
ಮಂಡ್ಯ[ನ.29]: ಇಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹುಟ್ಟು ಹಬ್ಬ. ಆದರೆ ಪ್ರತಿ ಬಾರಿ ರಮ್ಯಾ ಹುಟ್ಟೂರು ಮಂಡ್ಯದಲ್ಲಿ ಅವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿ ಅಭಿಮಾನಿಗಳು ಈ ಬಾರಿ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಿಲ್ಲ.
ಇದನ್ನೂ ಓದಿ: ಅಂಬಿ ಅಭಿಮಾನಿಗಳ ಆಕ್ರೋಶ; ರಮ್ಯಾ ಮನೆಗೆ ಪೊಲೀಸ್ ರಕ್ಷಣೆ
'ಮಂಡ್ಯದ ಗಂಡು' ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗದ ರಮ್ಯಾ ವಿರುದ್ದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸೌಜನ್ಯಕ್ಕಾದರೂ ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಬರಬೇಕಿತ್ತೆಂಬ ಮಾತುಗಳು ಸದ್ದು ಮಾಡಿದ್ದವು. ರಮ್ಯಾ ಈ ನಡೆ ಅವರ ಅಭಿಮಾನಿಗಳಲ್ಲೂ ಬೇಸರ ಮೂಡಿಸಿತ್ತು. ಸದ್ಯ ಇದೇ ಕಾರಣದಿಂದ ಅಭಿಮಾನಿಗಳು ರಮ್ಯಾ ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: ಮಂಡ್ಯ ಜನರ ಪಾಲಿಗೆ ರಮ್ಯಾ ಇನ್ನಿಲ್ಲವಂತೆ!
ಪ್ರತಿ ವರ್ಷ ರಮ್ಯಾ ಮನೆ ಬಳಿಯೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು ಅದರೆ ಈ ಬಾರಿ ಮಂಡ್ಯದ ಸುಭಾಷ್ ನಗರದಲ್ಲಿರುವ ಮನೆ ವಠಾರವೂ ಖಾಲಿ ಹೊಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ