
ಯಾದಗಿರಿ : ಹಜ್ ಹಾಗೂ ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮದ್ ಯಾದಗಿರಿಯಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಅವರ ವಿರುದ್ಧ ಧಿಕ್ಕಾರ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ.
ವಿಮೆ ಹಣ ಸರಿಯಾಗಿ ಕೊಡಲು ಸಾಧ್ಯವಾಗದಿದ್ದರೆ ಕಂತು ತುಂಬುವುದನ್ನು ಯಾಕೆ ಕಡ್ಡಾಯ ಮಾಡುತ್ತೀರಿ ಎಂದು ಸಚಿವರಿಗೆ ರೈತರು ಪ್ರಶ್ನೆ ಮಾಡಿದ್ದು, ಖಾಸಗಿ ವಿಮೆ ಕಂಪನಿಗಳ ಉದ್ದಾರಕ್ಕೆ ರೈತರಿಗೆ ವಿಮೆ ಕಡ್ಡಾಯ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಫೈಟ್ ಶಾಸಕ ಗಣೇಶ್ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು..?
2015ರ ವಿಮೆ ಹಣವನ್ನೂ ಇನ್ನೂ ಕೊಟ್ಟಿಲ್ಲ ಎಂದು ರೈತರು ಪ್ರಶ್ನೆ ಮಾಡಿದ್ದು, ಈ ವೇಳೆ 2 ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಜಮೀರ್ ಅಹಮದ್ ಭರವಸೆ ನೀಡಿದರು.
ಆದರೆ ಸಚಿವರ ಭರವಸೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ಕಳೆದ 4 ವರ್ಷಗಳಿಂದ ಸಮಸ್ಯೆ ಬಗೆಹರಿಸದವರು 2 ತಿಂಗಳಲ್ಲಿ ಎಂಬುದನ್ನು ನಾವು ನಂಬಲು ಸಾಧ್ಯವೆ ಎಂದು ಸರ್ಕಾರದ ನಿಧಾನನೀತಿಗೆ ಅಸಮಾಧಾನ ವ್ಯಕ್ತಪಡಿಸಿದರು.
'ನಾನು ಸೀನಣ್ಣ ಆಗಾಗ ಗಲಾಟೆ ಮಾಡ್ಕೋತ್ತಿವಿ.. ಇದು ಹಾಗೆ!'
ಇನ್ನು ಸಂವಾದ ನಡೆಯುತ್ತಿದ್ದಂತೆ 45 ನಿಮಿಷಗಳಲ್ಲೇ ಸಚಿವ ಜಮೀರ್ ಸಭೆಯಿಂದ ಹೊರಡಲು ಅಣಿಯಾಗಿದ್ದು, ಇದರಿಂದ ಅಸಮಾಧಾನಗೊಂಡ ರೈತರು ಅವರ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದರು. ಸಭೆ ನಡೆಸಿದರೂ ಕೂಡ ರೈತರ ಎಲ್ಲಾ ಸಮಸ್ಯೆ ಆಲಿಸದ್ದಕ್ಕೆ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ