Mysuru Dasara 2025: ಮೈಸೂರಲ್ಲಿ ಮೂರು ದಿನಗಳ ದಸರಾ ವೈಭವ, ಏನೇನು ನಡೆಯಿತು?

Kannadaprabha News, Ravi Janekal |   | Kannada Prabha
Published : Sep 25, 2025, 09:04 AM IST
Mysuru dasara 2025

ಸಾರಾಂಶ

Mysuru Dasara 2025: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆದ ಮಹಿಳಾ ದಸರಾ, ಮಕ್ಕಳ ದಸರಾ ಕಾರ್ಯಕ್ರಮಗಳು ಸಾಂಸ್ಕೃತಿಕ ವೈಭವದಿಂದ ಗಮನ ಸೆಳೆದವು. ಜೆ.ಕೆ.ಮೈದಾನದಲ್ಲಿ ರಾಗಿ ಬೀಸುವ ಸ್ಪರ್ಧೆ, ಕಲಾಮಂದಿರದಲ್ಲಿ ಮಕ್ಕಳ ನೃತ್ಯ ಪ್ರದರ್ಶನ ಕುಕ್ಕರಹಳ್ಳಿಕೆರೆಯಲ್ಲಿ 20ನೇ ವರ್ಷದ ಫಲಪುಷ್ಪ ಪ್ರದರ್ಶನ..

ಮೈಸೂರು (ಸೆ.25): ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾ, ಮಕ್ಕಳ ದಸರಾದ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಇದೇ ವೇಳೆ, ನಗರದ ಕುಕ್ಕರಹಳ್ಳಿಕೆರೆಯ ದಂಡೆಯಲ್ಲಿ 20ನೇ ವರ್ಷದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ನಗರದ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾ ಅಂಗವಾಗಿ ಬುಧವಾರ ಆಯೋಜಿಸಿದ್ದ ರಾಗಿ ಬೀಸುವ ಸ್ಪರ್ಧೆಯಲ್ಲಿ 35ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ರಾಗಿ ಬೀಸಿದರು. 10 ನಿಮಿಷದಲ್ಲಿ ಹೆಚ್ಚಾಗಿ ರಾಗಿ ಬೀಸಿದ ಹಿಟ್ಟನ್ನು ತೂಕ ಮಾಡಿ, ವಿಜೇತರನ್ನು ಘೋಷಿಸಲಾಯಿತು. ಇದೇ ವೇಳೆ, ‘ಮಹಿಳೆ ಮತ್ತು ಸ್ವಾವಲಂಬನೆ’ ಕುರಿತು ಮಹಿಳೆಯರೊಂದಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರು ಸಂವಾದ ನಡೆಸಿದರು. ಅಲ್ಲದೆ, ಮಹಿಳೆಯರಿಗೆ ಆಯೋಜಿಸಿದ್ದ ಸಾಂಪ್ರದಾಯಿಕ ಉಡುಗೆ-ತೊಡುಗೆಯ ಫ್ಯಾಷನ್ ಶೋನಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಇದನ್ನೂ ಓದಿ: Dr Peter Machado interview: ದಲಿತ ಕ್ರಿಶ್ಚಿಯನ್‌’ ತಾರತಮ್ಯ ಕ್ರೈಸ್ತರಲ್ಲಿ ಇಲ್ಲ

ಇದೇ ವೇಳೆ, ನಗರದ ಕಲಾಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾದಲ್ಲಿ ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೋಡುಗರ ಮನ ಸೆಳೆಯಿತು. ಜಾನಪದ, ಹಳ್ಳಿ ಸೊಗಡು, ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶಿಸಿ, ಎಲ್ಲರ ಗಮನ ಸೆಳೆದರು.

ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ:

ಈ ಮಧ್ಯೆ, ನಗರದ ಕುಕ್ಕರಹಳ್ಳಿಕೆರೆಯ ದಂಡೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕೆ ವಿಭಾಗವು ಆಯೋಜಿಸಿರುವ 20ನೇ ವರ್ಷದ ದಸರಾ ಫಲಪುಷ್ಪ ಪ್ರದರ್ಶನವನ್ನು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಬುಧವಾರ ಸಂಜೆ ಉದ್ಘಾಟಿಸಿ, ವೀಕ್ಷಿಸಿದರು.

ಕುಕ್ಕರಹಳ್ಳಿಕೆರೆಗೆ ದಿನನಿತ್ಯ ಸಾವಿರಾರು ವಾಯುವಿಹಾರಿಗಳು ಭೇಟಿ ನೀಡಲಿದ್ದು, ಅವರನ್ನು ದಸರಾ ಮುಗಿಯುವವರೆಗೂ ವಿವಿಧ ಬಗೆಯ ಹೂವುಗಳು ಸ್ವಾಗತಿಸಲಿವೆ.

ಇದನ್ನೂ ಓದಿ: Mysuru Dasara 2025: ದಸರಾದಲ್ಲಿ 3000 ಡ್ರೋನ್‌ ಗಿನ್ನೆಸ್‌ ದಾಖಲೆಗೆ ಪ್ರಯತ್ನ, ಯಾವ ದಿನ ನೋಡಬಹುದು? ಇಲ್ಲಿದೆ ವಿವರ

ಸೆ.26ರಿಂದ ರೈತ ದಸರಾ:

ನಾಡಹಬ್ಬ ದಸರಾ ಪ್ರಯುಕ್ತ ಸೆ.26 ರಿಂದ 28 ರವರೆಗೆ ನಗರದ ಜೆ.ಕೆ.ಮೈದಾನದಲ್ಲಿ ರೈತ ದಸರಾ ಆಯೋಜಿಸಲಾಗಿದೆ. ಸೆ.26ರ ಬೆಳಗ್ಗೆ 9.30ಕ್ಕೆ ರೈತ ದಸರಾ ಮೆರವಣಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಸಾಗಲಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರೈತ ದಸರಾ ಉದ್ಘಾಟಿಸಲಿದ್ದಾರೆ. ಜೊತೆಗೆ, ಬೆಳಗ್ಗೆ 11ಕ್ಕೆ ಜೆ.ಕೆ.ಮೈದಾನದಲ್ಲಿ ಕೃಷಿ ವಸ್ತುಪ್ರದರ್ಶನವನ್ನು ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌