ಕನ್ನಡದ ಮೊದಲ ನಿಘಂಟು ಬರೆದ ಕಿಟಲ್‌ ವಂಶಸ್ಥರು ಹಾವೇರಿಗೆ ಭೇಟಿ

By Govindaraj S  |  First Published Nov 11, 2022, 12:16 PM IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್‌ ಫರ್ಡಿನಾಂಡ್‌ ಕಿಟೆಲ್‌ ಅವರ ಕುಟುಂಬಸ್ಥರು, ಕಾರ್ಯಕ್ರಮ ರದ್ದಾದರೂ ಹಾವೇರಿಗೆ ಆಗಮಿಸಿ ಕನ್ನಡಿಗರ ಪ್ರೀತಿಗೆ ಮೂಕವಿಸ್ಮಿತರಾಗಿದ್ದಾರೆ.


ಹಾವೇರಿ (ನ.11): ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್‌ ಫರ್ಡಿನಾಂಡ್‌ ಕಿಟೆಲ್‌ ಅವರ ಕುಟುಂಬಸ್ಥರು, ಕಾರ್ಯಕ್ರಮ ರದ್ದಾದರೂ ಹಾವೇರಿಗೆ ಆಗಮಿಸಿ ಕನ್ನಡಿಗರ ಪ್ರೀತಿಗೆ ಮೂಕವಿಸ್ಮಿತರಾಗಿದ್ದಾರೆ. ಕಿಟೆಲ್‌ ಅವರ ಮರಿಮೊಮ್ಮಗಳು ಅಲ್ಮತ್‌ ಮೆಯೆರ್‌, ಮರಿಮೊಮ್ಮಗ ಯವೆಸ್‌ ಪ್ಯಾಟ್ರಿಕ್‌ ಮೆಯೆರ್‌, ಅವರ ಸಂಬಂಧಿ ಜಾನ್‌ ಫ್ರೆಡ್ರಿಕ್‌ ಸ್ಟಾರ್ಮರ್‌ ಗುರುವಾರ ನಗರಕ್ಕೆ ಆಗಮಿಸಿದ್ದಾರೆ. 

ದೇವಧರ ಗುರುಕೃಪಾ ಚಚ್‌ರ್‍ನಲ್ಲಿ ಕಿಟೆಲ್‌ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಕಿಟೆಲ್‌ ಮರಿಮೊಮ್ಮಗಳು, ಇಲ್ಲಿಯ ಜನರು ತೋರುತ್ತಿರುವ ಪ್ರೀತಿ, ಆದರಾತಿಥ್ಯಕ್ಕೆ ಮನಸೋತಿದ್ದೇವೆ. ನೀವು ಹಾಕಿದ ಏಲಕ್ಕಿ ಹಾರ, ಹೂವಿನ ಮಾಲೆ ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ವ್ಯಕ್ತಪಡಿಸಿದರು. 10 ದಿನ ಹುಬ್ಬಳ್ಳಿ, ಧಾರವಾಡದ ಕಿಟೆಲ್‌ ಕಾಲೇಜು, ಮಂಗಳೂರು, ಬೆಂಗಳೂರಿಗೆ ಕಿಟಲ್‌ ವಂಶಸ್ಥರು ಭೇಟಿ ನೀಡಲಿದ್ದಾರೆ.

Latest Videos

undefined

ಕೋವಿಡ್‌ ಬಳಿಕ ಮಕ್ಕಳಲ್ಲಿ ಹೆಚ್ಚಿದ ಮೊಬೈಲ್‌ ಗೀಳು!

ಹಾರಕ್ಕೆ ಮನಸೋತ ಕಿಟೆಲ್‌ ಕುಟುಂಬ: ನಗರಕ್ಕೆ ಆಗಮಿಸಿರುವ ಕನ್ನಡದ ಮೊದಲ ನಿಘಂಟು ರಚಿಸಿದ ರೆವರೆಂಡ್‌ ಫರ್ಡಿನಾಂಡ್‌ ಕಿಟೆಲ್‌ ಅವರ ಕುಟುಂಬಸ್ಥರು ಕನ್ನಡಿಗರ ಪ್ರೀತಿಗೆ ಮೂಕವಿಸ್ಮಿತರಾದರೆ, ಇಲ್ಲಿಯ ಏಲಕ್ಕಿ ಹಾರ, ಹೂವಿನ ಮಾಲೆಗೆ ಮನಸೋತರು. ಕಿಟೆಲ್‌ ಅವರ ಮರಿಮೊಮ್ಮಗಳು ಅಲ್ಮತ್‌ ಮೆಯೆರ್‌, ಮರಿಮೊಮ್ಮಗ ಯವೆಸ್‌ ಪ್ಯಾಟ್ರಿಕ್‌ ಮೆಯೆರ್‌, ಅವರ ಸಂಬಂಧಿ ಜಾನ್‌ ಫ್ರೆಡ್ರಿಕ್‌ ಸ್ಟಾರ್ಮರ್‌ ಗುರುವಾರ ನಗರಕ್ಕೆ ಆಗಮಿಸಿದ್ದಾರೆ. ಹಾವೇರಿಯಲ್ಲಿ ನಡೆಯಲಿರುವ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಪಾಲ್ಗೊಳ್ಳುವಂತೆ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ನೀಡಿದ ಆಹ್ವಾನದ ಮೇರೆಗೆ ಕಿಟೆಲ್‌ ಕುಟುಂಬಸ್ಥರು ಇಲ್ಲಿಗೆ ಆಗಮಿಸಿದ್ದಾರೆ.

ಈ ಹಿಂದೆ ಸಾಹಿತ್ಯ ಸಮ್ಮೇಳನ ದಿನಾಂಕವನ್ನು ನ. 11ರಿಂದ ಮೂರು ದಿನಗಳ ಕಾಲ ನಡೆಸುವ ಕುರಿತು ನಿರ್ಧಾರವಾಗಿತ್ತು. ಸಮ್ಮೇಳನ ಮುಂದೂಡಿಕೆಯಾದರೂ ಕಿಟೆಲ್‌ ಕುಟುಂಬ ಪೂರ್ವನಿಗದಿತ ಪ್ರವಾಸವನ್ನು ರದ್ದು ಮಾಡದೇ ಕನ್ನಡ ನಾಡಿನ ಸೊಬಗು ಸವಿಯಲು ಆಗಮಿಸಿದೆ. ಇಲ್ಲಿಯ ದೇವಧರ ಗುರುಕೃಪಾ ಚಚ್‌ರ್‍ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿಟೆಲ್‌ ಕುಟುಂಬದ ಸದಸ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 

ಈ ವೇಳೆ ಮನಬಿಚ್ಚಿ ಮಾತನಾಡಿದ ಕಿಟೆಲ್‌ ಅವರ ಮರಿಮೊಮ್ಮಗಳು, ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಜರ್ಮನಿಗೆ ಆಗಮಿಸಿ ತಮ್ಮ ಕುಟುಂಬಕ್ಕೆ ಆಹ್ವಾನ ನೀಡಿದ್ದರು. ಸಮ್ಮೇಳನ ಮುಂದೂಡಿಕೆಯಾದ ಬಗ್ಗೆ ನಮಗೆ ಮಾಹಿತಿ ನೀಡಲಾಗಿತ್ತು. ಆದರೂ ನಾವು ನಮ್ಮ ಪ್ರವಾಸ ರದ್ದು ಮಾಡದೇ ಇಲ್ಲಿಗೆ ಬಂದಿದ್ದೇವೆ. ಇಲ್ಲಿಯ ಜನರು ತೋರುತ್ತಿರುವ ಪ್ರೀತಿ, ಆದರಾತಿಥ್ಯಕ್ಕೆ ಮನಸೋತಿದ್ದೇವೆ. ನೀವು ಹಾಕಿದ ಏಲಕ್ಕಿ ಹಾರ, ಹೂವಿನ ಮಾಲೆ ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೂ ಬರುತ್ತೇವೆ: ಕಿಟೆಲ್‌ ಅವರ ಮರಿಮೊಮ್ಮಗ ಯವೆಸ್‌ ಪ್ಯಾಟ್ರಿಕ್‌ ಮೆಯೆರ್‌ ಮಾತನಾಡಿ, ಇಲ್ಲಿಯ ಸಂಸ್ಕೃತಿ, ಪ್ರಾಕೃತಿಕ ಸೌಂದರ್ಯ ಅದ್ಭುತವಾಗಿದೆ. ಇದೇ ಮೊದಲ ಬಾರಿಗೆ ಕನ್ನಡದ ನೆಲದಿಂದ ನಮ್ಮ ಕುಟುಂಬಕ್ಕೆ ಆಹ್ವಾನ ಬಂದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಕುಟುಂಬ ಭಾಗವಹಿಸಲಿದೆ. ಆ ಮೂಲಕ ನಾವು ಕನ್ನಡ ಭಾಷೆಗೆ ಗೌರವ ಸಲ್ಲಿಸಲಿದ್ದೇವೆ, ನಮ್ಮ ಕುಟುಂಬದ ಹಿರಿಯರಾದ ರೆವರೆಂಡ್‌ ಫರ್ಡಿನಾಂಡ್‌ ಕಿಟಲ್‌ ಅವರು ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಆ ಗೌರವ ನಮ್ಮ ಕುಟುಂಬಕ್ಕೆ ಮುಂದುವರೆದುಕೊಂಡು ಬಂದಿದೆ. ಕರ್ನಾಟಕ ಮತ್ತು ಕನ್ನಡದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಮ್ಮ ಕುಟುಂಬದವರು ಕನ್ನಡವನ್ನು ಕಲಿಯಲಿದ್ದೇವೆ. 

ಪ್ರಧಾನಿ ಮೋದಿ ಕಾರ್ಯಕ್ರಮ ಬರೀ ಗಿಮಿಕ್‌: ಸಿದ್ದು ಟೀಕೆ

ನಮಗೆ ಕನ್ನಡದ ನೆಲವನ್ನು ಸ್ಪರ್ಶಿಸುವ ಭಾಗ್ಯ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದಿಸುತ್ತೇವೆ ಎಂದು ಹೇಳಿದರು. ಇನ್ನು 10 ದಿನಗಳ ಕಾಲ ಕರ್ನಾಟಕದಲ್ಲೇ ಇರುತ್ತೇವೆ. ಹುಬ್ಬಳ್ಳಿ, ಧಾರವಾಡದ ಕಿಟೆಲ್‌ ಕಾಲೇಜು, ಮಂಗಳೂರು, ಬೆಂಗಳೂರಿಗೆ ತೆರಳಿ ಕಿಟೆಲ್‌ ನಡೆದಾಡಿದ ಸ್ಥಳಗಳಿಗೆ ಭೇಟಿ ನೀಡಲಿದ್ದೇವೆ. ಜನವರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲೂ ನಮ್ಮ ಕುಟುಂಬದವರು ಭಾಗಿಯಾಗಲಿದ್ದೇವೆ ಎಂದು ಹೇಳಿದರು. ಕಸಾಪ ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಮಾಧುರಿ ದೇವಧರ, ವಿಜಯ ನೇಕರ, ಮನೋಜಕುಮಾರ ಪುನೀತ್‌ ಇತರರು ಇದ್ದರು.

click me!