
ಬಳ್ಳಾರಿ (ಆ.5): 'ದರ್ಶನ್ ನೋಡಲು ಜೈಲೊಳಗೆ ಬಿಡೋದಾದ್ರೆ ಮದುವೆ ಆಗೋದಕ್ಕೂ ರೆಡಿ' ಎಂದು ದರ್ಶನ್ ಮಹಿಳಾ ಅಭಿಮಾನಿ ಜೈಲಿನ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದಾಗ ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮೀ. ಆದರೆ ಅಂದು ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಇದೀಗ ದರ್ಶನ್‌ರನ್ನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿರುವ ಹಿನ್ನೆಲೆ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ. ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ವರಾತ ತೆಗೆದಿರುವ ಮಹಿಳೆ.
ರೇಣುಕಾಸ್ವಾಮಿ ಎದೆ,ವೃಷಣ ಮೇಲೆ ಕಾಲಿಟ್ಟು ಕ್ರೌರ್ಯ ಮೆರೆದಿದ್ದ ದರ್ಶನ್!
ಆದರೆ ಜೈಲು ನಿಯಮ ಪ್ರಕಾರ ದರ್ಶನ್ ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದ ಜೈಲು ಸಿಬ್ಬಂದಿ. 'ಹಾಗಾದ್ರೆ ಸಂಬಂಧಿಗಳಿಗೆ ಮಾತ್ರ ಬಿಡೋದಾದರೆ ನಾನು ದರ್ಶನ್‌ನರನ್ನ ಮದುವೆಯಾಗುತ್ತೇನೆ ಎಂದ ಮಹಿಳೆ. ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನ ಪ್ರಶ್ನಿಸಿದ ಮಹಿಳೆ. ಮಹಿಳೆಯ ಮಾತು ಕೇಳಿ ಜೈಲು ಸಿಬ್ಬಂದಿ ಶಾಕ್.
ರಾಮ ಕೂಡ ನಾಲ್ಕ್ ಕೊಲೆ ಮಾಡಿದ್ದ, ದರ್ಶನ್ ಮಾಡಿದ್ರೆ ತಪ್ಪೇನು: ಕಿಲ್ಲಿಂಗ್ ಸ್ಟಾರ್ ಪರ ಮಾತನಾಡಿದ ಪುಂಗ ಉಮೇಶ್!
ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಕುಳಿತಿರುವ ಮಹಿಳೆ. ಜೈಲು ಸಿಬ್ಬಂದಿ ಮಾತಿಗೆ ಜಗ್ಗದ ಮಹಿಳೆ. ನನ್ನ ನೆಚ್ಚಿನ ನಟ ದರ್ಶನ್ ರನ್ನ ನೋಡಲೇಬೇಕು, ಹಣ್ಣು ಕೊಟ್ಟು ಮಾತಾಡಿಸಿ ಹೋಗಲೇಬೇಕು ಅದಕ್ಕಾಗಿ ನಾನು ದರ್ಶನ್‌ರನ್ನೇ ಮದುವೆಯಾಗಲು ಸಿದ್ಧ ಎನ್ನುತ್ತಿರುವ ಮಹಿಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ