ್ಲಿ ತಗ್ಗಿದ ನೆರೆ: 

ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ನದಿ ತೀರದ ಜನ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಗೋಕಾಕ್ಕೆ ಆತಂಕ: 

ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ಘಟ ಪ್ರಭಾ ನದಿ ನೀರು ಏರಿಕೆಯಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಮತ್ತೆ ನುಗ್ಗಿದೆ. ನೆರೆ ಇಳಿಕೆಯಾಗಿದೆ ಎಂದುಕೊಂಡು ಮನೆ ಸೇರಿದ್ದ ಸಂತ್ರಸ್ತರು ಮತ್ತೆ ಕಾಳಜಿ ಕೇಂದ್ರಕ್ಕೆ ವಾಪಸಾಗಿದ್ದಾರೆ. ಕೊಳ್ಳೇಗಾಲದ 6 ಗ್ರಾಮ ಜಲಾವೃತ: ಕಾವೇರಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಆರು ಗ್ರಾಮಗಳನ್ನು ನೀರು ಸುತ್ತುವರಿದಿದೆ. ಹಲವು ಮನೆಗಳಿಗೆ ನೀರು ನುಗ್ಗಿ, ಆತಂಕ ಸೃಷ್ಟಿಸಿದೆ.

ಬೆಂಗ್ಳೂರಲ್ಲಿ 1 ಗಂಟೆ ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತ..!

ಟಿಬಿ ಡ್ಯಾಂನಿಂದ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ತುಂಗಭದ್ರಾ ಜಲಾಶಯದಿಂದ ಇದೀಗ 2 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಹಂಪಿಯ ಸ್ಮಾರಕ, ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ, ಗಂಗಾವತಿ-ಕಂಪ್ಲಿ ಸೇಡುವೆ ಬಂದ್  199350 3.5 5 ಕ್ಯುಸೆಕ್, 2009ರಲ್ಲಿ 2.5 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ನೀರು ಹರಿಸಲಾಗುತ್ತಿದೆ. 2009ರಲ್ಲಿ ಮಂತ್ರಾಲಯದ ರಾಘವೇಂದ್ರ ಮಠ ಜಲಾವೃತಗೊಂಡು, ಮಂತ್ರಾಲಯದ ಮಠಾಧೀಶರನ್ನು ಹೆಲಿಕಾಪ್ಟರ್‌ ಮೂಲಕ ಸ್ಥಳಾಂತರಿಸಲಾಗಿತ್ತು.

ಶಿರೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭ: 

ಅಂಕೋಲಾ ಬಳಿಯ ಶಿರೂರಿನಲ್ಲಿ ಗುಡ್ಡಕುಸಿತದಿಂದ ಸಂಭವಿಸಿದ ದುರಂತದ ಬಳಿಕ ಇದೇ ಮೊದಲ ಬಾರಿಗೆ ಅಂದರೆ 16 ದಿನಗಳ ಬಳಿಕ ಮಂಗಳೂರು-ಗೋವಾ ಹೆದ್ದಾರಿಯಲ್ಲಿ ವಾಹನ ಸಂಚಾರ ಗುರುವಾರ ಆರಂಭವಾಗಿದೆ. ರಸ್ತೆಯ ಒಂದು ಕಡೆ ಮಾತ್ರ ವಾಹನಗಳು ಓಡಾಡುತ್ತಿವೆ. ಗುಡ್ಡ ಕುಸಿತವಾದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

click me!