ತೀವ್ರ ಚಳಿ: ಡಿಸೆಂಬರಲ್ಲಿ ಸರ್ಕಾರದ ಕಾಶಿಯಾತ್ರೆ ರೈಲು ಸೇವೆ ಸ್ಥಗಿತ

By Kannadaprabha NewsFirst Published Nov 24, 2022, 1:23 AM IST
Highlights
  • ಚಳಿ: ಡಿಸೆಂಬರಲ್ಲಿ ಸರ್ಕಾರದ ಕಾಶಿಯಾತ್ರೆ ರೈಲು ಸೇವೆ ಸ್ಥಗಿತ
  • ಜ.20ರ ನಂತರ ಆಯೋಜನೆ: ಸಚಿವೆ ಶಶಿಲಾ ಜೊಲ್ಲೆ

ಬೆಂಗಳೂರು (ನ.24) : ಉತ್ತರ ಭಾರತದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಚಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ‘ ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ’ದ ಮೂರನೇ ಪ್ರವಾಸವನ್ನು ಜನವರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಬುಧವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕಾಶಿ ದರ್ಶನ ಯಾತ್ರೆಯ ಎರಡನೇ ಪ್ರಯಾಣದ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.

ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ

ಉತ್ತರ ಭಾರತದಲ್ಲಿ ಡಿಸೆಂಬರ್‌ 5ರ ನಂತರ ಉಷ್ಣಾಂಶ ರಾತ್ರಿ 5 ಡಿಗ್ರಿ ಸೆಲ್ಸಿಯಸ್‌ ತಲುಪಲಿದೆ. ಇಷ್ಟುತೀವ್ರ ಚಳಿಯನ್ನು ದಕ್ಷಿಣ ಭಾರತದ ಜನರು ತಡೆದುಕೊಳ್ಳುವುದು ಬಹಳ ಕಷ್ಟ. ಈ ಹಿನ್ನೆಲೆಯಲ್ಲಿ ಕಾಶಿ ದರ್ಶನ ರೈಲು ಸೇವೆಯನ್ನು ಡಿಸೆಂಬರ್‌ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್‌ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ಹಾಗಾಗಿ ಜ.20 ರ ನಂತರ ಮೂರನೇ ಪ್ರಯಾಣ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಚಾರ್‌ಧಾಮ್‌ ಯಾತ್ರೆಗೆ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಿ, ಏಪ್ರಿಲ್‌ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರ್ಕಾರದ ಸಹಾಯ ಧನವಿದೆ. ಅರ್ಜಿ ಅಹ್ವಾನಿಸುವ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. Kashi Yatra: ಇಂದಿನಿಂದ ಎರಡನೇ ಕಾಶಿಯಾತ್ರೆ ಪ್ರವಾಸ ಆರಂಭ

click me!