ಕರ್ನಾಟಕದಲ್ಲೂ 60 ಕಿಮೀಗೆ ಒಂದೇ ಟೋಲ್‌: ಸಚಿವ ಪಾಟೀಲ್‌

By Girish Goudar  |  First Published Mar 24, 2022, 7:48 AM IST

*   ಗಡ್ಕರಿ ನಿರ್ಧಾರದಿಂದ ಶೀಘ್ರವೇ ಗೊಂದಲ ನಿವಾರಣೆ
*  ಟೋಲ್‌ಗಳಲ್ಲಿ ಯಾವುದೇ ವಾಹನ 3 ನಿಮಿಷಕ್ಕಿಂತ ಹೆಚ್ಚು ಕಾಲ ನಿಲುಗಡೆಯಾಗಬಾರದು 
*  ಟೋಲ್‌ ದರ ನಿಗದಿಯನ್ನು ಪ್ರಾಧಿಕಾರವೇ ನಿರ್ಧರಿಸುತ್ತದೆ 


ಬೆಂಗಳೂರು(ಮಾ.24):  ಲೋಕಸಭೆಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರು 60 ಕಿ.ಮೀ.ಗೆ ಒಂದರಂತೆ ಟೋಲ್‌(Toll) ಸಂಗ್ರಹ ಕೇಂದ್ರ ಇರಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಟೋಲ್‌ ದರ ಕುರಿತ ಗೊಂದಲ ನಿವಾರಣೆಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌(CC Patil) ಹೇಳಿದರು.

ಬಿಜೆಪಿಯ(BJP) ಚಿದಾನಂದ ಎಂ. ಗೌಡ ಹಾಗೂ ಡಾ.ವೈ.ಎ. ನಾರಾಯಣಸ್ವಾಮಿ ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಟೋಲ್‌ಗಳಲ್ಲಿ ಯಾವುದೇ ವಾಹನ ಮೂರು ನಿಮಿಷಕ್ಕಿಂತ ಹೆಚ್ಚು ಕಾಲ ನಿಲುಗಡೆಯಾಗಬಾರದು ಎಂಬ ನಿಯಮ ಇದೆ. ಒಂದು ವೇಳೆ ಅಂತಹ ಸ್ಥಿತಿ ಕಂಡು ಬಂದರೆ ಇನ್ನೂ ಹೆಚ್ಚಿನ ಗೇಟ್‌ ನಿರ್ಮಿಸುವಂತೆ ಸೂಚನೆ ನೀಡಲಾಗುವುದು. ಗ್ರಾಮೀಣ ಭಾಗ ಇರುವ ಮತ್ತು ಅಗತ್ಯವಿರುವ ಕಡೆ ಮಾತ್ರ ಸರ್ವೀಸ್‌ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.

Tap to resize

Latest Videos

ಬೆಂಗಳೂರು ನಗರ ಪ್ರವೇಶಿಸಲು ಟೋಲ್ ಬಲು ದುಬಾರಿ

ನೆಲಮಂಗಲ-ತುಮಕೂರು ಷಟ್ಪಥ:

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4(Bengaluru-Pune National Highway-4) (ಹೊಸ ಸಂಖ್ಯೆ 48) ನೆಲಮಂಗಲದಿಂದ ತುಮಕೂರು ಭಾಗದ ರಸ್ತೆ 32.5 ಕಿ.ಮೀ. ಉದ್ದವಿದ್ದು, ಇದನ್ನು ನಾಲ್ಕು ಪಥದಿಂದ ಆರು ಪಥದ ರಸ್ತೆಯನ್ನಾಗಿ ಅಗಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Bengaluru International Airport) ಹೋಗುವ ಮಾರ್ಗದ ಟೋಲ್‌ ದರ ಅತ್ಯಂತ ಹೆಚ್ಚಾಗಿದೆ, ಕೇವಲ 18 ಕಿ.ಮೀ. ರಸ್ತೆಗೆ ನೂರಾರು ರು. ದರ ನಿಗದಿ ಮಾಡಲಾಗಿದೆ ಎಂದು ನಾರಾಯಣಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಟೋಲ್‌ ದರ ನಿಗದಿಯನ್ನು ಪ್ರಾಧಿಕಾರವೇ ನಿರ್ಧರಿಸುತ್ತದೆ. ದರ ಹೆಚ್ಚಳ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ 3 ತಿಂಗಳಲ್ಲಿ ಈ ಎಲ್ಲಾ ಟೋಲ್‌ ಪ್ಲಾಜಾ ಬಂದ್, ಗಡ್ಕರಿ ಮಹತ್ವದ ಘೋಷಣೆ!

ನವದೆಹಲಿ: ಟೋಲ್ ಗೇಟ್‌ನಲ್ಲಿ ಉದ್ದನೆಯ ಸಾಲುಗಳನ್ನು ನೋಡಿ ಪ್ರಯಾಣಿಕರು ಅನೇಕ ಬಾರಿ ಕೋಪಗಗೊಳ್ಳುತ್ತಾರೆ. ಹಲವು ಬಾರಿ ಈ ಸಾಲುಗಳಲ್ಲಿ ಜನರ ಸಮಯ ವ್ಯರ್ಥವಾಗುತ್ತಿದ್ದು, ಸರಿಯಾದ ಸಮಯಕ್ಕೆ ಸೂಕ್ತ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಮುಂಬೈನಲ್ಲಿ ಟೋಲ್ ಸಮಸ್ಯೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಮುಂಬೈನಂತಹ ಜನನಿಬಿಡ ನಗರದಲ್ಲಿ, ಟೋಲ್ ರಶ್‌ನಿಂದ ಮುಂಬೈ ಜನತೆ ಹೆಚ್ಚಾಗಿ ತೊಂದರೆಗೀಡಾಗಿದ್ದಾರೆ. ಆದರೆ, ಇದೀಗ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಟೋಲ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಸ್ಪರ 60 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಟೋಲ್‌ಗಳನ್ನು ಮುಂದಿನ ಮೂರು ತಿಂಗಳಲ್ಲಿ ಮುಚ್ಚಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ (NH) 60 ಕಿ.ಮೀ ಮೊದಲು ಯಾವುದೇ ಟೋಲ್ ತೆರಿಗೆಯನ್ನು ವಿಧಿಸಲಾಗುವುದಿಲ್ಲ. 60 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಎಲ್ಲ ಟೋಲ್‌ ಬೂತ್‌ಗಳನ್ನು ರದ್ದುಪಡಿಸಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.

100 ಮೀ. ಕ್ಯೂ ಇದ್ದರೆ ಟೋಲ್ ಕಟ್ಟಬೇಕಾಗಿಲ್ಲ, ಹೊಸ ರೂಲ್ಸ್!

ಟೋಲ್ ಮುಗಿಯುವುದಿಲ್ಲ, ಸದನದಲ್ಲಿ ಸಾರಿಗೆ ಸಚಿವರು ಹೇಳಿದ್ದೇನು?

ಮುಂದಿನ ದಿನಗಳಲ್ಲಿ ಹೆಚ್ಚಿನ ಟೋಲ್ ಸಂಗ್ರಹವನ್ನು ಜಿಪಿಎಸ್ ಮೂಲಕ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಟೋಲ್ ಕೊನೆಗೊಳ್ಳುತ್ತದೆ ಎಂದು ಇದರ ಅರ್ಥವಲ್ಲ. ಜಿಪಿಎಸ್ ಮೂಲಕ ನಿಮ್ಮ ವಾಹನದೊಂದಿಗೆ ಹೆದ್ದಾರಿಯಲ್ಲಿ ಎಲ್ಲಿಂದ ಪ್ರವೇಶಿಸಿದ್ದೀರಿ ಮತ್ತು ಯಾವ ಸ್ಥಳದಿಂದ ಹೊರಟಿದ್ದೀರಿ ಎಂಬುದನ್ನು ತಿಳಿಯಲಾಗುತ್ತದೆ, ಅದರ ಆಧಾರದ ಮೇಲೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದು ಹೇಳಿದರು. ಬರುವ ಹೊಸ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಟೋಲ್ ಯಾವಾಗ ಮನ್ನಾ ಮಾಡುತ್ತೀರಿ ಎಂದು ಕೆಲವರು ಕೇಳುತ್ತಿದ್ದಾರೆ ಎಂದ ನಿತಿನ್ ಗಡ್ಕರಿ, ನೀವು ಪಂಚತಾರಾ ಹೋಟೆಲ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವಾಗ ಮುಖಕ್ಕೆ ಸಿಗುತ್ತದೆಯೇ ಎಂದು ನಾನು ಹೇಳುತ್ತೇನೆ. ಫೋಕಾಟ್‌ನಲ್ಲಿ ಮಾಡಬೇಕಾದರೆ ರಾಮಲೀಲಾ ಮೈದಾನದಲ್ಲಿ ಮಾಡಬೇಕಿತ್ತು. ಇಲ್ಲಿ ನೀವು ಪಾವತಿಸಬೇಕಾಗುತ್ತದೆ. ಟೋಲ್ ಪಾವತಿಸಬೇಕಾಗುತ್ತದೆ ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು

ಸಚಿವ ನಿತಿನ್ ಗಡ್ಕರಿ ಪ್ರಕಾರ, ಮುಂಬರುವ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ತೀವ್ರವಾಗಿ ಕುಸಿಯುತ್ತದೆ ಮತ್ತು ಇದು ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಸರಿಸಮಾನವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಚಾಲನೆಯ ವೆಚ್ಚವು 10 ಪ್ರತಿಶತದಷ್ಟು ಕಡಿಮೆಯಾಗುತ್ತದೆ. ದೇಶದಲ್ಲಿ ಬ್ಯಾಟರಿ ಉತ್ಪಾದನೆ ಹೆಚ್ಚಿಸುವುದರೊಂದಿಗೆ ಹೊಸ ತಂತ್ರಜ್ಞಾನ ಆಧಾರಿತ ಬ್ಯಾಟರಿಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದರು.
 

click me!