ಇದು ತಂತ್ರಜ್ಞಾನದ ಯುಗ. ಇಲ್ಲಿನ ಎಲ್ಲ ವ್ಯವಹಾರಗಳು ಡಿಜಿಟಲ್ ಆಗಿದೆ. ಇಷ್ಟು ದಿನ ಬ್ಯಾಂಕ್ ಗಳಿಗೆ ಸೀಮಿತವಾಗಿದ್ದ, ಡಿಜಿಟಲ್ ಲಾಕರ್ ಸಿಸ್ಟಮ್ ಇದೀಗ ರೈಲ್ವೆ ಇಲಾಖೆಗೂ ಕಾಲಿಟ್ಟಿದೆ.
ಹುಬ್ಬಳ್ಳಿ (ಆ.14): ಇದು ತಂತ್ರಜ್ಞಾನದ ಯುಗ. ಇಲ್ಲಿನ ಎಲ್ಲ ವ್ಯವಹಾರಗಳು ಡಿಜಿಟಲ್ ಆಗಿದೆ. ಇಷ್ಟು ದಿನ ಬ್ಯಾಂಕ್ ಗಳಿಗೆ ಸೀಮಿತವಾಗಿದ್ದ, ಡಿಜಿಟಲ್ ಲಾಕರ್ ಸಿಸ್ಟಮ್ ಇದೀಗ ರೈಲ್ವೆ ಇಲಾಖೆಗೂ ಕಾಲಿಟ್ಟಿದೆ. ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯ ಹೊಸತನ ನೀಡುತ್ತಿರುವ ನೈರುತ್ಯ ರೈಲ್ವೆ ವಿಭಾಗ, ಈಗ ಉತ್ತರ ಕರ್ನಾಟಕದಲ್ಲಿಯೆ ಮೊದಲ ಬಾರಿಗೆ ಸೇಫ್ಟಿ ಲಾಕರ್ ವ್ಯವಸ್ಥೆ ಆರಂಭಿಸಿದ್ದು, ರಾಜ್ಯದ ಪ್ರಯಾಣಿಕರು ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೂ ಇದರ ಅನುಕೂಲ ಆಗಲಿದೆ.
ಪ್ರಯಾಣಿಕರ ಸುರಕ್ಷಿತೆ ಜೊತೆ ಅವರ ಲಗೇಜ್ ಸುರಕ್ಷೆತೆಯು ಅಷ್ಟೇ ಮುಖ್ಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೈರುತ್ಯ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರೇ ಸಿದ್ದಪಡಿಸಿಕೊಳ್ಳಬಹುದಾದ, ಡಿಜಿಟಲ್ ಸೇಫ್ಟಿ ಲಾಕರ್ ಗಳನ್ನು ಪರಿಚಯಿಸಲಾಗಿದೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಪ್ಲಾಟ್1 ರಲ್ಲಿ ಸೇಫ್ ಲಾಕ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭಿಸಲಾಗಿದೆ. ಈ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಹೆಚ್ಚಿನ ಭದ್ರತೆಯನ್ನು ಹೊಂದಿರುವ ಐಒಟಿ ಆಧಾರಿತ ಸ್ಮಾರ್ಟ್ಲಾಕರ್ಗಳಾಗಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ ಮೊದಲಿಗೆ ಹಣ ಪಾವತಿಸಿ ಈ ಲಗೇಜ್ ಲಾಕರ್ಗಳನ್ನು ಬಳಸಬಹುದು.
ಎಚ್‌ಎಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಚಿವ ಪರಮೇಶ್ವರ್
ಮೀಡಿಯಂ, ಲಾರ್ಜ್, ಎಸ್ಕ್ಟ್ರಾ ಲಾರ್ಜ್ ಸ್ಥಳಾವಕಾಶದಲ್ಲಿ ಈ ಲಾಕರ್ ಸೌಲಭ್ಯ ಒದಗಿಸಲಾಗುತ್ತಿದೆ. 6 ಗಂಟೆಯಿಂದ 24 ಗಂಟೆಯ ತನಕವೂ ಪ್ರಯಾಣಿಕರು ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. 40 ರೂಪಾಯಿ ಯಿಂದ ಅವಧಿಗೆ ತಕ್ಕಂತೆ 200 ರೂಪಾಯಿ ತನಕವೂ ಆನ್ ಲೈನ್ ನಲ್ಲಿ ಪೇಮೆಂಟ್ ಮಾಡಿ ಲಾಕರ್ ಸೌಲಭ್ಯ ಬಳಸಬಹುದು. ಈ ಸ್ಮಾರ್ಟ್ ಲಗೇಜ್ ಲಾಕರ್ಗಳು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದ್ದು. ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಲಾಕರ್ ಅನ್ನು ಆಯ್ಕೆ ಮಾಡಿಕೊಂಡು, ಡಿಜಿಟಲ್ ವಿಧಾನದ ಮೂಲಕ ಪಾವತಿಸಿ ತಮ್ಮ ಲಗೇಜ್ಗಳನ್ನು ಈ ಲಾಕರ್ಗಳಲ್ಲಿ ಸುರಕ್ಷಿತವಾಗಿ ಇಡಬಹುದು.
ಇಷ್ಟು ದಿನ ಸಾಕಷ್ಟು ನಿಂತುಕೊಂಡು, ಟೋಕನ್ ಪಡೆದು ಮ್ಯಾನುವೆಲ್ ನಲ್ಲಿ ಅಸುರಕ್ಷಿತವಾಗಿ ತಮ್ಮ ಲಗೇಜುಗಳನ್ನು ಇಡುತ್ತಿದ್ದ ಪ್ರಯಾಣಿಕರು, ರೈಲ್ವೆ ಇಲಾಖೆ ಈ ನ್ಯೂ ಐಡಿಯಾಗೆ ಫಿದಾ ಆಗಿದ್ದಾರೆ. ನೈರುತ್ಯ ರೈಲ್ವೆ ಇದನ್ನು ಸೊಲ್ಯೂಷನ್ಸ್ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆ ಸಹಕಾರದಿಂದ ಈ ಲಾಕರ್ ಗಳನ್ನು ತಯಾರಿಸಿದೆ. ಈ ಡಿಜಿಟಲ್ ಕ್ಲಾಕ್ ರೂಮ್ ಗುತ್ತಿಗೆಯನ್ನು ಟಿಕೆಟ್ ದರ ಹೊರತುಪಡಿಸಿದ ಆದಾಯ ಯೋಜನೆ ಯಡಿಯಲ್ಲಿ ನೀಡಲಾಗಿದೆ.
ಕಸಾಪಗೆ 1 ಕೋಟಿ ಸದಸ್ಯರ ನೋಂದಣಿ ಗುರಿ: ಮಹೇಶ್ ಜೋಶಿ
ಇದರಿಂದ ರೈಲ್ವೆಗೆ ಆದಾಯ ದೊರೆಯುವುದರ ಜತೆಗೆ ಪ್ರಯಾಣಿಕರ ಲಗೇಜ್ ಸುರಕ್ಷಿತವಾಗಿರಿಸಲು ಅನುಕೂಲವಾಗಿದೆ. ಡಿಜಿಟಲ್ ಪಾವತಿ ಸೌಲಭ್ಯವನ್ನು ಒಳಗೊಂಡ ಕ್ಲಾಕ್ ರೂಮ್ ಸೇವೆ ದೊರೆಯುವುದರಿಂದ ಬಹುತೇಕ ಪ್ರಯಾಣಿಕರ ಇದನ್ನು ಬಳಸಲು ಆಸಕ್ತಿ ತೊರುತ್ತಿದ್ದು. ಇದು ಪ್ರಾಯೋಗಿಕವಾಗಿದ್ದು ಹಂತ ಹಂತವಾಗಿ ಲಾಕರ್ ಗಳ ಹೆಚ್ಚಿಸುವ ಉದ್ದೇಶ ರೈಲ್ವೆ ವಿಭಾಗೀಯ ಮಂಡಳಿ ಹೊಂದಿದೆ. ಒಟ್ಟಾರೆ ಸದಾ ಒಂದಲ್ಲ ಒಂದು ರೀತಿಯ ಹೊಸತನಕದೊಂದಿಗೆ, ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿರುವ ನೈರುತ್ಯ ರೈಲ್ವೆ ವಿಭಾಗ, ಈಗ ಯುವ ಸಮುದಾಯದ ಚಿಂತನೆಗೆ ತಕ್ಕಂತೆ ಅಪ್ಡೇಟ್ ಆಗಿರುವುದು ಸಂತಸದ ವಿಷಯ.