ಸಿಎಂ ಬಿಎಸ್‌ವೈಗೆ ಒಂದೇ ಮ್ಯಾಟರ್, 15,000 ಲೆಟರ್: ಬರೆದವರು ಯಾರು?

By Suvarna News  |  First Published Feb 2, 2021, 4:08 PM IST

ವಿಧಾನಸೌಧಕ್ಕೆ ಬಂತು ಸಾವಿರಾರು ಪತ್ರಗಳು ಬಂದಿವೆ. ಅದು  ಒಂದೇ ವಿಚಾರವಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 15,000 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಹಾಗಾದ್ರೆ, ಇವುಗಳನ್ನು ಬರೆದವರು ಯಾರು?


ಬೆಂಗಳೂರು, (ಫೆ.02): ಏಕಕಾಲಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರ ಹೆಸರಲ್ಲಿ ಸಾವಿರಾರು ಪತ್ರಗಳು ಬಂದಿದ್ದು, ಇಷ್ಟು ದೊಡ್ಡಮಟ್ಟದ ಟಪಾಲು ನೋಡಿ ವಿಧಾನಸಭೆ ಸಿಬ್ಬಂದಿ ಕಂಗಾಲಾಗಿದ್ದಾರೆ.

ಹೌದು..ಅದು  ಒಂದೇ ವಿಚಾರವಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 15,000 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿದ್ದು, ಸಿಬ್ಬಂದಿಗಳು ಹೌಹಾರಿದ್ದಾರೆ.

Tap to resize

Latest Videos

ಮುಂದೂಡಲಾಗಿದ್ದ FDA ಪರೀಕ್ಷೆಗೆ ಹೊಸ ದಿನಾಂಕ ಪ್ರಕಟ

ಸಿಎಂ ಯಡಿಯೂರಪ್ಪ, ಸಚಿವರಾದ ಡಾ.ಕೆ.ಸುಧಾಕರ್, ಭೈರತಿ ಬಸವರಾಜ್ ಅವರ ಹೆಸರಲ್ಲಿ ಒಂದೇ ಕವರ್, ಒಂದೇ ವಿಷಯ ಹೊಂದಿರುವ 15,000 ಪತ್ರಗಳು ಬಂದಿವೆ. ಪತ್ರಗಳನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿಗಳು ಸಚಿವರಿಗೆ ಪತ್ರಗಳ ರಾಶಿ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ.

ಸಿಗರೇಟ್, ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಬೆಂಗಳೂರಿನ ಅಂಗಡಿ ಮುಂಗಟ್ಟು ಮಾಲೀಕರು ಸಿಎಂ ಹಾಗು ಸಚಿವರಿಗೆ ಪತ್ರ ಬರೆದಿದ್ದಾರೆ.

"

click me!