
ಬೆಂಗಳೂರು (ಸೆ.10) : ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪ್ರಯಾಣಿಕರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ಕಿಡಿಗೇಡಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಳಗಾಳದ ನಂಜುಂಡ, ಪಟ್ಟೇಗಾರಪಾಳ್ಯದ ಗಿರೀಶ್ ಹಾಗೂ ನವೀನ್ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್‌ಗಳು ಹಾಗೂ .10 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾಗಡಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಮಾಗಡಿಗೆ ಡ್ರಾಪ್ ಮಾಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಆರೋಪಿಗಳು ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸುಲಿಗೆಕೋರರ ತಂಡವನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಸ್ಕ್ಯಾನಿಂಗ್‌ಗೆ ಬಂದಿದ್ದ ಯುವತಿ ಜತೆ ಅಸಭ್ಯ ವರ್ತನೆ: ಟೆಕ್ನಿಶಿಯನ್ ಜೈಲಿಗೆ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನಂಜುಂಡ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಮತ್ತೊಬ್ಬ ಆರೋಪಿ ಗಿರೀಶ್ ಆಟೋ ಚಾಲಕನಾಗಿದ್ದರೆ, ನವೀನ್ ಕ್ಯಾಬ್ ಚಾಲಕನಾಗಿದ್ದ. ಸುಲಭವಾಗಿ ಹಣ ಸಂಪಾದನೆಗೆ ಈ ಮೂವರು ಗೆಳೆಯರು ಸುಲಿಗೆ ಕೃತ್ಯಕ್ಕಿಳಿದಿದ್ದರು. ಮುಂಜಾನೆ ಹೊತ್ತಿನಲ್ಲಿ ನಾಗರಬಾವಿ ಹೊರ ವರ್ತುಲ ರಸ್ತೆ ಹಾಗೂ ಮಾಗಡಿ ರಸ್ತೆಗಳಲ್ಲಿ ಸುತ್ತಾಡಿ ಬಸ್‌ಗೆ ಕಾಯುವ ಪ್ರಯಾಣಿಕರನ್ನು ಗುರಿಯಾಗಿಸಿ ಕೃತ್ಯ ಎಸಗುತ್ತಿದ್ದರು.
ಈ ಖತರ್ನಾಕ್ ಗ್ಯಾಂಗ್ ಫೀಲ್ಡಿಗಿಳಿದರೆ ಮನೆ, ಪಿಜಿ ಮುಂದೆ ಬಿಟ್ಟಿರೋ ಶೂ ಚಪ್ಪಲಿಗಳು ಮಾಯಾ!
ಸೆ.2ರಂದು ಶನಿವಾರ ಮುಂಜಾನೆ 5.15ರ ಸುಮಾರಿನಲ್ಲಿ ಮಾಗಡಿಗೆ ತೆರಳಲು ಸುಮನಹಳ್ಳಿ ಜಂಕ್ಷನ್ ಬಳಿ ಬಸ್‌ಗೆ ವ್ಯಕ್ತಿಯೊಬ್ಬರು ಕಾಯುತ್ತಿದ್ದರು. ಆ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳು, ಬಸ್ಸಿಗೆ ಕಾಯುತ್ತಿದ್ದವರಿಗೆ, ‘ನಾವು ಮಾಗಡಿ ಕಡೆ ಹೊರಟ್ಟಿದ್ದೇವಿ. ಬನ್ನಿ ಡ್ರಾಪ್ ಕೊಡುತ್ತೇವೆ’ ಎಂದು ಹೇಳಿ ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ನಂತರ ಮಾರ್ಗ ಮಧ್ಯೆ ಪ್ರಯಾಣಿಕನಿಗೆ ಡ್ಯಾಗರ್‌ನಿಂದ ಬೆದರಿಸಿ ಹಣ ವಸೂಲಿ ಮಾಡಿದ್ದರು. ಹಣ ಇಲ್ಲವೆಂದಾಗ ಫೋನ್ ಪೇ ಮೂಲಕ ಆರೋಪಿಗಳು ಹಣ ಪಡೆದಿದ್ದರು. ನಂತರ ನೆಲಮಂಗಲ ಸಮೀಪದ ಸೊಂಡೆಕೊಪ್ಪ ರಸ್ತೆಯ ಶ್ರೀಸಿದ್ಧಗಂಗಾ ಪದವಿ ಕಾಲೇಜು ಬಸ್ ನಿಲ್ದಾಣ ಬಳಿ ಸಂತ್ರಸ್ತನನ್ನು ಕಾರಿನಿಂದ ಇಳಿಸಿ ತಂಡ ಪರಾರಿಯಾಗಿತ್ತು. ಮರುದಿನ ಈ ಘಟನೆ ಬಗ್ಗೆ ಸಂತ್ರಸ್ತ ವ್ಯಕ್ತಿ ನೀಡಿದ್ದ ದೂರು ಆಧರಿಸಿ ಪೊಲೀಸರು ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ