ದೇಶದಲ್ಲಿ ಅನ್ನಭಾಗ್ಯ ಯೋಜನೆಯ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ, ಅದಕ್ಕಿಂತ ಮುಂಚಿತವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತ್ಯೋದಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.29): ರಾಜ್ಯದಲ್ಲಿ ನಮ್ಮ ಸರ್ಕಾರ ಇರುವಾಗ ನಮ್ಮನ್ನ 40% ಸರ್ಕಾರ ಅಂತ ಎಲ್ಲೆಡೆ ತಮಟೆ ಹೊಡೆದುಕೊಂಡು ಬಂದ್ರಿ. ಅದನ್ನೇ ಬಳಸಿಕೊಂಡು ಅಧಿಕಾರಕ್ಕೂ ಬಂದ್ರಿ. ಆದರೆ ಈಗ ನೀವು ಏನು ಮಾಡುತ್ತಿದ್ದೀರಿ ನಿಮ್ಮದು ಪೋಸ್ಟಿಂಗ್ ಸರ್ಕಾರವೇ. ಮೂಲವಾಗಿ ಅನ್ನಭಾಗ್ಯ ಆರಂಭಿಸಿದವರು ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಡಿಕೇರಿಯಲ್ಲಿ ನಡೆದ ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆ ಜನರಿಗೆ ತಿಳಿಸುವ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳ ವರ್ಗಾವಣೆ ಮಾಡುವ ವಿಚಾರದಲ್ಲಿ ಎಷ್ಟು ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದೀರಿ ಹೇಳಿ. ವರ್ಗಾವಣೆ ಮಾಡುವುದಕ್ಕೆ ಒಂದೊಂದು ಹುದ್ದೆಗೆ 5 ಜನರನ್ನು ಶಿಫಾರಸು ಮಾಡುತ್ತಿದ್ದೀರಿ. ಇದನ್ನು ನೋಡಿದರೆ ನಿಮ್ಮದು ಪೋಸ್ಟಿಂಗ್ ಸರ್ಕಾರ ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ನಿಮ್ಮದು ಪೋಸ್ಟಿಂಗ್ ಸರ್ಕಾರ ಎಂದು ಲೇವಡಿ ಮಾಡಿದರು. ನೀವು ಎಷ್ಟು ಪರ್ಸೆಂಟ್ ತಗೊಂಡು ಪೋಸ್ಟಿಂಗ್ ಮಾಡ್ತಾ ಇದ್ದೀರಾ, ಅದನ್ನು ಜನರಿಗೆ ಹೇಳಲಿ ಎಂದು ಪ್ರತಾಪ್ ಸಿಂಹ ಆಗ್ರಹಪಡಿಸಿದರು. ಅವರ ಶಿಫಾರಸು ಪತ್ರ ನೋಡಿದಾಗ ಅವರ ಅಂಗಡಿ ಓಪನ್ ಆಗಿದೆ ಎನ್ನುವುದು ಜಗತ್ ಜಾಹೀರಾಗಿದೆ. ಇದನ್ನು ಕಾಂಗ್ರೆಸ್ ಸರ್ಕಾರ ಒಪ್ಫಿಕೊಳ್ಳಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
undefined
ಮಳೆಗಾಲದಲ್ಲಿಯೂ ಒಣಗಿನಿಂತ ಪಶ್ಚಿಮ ಘಟ್ಟದ ಕಾಡು, ನದಿಗಳು: ಇದು ಅರಣ್ಯನಾಶದ ಮರುಹೊಡೆತ
5 ಕೆಜಿ ಹಣವಲ್ಲ, 10 ಕೆಜಿಯ ಹಣ ಕೊಡಿ: ನೀವು ಗ್ಯಾರೆಂಟಿ ಘೋಷಣೆ ಮಾಡುವಾಗ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ರಿ ಸಿದ್ದರಾಮಯ್ಯ ಸರ್, ಕೊಟ್ಟ ಮಾತಿನಂತೆ 10 ಕೆ.ಜಿ. ಅಕ್ಕಿಗೆ 34 ರೂಪಾಯಿಯಂತೆ ಜನರಿಗೆ ಹಣ ಕೊಡಿ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರೇ ಈಗಲಾದರೂ ನಿಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ನೀವು ಗ್ಯಾರಂಟಿಯಲ್ಲಿ ಕೊಡುತ್ತೀವಿ ಅಂದಿದ್ದು 10 ಕೆಜಿ. ಈಗ ಯಾಕೆ 5 ಕೆಜಿ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 5 ಕೆಜಿ ಅಕ್ಕಿ ಕೇಂದ್ರ ಕೊಡುತ್ತಿರುವುದು ತಾನೆ. ನೀವು ನುಡಿದಂತೆ 10 ಕೆಜಿಗೆ 34 ರೂಪಾಯಿಯ ಹಾಗೆ ಹಣ ಕೊಡಿ ಎಂದರು.
ಕೇಂದ್ರದ ಅಕ್ಕಿಗೆ ಅನ್ನಭಾಗ್ಯ ಲೇಬಲ್ ಹಾಕಿದ್ರಿ: ಮೋದಿಯವರು ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿರುವ ನೀವು ಗ್ಯಾರಂಟಿ ಘೋಷಿಸುವಾಗ ಕೇಂದ್ರದ ಮೊದೀಜಿ ನೇತೃತ್ವದ ಸರ್ಕಾರ ಕೊಡುತ್ತಿರುವುದನ್ನು ಸೇರಿಸಿ ಹೇಳಿದ್ರಾ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿಗೆ ಅನ್ನಭಾಗ್ಯ ಲೇಬಲ್ ಹಾಕಿದ್ರಿ. ಈಗಲಾದರೂ ಸತ್ಯ ಒಪ್ಪಿಕೊಂಡಿದ್ದೀರ. ಕೇಂದ್ರದ ಅಕ್ಕಿಯ ಪಾಲಿನ ಬಗ್ಗೆ ಸತ್ಯ ಒಪ್ಪಿಕೊಂಡಿದ್ದೀರ. ಅದಕ್ಕೆ ಸಿಎಂ ಸಿದ್ದರಾಮಯ್ಯನವರೇ ನಿಮಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.
ಮಾಜಿ ಶಾಸಕ ರೇಣುಕಾಚಾರ್ಯಗೆ ನೋಟಿಸ್ ಜಾರಿ: ವಾರದೊಳಗೆ ಉತ್ತರಿಸಲು ಗಡುವು
ಅಂತ್ಯೋದಯ ಅನ್ನಭಾಗ್ಯ ಪಿತಾಮಹ ವಾಜಪೇಯಿ: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಹಕ್ಕು ಕಾಯ್ದೆ ಜಾರಿಗೆ ತಂದೆವು ಎಂದು ಮತ್ತೆ ಸುಳ್ಳು ಹೇಳುತ್ತಿದ್ದೀರಾ ಸಿದ್ದರಾಮಯ್ಯನವರೇ ಅಂತ್ಯೋದಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ವಾಜಪೇಯಿ ಅವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಸಿವು. ಶಿಕ್ಷಣ ಮುಂತಾದ ವಿಷಯಗಳಲ್ಲಿ ಚರ್ಚೆಯಾದಾಗ ಆಹಾರದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು 15 ವರ್ಷಗಳಲ್ಲಿ ಹಸಿವು ನೀಗಿಸಬೇಕೆಂಬ ಹಿನ್ನೆಲೆಯಲ್ಲಿ ಅಂತ್ಯೋದಯ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಅಂತ್ಯೋದಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ವಾಜಪೇಯಿಯವರು ಎನ್ನುವುದು ಸಚಿವ ಪರಮೇಶ್ವರ್ ಅವರಿಗೂ ಗೊತ್ತಿದೆ. ಈಗ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿಯನ್ನು ಕೊಡುತ್ತಿದೆ ಎನ್ನುವುದನ್ನು ಅನಿವಾರ್ಯವಾಗಿ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಆ ಸತ್ಯವನ್ನು ಸಚಿವ ಪರಮೇಶ್ವರ್ ಅವರು ಕೂಡ ಒಪ್ಪಿಕೊಳ್ಳಲಿ ಎಂದರು.