
ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ
ಮಂಡ್ಯ(ಮಾ.24): ಮುಂಬಡ್ತಿ ಪಡೆಯಲು ರಾಜ್ಯ, ಹೊರ ರಾಜ್ಯದ ವಿಶ್ವವಿದ್ಯಾಲಯಗಳ ನಕಲಿ ಪದವಿ ಪ್ರಮಾಣ ಪತ್ರಗಳನ್ನು(Fake Degree Certificates) ಸಲ್ಲಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಪ್ರಮೋಷನ್‌ಗಾಗಿ(Promotion) ನಕಲಿ ಅಂಕಪಟ್ಟಿ ಸಲ್ಲಿಸಿದ ಪ್ರಕರಣ ಸಂಬಂಧ 7 ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ನಿಯಮಾನಸಾರ ಪರಿಶೀಲನೆ ನಡೆಸಿ ಸೇವೆಯಿಂದ ವಜಾಗೊಳಿಸುವಂತೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್(Shalini Rajanesh) ಸೂಚನೆ ನೀಡಿದ್ದಾರೆ.
ಎನಿದು ಪ್ರಕರಣ.?
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶನಾಲಯ ಹಂತದಲ್ಲಿ ಸಾಂಖ್ಯಿಕ ನಿರೀಕ್ಷಕ ವೃಂದದ ನೌಕರರು ಸಹಾಯಕ ಸಾಂಖ್ಯಿಕ ಅಧಿಕಾರಿ ವೃಂದಕ್ಕೆ ಹಾಗೂ ಸಹಾಯಕ ಸಾಂಖ್ಯಿಕ ಅಧಿಕಾರಿ ವೃಂದದಿಂದ ಸಹಾಯಕ ನಿರ್ದೇಶಕರ ವೃಂದಕ್ಕೆ ಮುಂಬಡ್ತಿ ಪಡೆಯಲು ವೃಂದ ಮತ್ತು ನೇಮಕಾತಿ(Recruitment) ನಿಯಮಗಳನ್ವಯ ನಿಗದಿಪಡಿಸಲಾದ ವಿದ್ಯಾರ್ಹತೆಯಂತೆ ವಿಶ್ವ ವಿದ್ಯಾನಿಲಯಗಳಿಂದ ಪದವಿ ಪ್ರಮಾಣ ಪತ್ರ ಸಲ್ಲಿಸಬೇಕು. ಆದ್ರೆ ಕೆಲ ಅಧಿಕಾರಿಗಳು ರಾಜ್ಯ, ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಮುಂಬಡ್ತಿ ಪಡೆದಿದ್ದರು. ಈ ಬಗ್ಗೆ 2020ರಲ್ಲಿ ಮಂಡ್ಯದ ಆರ್‌ಟಿಐ(RTI) ಕಾರ್ಯಕರ್ತ ರವೀಂದ್ರ ಅಂದಿನ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಕೆಸಿ ನಾರಾಯಣಗೌಡರಿಗೆ ದೂರು(Complaint) ಸಲ್ಲಿಸಿದ್ದರು. ಮಂಡ್ಯದ ಜೆ.ಪುಟ್ಟರಾಜು, ಬೀದರ್‌ನ ಪ್ರಶಾಂತ್, ಅಶೋಕ, ಅಬ್ದುಲ್ ರಬ್, ಬಾಲಾಜಿ ಬಿರಾದಾರ್, ರಾಜಕುಮಾರ, ಬಾಗಲಕೋಟೆಯ ಸತೀಶ್ ಕೆ.ನಾಯ್ಕ ಸೇರಿ 7 ಮಂದಿವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಮಂಡ್ಯದಲ್ಲಿ ಮತ್ತೆ ಸುಮಲತಾ-ಜೆಡಿಎಸ್ ಶಾಸಕರ ವಾಗ್ಯುದ್ದ, ಅಂಬರೀಶ್‌ಗೆ ಟಾಂಗ್ ಕೊಟ್ಟ MLA
ಪದವಿ ನೈಜತೆ ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳ ನಿರ್ಣಯ
ನಕಲಿ ಅಂಕಪಟ್ಟಿ ಸಲ್ಲಿಕೆ ಆರೋಪ ಕೇಳಿ ಬಂದ ಬಳಿಕ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಉನ್ನತ ಶಿಕ್ಷಣ ಇಲಾಖೆ(Department of Higher Education), ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಮುಂಬಡ್ತಿ ಸಮಿತಿ ತಂಡ 47 ಅಧಿಕಾರಿಗಳ ಪದವಿ ನೈಜತೆ ಪರಿಶೀಲನೆ ಸಭೆ ನಡೆಸಿತು. ಈ ವೇಳೆ 36 ಅಧಿಕಾರಿಗಳ ಪದವಿ ನೈಜತೆ ದೃಢಫಟ್ರೆ. 4 ಅಧಿಕಾರಿಗಳ ಪದವಿ ನಕಲು, 7 ಅಧಿಕಾರಿಗಳ ಅಂಕಪಟ್ಟಿಯ ನೈಜತೆ ದೃಢಪಟ್ಟಿಲ್ಲ. ಕೆಲ ಅಧಿಕಾರಿಗಳಿಗೆ ಪ್ರಮಾಣಪತ್ರ ನೀಡಿರುವ ಕೆಲವು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲಾಗಿದೆ. ಈ ಎಲ್ಲಾ ಅಂಶಗಳನ್ನು ಚರ್ಚಿಸಿದ ಸಮಿತಿಯಲ್ಲಿ ನಕಲಿ ಪ್ರಮಾಣಪತ್ರ ನೀಡಿರುವ ಅಧಿಕಾರಿಯ ಮುಂಬಡ್ತಿ ಹಿಂಪಡೆದು ಸೇವೆಯಿಂದ ವಜಾಗೊಳಿಸುವಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ.
ಮುಂಬಡ್ತಿಗೆ ಪದವಿ ಕಡ್ಡಾಯ ಬಳಿಕ ನಕಲಿ ಪ್ರಮಾಣ ಪತ್ರ ಸಲ್ಲಿಕೆ
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2010ರಲ್ಲಿ ತಿದ್ದುಪಡಿ ಮಾಡಿದೆ. ಈ ನಿಯಮದಂತೆ ಇಲಾಖೆಯಲ್ಲಿ ಗಣತಿದಾರರ ಹುದ್ದೆಯಿಂದ ಸಾಂಖ್ಯಿಕ ನಿರೀಕ್ಷಕರ ಹುದ್ದೆಗೆ, ಸಾಂಖ್ಯಿಕ ನಿರೀಕ್ಷಕರ ಹುದ್ದೆಯಿಂದ ಸಹಾಯಕ ಸಾಂಖ್ಯಿಕ ನಿರ್ದೇಶಕರ ಹುದ್ದೆಗೆ ಹಾಗೂ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಯಿಂದ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಪಡೆಯಲು ಗಣಿತಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯವೊಂದರಲ್ಲಿ ಪದವಿ ಹೊಂದುವುದನ್ನು ಕಡ್ಡಾಯಗೊಳಿಸಿದ ಬಳಿಕ ನಕಲಿ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಮುಂಬಡ್ತಿ ಪಡೆಯುವ ಪ್ರಕ್ರಿಯೆ ಆರಂಭವಾಯಿತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ