ಏರ್ ಶೋ ಕಣ್ತುಂಬಿಕೊಳ್ಳಲು ಹೆಚ್ಚುವರಿ ಬಸ್: ಡೋಂಟ್ ಮಿಸ್

By Suvarna NewsFirst Published Feb 2, 2021, 6:57 PM IST
Highlights

ಯಲಹಂಕ ವಾಯುನೆಲೆಯಲ್ಲಿ 3 ದಿನಗಳ ಕಾಲ ನಡೆಯಲಿರುವ ಏರ್ ಶೋ ನಡೆಯಲಿದ್ದು, ಇದಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು, (ಫೆ.02): ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಫೆ.3ರಂದು ಅಂತಾರಾಷ್ಟ್ರೀಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ನಾಳೆಯಿಂದ ಅಂದ್ರೆ ಫೆ.03ರಿಂದ 3 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಈ ಏರ್ ಶೋ ನಡೆಯಲಿದ್ದು, ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. 

ಏರೋ ಇಂಡಿಯಾ ಶೋ ಬೆಂಗಳೂರು: ಫೆ.1 ರಿಂದ ಆಗಸದಲ್ಲಿ ವೈಮಾನಿಕ ಹಾರಾಟಕ್ಕೆ ನಿಷೇಧ!

ಇನ್ನು ಏರೋ ಇಂಡಿಯಾ-2021 ರಲ್ಲಿ ಭಾಗವಹಿಸಲು ಇಂದು (ಮಂಗಳವಾರ) ಬೆಂಗಳೂರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದು, ಇವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ವಾಗತಿಸಿದರು. ನಂತರ ಏರೋ ಇಂಡಿಯಾ ಪ್ರದರ್ಶನದ ಅನಾವರಣ ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡರು. 

ಏರ್ ಶೋ ಹೆಚ್ಚುವರಿ ಬಸ್ಸು
ಏರೋ ಇಂಡಿಯಾ ವೀಕ್ಷಣೆ ಮಾಡಲು ಹೋಗಲು ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿಯಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.  ಪ್ರಯಾಣಿಕರ ಬೇಡಿಕೆ ಹಾಗೂ ದಟ್ಟಣೆಗೆ ಅನುಗುಣವಾಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಮೆಜೆಸ್ಟಿಕ್ ಹಾಗೂ ಯಲಹಂಕ ಮಧ್ಯೆ ಬಸ್ ಸಂಚಾರ ಮಾಡಲಿವೆ. 

click me!