
ಬೆಂಗಳೂರು(ಜೂ.28): ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲು ದರವನ್ನು ಉದ್ಘಾಟನೆಯಾದ ದಿನವೇ ಪರಿಷ್ಕರಣೆ ಮಾಡಿದ್ದು, ಹೊಸ ದರವನ್ನು ಪ್ರಕಟಿಸಿದೆ.
ಈ ಮೊದಲು ಕೆಎಸ್‌ಆರ್ ರೈಲು ನಿಲ್ದಾಣದಿಂದ ಯಶವಂತಪುರ ನಿಲ್ದಾಣಕ್ಕೆ 410 ರು. ನಿಗದಿ ಮಾಡಲಾಗಿತ್ತು. ಈಗ 365ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಧಾರವಾಡದಿಂದ ಹುಬ್ಬಳ್ಳಿಗೆ ಇದೇ ರೀತಿ ಕಡಿಮೆ ಮಾಡಲಾಗಿದೆ. ಆದರೆ ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಇದೇ ನಿಲ್ದಾಣಗಳ ನಡುವೆ ಸಂಚರಿಸಲು ಈ ಮೊದಲು ನಿಗದಿ ಮಾಡಿದ್ದ 545ರು. ಬದಲು 690 ರು.ಗೆ ಹೆಚ್ಚಿಸಲಾಗಿದೆ. ಜತೆಗೆ ಪ್ರತಿ ನಿಲ್ದಾಣಗಳ ನಡುವಿನ ಪ್ರಯಾಣದ ದರವನ್ನು 20 ರು. ಹೆಚ್ಚಿಸಲಾಗಿದೆ.
ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ
*ಬೆಂಗಳೂರಿಂದ ಧಾರವಾಡ (ರೈ.ಸಂ. 20661) ಎಸಿ ಚೇರ್‌ಕಾರ್:
ಬೆಂಗಳೂರು ಕೆಎಸ್‌ಆರ್-ಯಶವಂತಪುರ . 365, ಬೆಂಗಳೂರು- ದಾವಣಗೆರೆ .935, ಕೆಎಸ್‌ಆರ್ ಬೆಂಗಳೂರು- ಹುಬ್ಬಳ್ಳಿ .1155, ಬೆಂಗಳೂರು-ಧಾರವಾಡ .1185. ಯಶವಂತಪುರದಿಂದ ದಾವಣಗೆರೆ .920, ಯಶವಂತಪುರ-ಹುಬ್ಬಳ್ಳಿ .1155, ಯಶವಂತಪುರ-ಧಾರವಾಡ .1185, ದಾವಣಗೆರೆ-ಹುಬ್ಬಳ್ಳಿ .520, ದಾವಣಗೆರೆ-ಧಾರವಾಡ .555, ಹುಬ್ಬಳ್ಳಿ -ಧಾರವಾಡ .365.
ಎಕ್ಸಿಕ್ಯೂಟಿವ್ ಕ್ಲಾಸ್:
ಬೆಂಗಳೂರು ಕೆಎಸ್‌ಆರ್-ಯಶವಂತಪುರ . 690, ಬೆಂಗಳೂರು-ದಾವಣಗೆರೆ .1760, ಬೆಂಗಳೂರು- ಹುಬ್ಬಳ್ಳಿ .2200, ಬೆಂಗಳೂರು- ಧಾರವಾಡ .2265 ಇದೆ. ಯಶವಂತಪುರ-ದಾವಣಗೆರೆ .1730, ಯಶವಂತಪುರ-ಹುಬ್ಬಳ್ಳಿ .2200, ಯಶವಂತಪುರ-ಧಾರವಾಡ .2265, ದಾವಣಗೆರೆ-ಹುಬ್ಬಳ್ಳಿ .1005, ದಾವಣಗೆರೆ-ಧಾರವಾಡ .1075, ಹುಬ್ಬಳ್ಳಿ -ಧಾರವಾಡ .690.
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಕರ್ನಾಟಕದ 2ನೇ ಎಕ್ಸ್‌ಪ್ರೆಸ್ ರೈಲು ಹೆಗ್ಗಳಿಕೆ!
ಧಾರವಾಡದಿಂದ ಬೆಂಗಳೂರು (ರೈ.ಸಂ. 20662)
ಎಸಿ ಚೇರ್‌ಕಾರ್:
ಧಾರವಾಡ-ಕೆಎಸ್‌ಆರ್ ಬೆಂಗಳೂರು .1350, ಹುಬ್ಬಳ್ಳಿ- ಬೆಂಗಳೂರು .1320, ದಾವಣಗೆರೆ-ಬೆಂಗಳೂರು .880, ಯಶವಂತಪುರ-ಕೆಎಸ್‌ಆರ್ ಬೆಂಗಳೂರು .365, ದಾವಣಗೆರೆ-ಯಶವಂತಪುರ .865, ಹುಬ್ಬಳ್ಳಿ-ಯಶವಂತಪುರ .1320, ಧಾರವಾಡ- ಯಶವಂತಪುರ .1350, ಹುಬ್ಬಳ್ಳಿ- ದಾವಣಗೆರೆ . 725, ಧಾರವಾಡ- ದಾವಣಗೆರೆ . 765, ಧಾರವಾಡ-ಹುಬ್ಬಳ್ಳಿ .365
ಎಕ್ಸಿಕ್ಯೂಟಿವ್ ಕ್ಲಾಸ್:
ಧಾರವಾಡ-ಕೆಎಸ್‌ಆರ್ ಬೆಂಗಳೂರು . 2460, ಹುಬ್ಬಳ್ಳಿ- ಬೆಂಗಳೂರು .2395, ದಾವಣಗೆರೆ-ಬೆಂಗಳೂರು .1710, ಯಶವಂತಪುರ-ಕೆಎಸ್‌ಆರ್ ಬೆಂಗಳೂರು .690, ದಾವಣಗೆರೆ-ಯಶವಂತಪುರ .1680, ಹುಬ್ಬಳ್ಳಿ-ಯಶವಂತಪುರ 2395, ಧಾರವಾಡ- ಯಶವಂತಪುರ .2460, ಹುಬ್ಬಳ್ಳಿ- ದಾವಣಗೆರೆ . 1235, ಧಾರವಾಡ-ದಾವಣಗೆರೆ .1305, ಧಾರವಾಡ-ಹುಬ್ಬಳ್ಳಿ .690.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ