ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ತಡೆಯಲು ಅರಣ್ಯ ಇಲಾಖೆಯು ಆನೆ ಕಾರ್ಯಪಡೆ ರಚಿಸಿ ಸ್ಥಳೀಯ ಯುವಕರಿಗೆ ಕಾಡಾನೆಗಳ ನಿಯಂತ್ರಣ ತರಬೇತಿ ನೀಡಲು ಮುಂದಾಗಿದೆ.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಜೂ.29): ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ರೇಷ್ಮೆನಾಡು ರಾಮನಗರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ಆದ್ದರಿಂದ ನಿರಂತರ ಕಾಡಾನೆ ದಾಂದಲೆಗೆ ಕಾಡಂಚಿನ ಗ್ರಾಮಸ್ಥರು, ರೈತರು ಕಂಗಾಲಾಗಿದ್ದು ಅರಣ್ಯ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆಯು ಆನೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಸ್ಥಳೀಯ ಯುವಕರಿಗೆ ಕಾಡಾನೆಗಳನ್ನು ನಿಯಂತ್ರಣ ಮಾಡಲು ತರಬೇತಿ ನೀಡಲು ಮುಂದಾಗಿದೆ.
ರಾಮನಗರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂವರು ರೈತರನ್ನು ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಕಾಡಾನೆ ಹಾವಳಿ ತಡೆಯಲು ಅರಣ್ಯ ಇಲಾಖೆ ಹೊಸ ಪ್ಲಾನ್ ಸಿದ್ಧಪಡಿಸಿದೆ. ಎಲಿಫ್ಯಾಂಟ್ ಟಾಸ್ಕ್ ಪೋರ್ಸ್ ಮೂಲಕ ಕಾಡಾನೆ ದಾಳಿ ತಡೆಯಲು ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಜುಲೈನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!
ಟಾಸ್ ಫೋರ್ಸ್ ನಲ್ಲಿ 40 ಜನರ ಅನುಭವಿ ತಂಡ ರಚನೆ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಾಡಂಚಿನ ಗ್ರಾಮಗಳಲ್ಲಿ ನಿತ್ಯ ಬೆಳೆ ನಾಶ, ಜಾನುವಾರುಗಳ ಮೇಲೆ ದಾಳಿ ಹಾಗೂ ಜನರ ಜೀವಕ್ಕೂ ಕಾಡಾನೆಗಳು ಕಂಟಕವಾಗಿವೆ. ಜಿಲ್ಲೆಯ ಕಬ್ಬಾಳು, ನರಿಕಲ್ಲು ಗುಡ್ಡು, ತೆಂಗಿನಕಲ್ಲು ಗುಡ್ಡ, ಹಂದಿಗುಂದಿ, ಅಚ್ಚಲು ಸೇರಿದಂತೆ ಹಲವು ಕಿರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಬೆಳೆಗಳನ್ನ ತಿಂದು ನಾಶಪಡಿಸುತ್ತಿವೆ. ಇನ್ನೂ ಜಮೀನಿಗೆ ತೆರಳುವ ರೈತರ ಮೇಲೂ ಕಾಡಾನೆಗಳು ದಾಳಿ ಮಾಡುತ್ತಿದ್ದು, ಕಳೆದ 20ದಿನಗಳಲ್ಲಿ 3 ಮಂದಿ ರೈತರು ಪ್ರಾಣ ಕಳೆದುಕೊಂಡಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
40 ಸ್ಥಳೀಯ ಯುವಕರಿಗೆ ವಿಶೇಷ ತರಬೇತಿ: ನಿರಂತರ ಕಾಡಾನೆ ದಾಳಿ ರೈತರಿಗಷ್ಟೇ ಅಲ್ಲದೇ ಅರಣ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಕಾಡಾನೆಗಳ ತಡೆಗೆ ಬ್ರೇಕ್ ಹಾಕಲು ಹೊಸ ತಂತ್ರವನ್ನ ಅಳವಡಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆ ಎಲಿಫ್ಯಾಂಟ್ ಟಾಸ್ಕ್ ಪೋರ್ಸ್ ರಚನೆ ಮಾಡಲು ಮುಂದಾಗಿದೆ. ಸ್ಥಳೀಯವಾಗಿಯೇ 40 ಯುವಕರನ್ನು ನೇಮಕ ಮಾಡಿ, ಆನೆಗಳನ್ನು ನಿಯಂತ್ರಿಸುವ ಬಗ್ಗೆ ಕುರಿ ವಿಶೇಷ ತರಬೇತಿ ಕೂಡಲು ನಿರ್ಧರಿಸಿದೆ. ಪ್ರತಿ ತಂಡದಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಅರಣ್ಯ ಇಲಾಖೆಯ ಗಾರ್ಡ್ಸ್ ಇರಲಿದ್ದು, ಅನೆ ಇರುವ ಸ್ಥಳಕ್ಕೆ ತಕ್ಷಣ ತಲುಪಲು ವಾಹನ ವ್ಯವಸ್ಥೆ ಮಾಡಲಾಗಿದೆ. ಆನೆಗಳು ನಾಡಿಗೆ ಯಾವ ಮಾರ್ಗದಿಂದ ಬರಲಿವೆ? ಚಲನವಲನ ಹೇಗಿದೆ ಎಂಬುದರ ಮಾಹಿತಿ ಹೊಂದಿರಲಿರುವ ಕಾರ್ಯಪಡೆಯು, ಅನೆಗಳನ್ನು ಮತ್ತೆ ಕಾಡಿಗೆ ಹೋಗುವಂತೆ ಮಾಡಿ ಪ್ರಾಣಹಾನಿ ಮತ್ತು ಬೆಳೆಹಾನಿಯಾಗದಂತೆ ನೋಡಿಕೊಳ್ಳಲಿದೆ.
ಫ್ರೀ ಬಸ್ ಹತ್ಕೊಂಡು ಹೆಂಡ್ತಿ ಊರಿಗೋದ್ಲು ಅಂತ, ಬಸ್ ಗಾಲಿಗೆ ತಲೆಕೊಟ್ಟ ಪತಿರಾಯ
20ಕ್ಕೂ ಹೆಚ್ಚು ಪುಂಡಾನೆಗಳ ಸೆರೆ: ಇನ್ನೂ ರಾಮನಗರ ಜಿಲ್ಲೆಯ ಸಾತನೂರು, ಕಾವೇರಿ ವನ್ಯ ಜೀವಿ ಧಾಮ, ಸಂಗಮ, ಮೇಕೆದಾಟು ಅರಣ್ಯ ಪ್ರದೇಶಗಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಪುಂಡಾನೆಗಳನ್ನ ಗುರುತು ಮಾಡಿರೋ ಅರಣ್ಯ ಇಲಾಖೆ ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ವಿಭಾಗದ ವಿಶೇಷ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಿದೆ. ಅಲ್ಲದೇ ಡ್ರೋನ್ ಮುಖಾಂತರ ಆನೆಗಳ ಮೇಲೆ ನಿಗಾ ವಹಿಸಿ ಕಾಡಿಗೆ ಅಟ್ಟುವ ಕೆಲಸ ಮಾಡಲಿದೆ.
ಒಟ್ಟಾರೆಯಾಗಿ ಕಳೆದ ಕೆಲವು ವರ್ಷಗಳಿಂದ ಆನೆ ದಾಳಿಗೆ ಕಾಡಂಚಿನ ಗ್ರಾಮದವರು ಜೀವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆ ಹೊಸ ಪ್ರಯೋಗಕ್ಕೆ ಯಶಸ್ವಿಯಾಗಿ ಕಾಡಂಚಿನ ಗ್ರಾಮದವರು ಜೀವ ಭಯ ಬಿಟ್ಟು ಇನ್ನಾದರೂ ನೆಮ್ಮದಿಯ ಜೀವನಕ್ಕೆ ಕಾರಣವಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.