ಇನ್ಫೋಸಿಸ್‌ನಿಂದ ಹೇಳದೆ ಕೇಳದೆ ಉದ್ಯೋಗಿಗಳ ವಜಾ: ಕೇಂದ್ರ ಸರ್ಕಾರಕ್ಕೆ ದೂರು ಕೊಟ್ಟ ಐಟಿ ಸಂಘಟನೆ

Published : Feb 10, 2025, 11:00 AM ISTUpdated : Feb 10, 2025, 12:21 PM IST
ಇನ್ಫೋಸಿಸ್‌ನಿಂದ  ಹೇಳದೆ ಕೇಳದೆ ಉದ್ಯೋಗಿಗಳ ವಜಾ: ಕೇಂದ್ರ ಸರ್ಕಾರಕ್ಕೆ ದೂರು ಕೊಟ್ಟ ಐಟಿ ಸಂಘಟನೆ

ಸಾರಾಂಶ

ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ೩೦೦ ಉದ್ಯೋಗಿಗಳನ್ನು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ವಜಾಗೊಳಿಸಿದೆ. ಐಟಿ ಉದ್ಯೋಗಿಗಳ ಸಂಘಟನೆ ಎನ್‌ಐಟಿಇಎಸ್‌, ಇನ್ಫೋಸಿಸ್‌ ಕಾನೂನುಬಾಹಿರವಾಗಿ ವಜಾ ಮಾಡಿದೆ, ಉದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ. ಇನ್ಫೋಸಿಸ್‌ ಮಾತ್ರ ಮೂರು ಅವಕಾಶ ನೀಡಿದರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ ವಜಾ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಎನ್ನುವ ಕಾರಣ ನೀಡಿ ಇತ್ತೀಚೆಗಷ್ಟೇ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಹೆಚ್ಚು ಯುವ ಉದ್ಯೋಗಿಗಳನ್ನು ತೆಗೆದು ಹಾಕಿದ ಇನ್ಫೋಸಿಸ್‌ ವಿರುದ್ಧ ಐಟಿ ಉದ್ಯೋಗಿಗಳ ಸಂಘಟನೆ (Nascent Information Technology Employees Senate) ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದೆ.

ಕೇಂದ್ರ ಕಾರ್ಮಿಕ ಇಲಾಖೆಗೆ ಐಟಿ ಉದ್ಯೋಗಿಗಳ ಸಂಘಟನೆಯಾದ ಎನ್‌ಐಟಿಇಎಸ್‌ ಸಲ್ಲಿಸಿರುವ ದೂರಿನಲ್ಲಿ, ‘ಇನ್ಫೋಸಿಸ್‌ ಕಾನೂನು ಬಾಹಿರ ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡುತ್ತಿದೆ’ ಎಂದು ಆರೋಪಿಸಿದೆ.

 ‘ಇನ್ಫೋಸಿಸ್‌, ಇತ್ತೀಚೆಗೆ ಕ್ಯಾಂಪಸ್‌ನಲ್ಲಿ ಆಯ್ಕೆ ಮಾಡಿಕೊಂಡವರನ್ನು ಬಲವಂತವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿದೆ’ ಎಂದು ಬಾಧಿತ ಉದ್ಯೋಗಿಗಳಿಂದ ದೂರು ಬಂದಿದೆ. ಕಂಪನಿಯು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬೌನ್ಸರ್‌ಗಳು ಮತ್ತು ಭದ್ರತಾ ಸಿಬ್ಬಂದಿಗಳ ಮೂಲಕ ಬೆದರಿಕೆ ಹಾಕಿದೆ. ವಜಾ ಮಾಡಿದ ವಿದ್ಯಾರ್ಥಿಗಳಿಗೆ ಮುಂಚೆಯೇ ಯಾವುದೇ ಸೂಚನೆ ನೀಡಿಲ್ಲ. 

ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ನಡೆದಿದ್ದೇನು?

ಇದು ಅವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದಿದೆ. ಅಲ್ಲದೇ ಕೈಗಾರಿಕಾ ವಿವಾದ ಕಾಯ್ದೆ ನಿಬಂಧನೆ ಉಲ್ಲಂಘಿಸಿದಕ್ಕಾಗಿ ಇನ್ಫೋಸಿಸ್‌ ವಿರುದ್ಧ ಕ್ರಮ ಹಾಗೂ ವಜಾ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದೆ.

ಇನ್ಫೋಸಿಸ್ ಲಿಮಿಟೆಡ್ ಇತ್ತೀಚೆಗೆ ಕ್ಯಾಂಪಸ್ ನೇಮಕಾತಿ ಮಾಡಿಕೊಂಡವರನ್ನು ಬಲವಂತವಾಗಿ ವಜಾಗೊಳಿಸುವ ಕ್ರಮಕ್ಕೆ ಮುಂದಾಗಿದೆ ಎಂದು ಬಾಧಿತ ಉದ್ಯೋಗಿಗಳಿಂದ ಬಂದ ಹಲವಾರು ದೂರುಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಅವರಿಗೆ ಆಫರ್ ಲೆಟರ್‌ಗಳನ್ನು ನೀಡಿದ ನಂತರವೂ ಎರಡು ವರ್ಷಗಳ ಕಾಲ ವಿಳಂಬವಾಗಿತ್ತು" ಎಂದು ನೈಟ್ಸ್‌ನ ವಕೀಲ ಮತ್ತು ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಶನಿವಾರ ಭಾರತದ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಲಿಖಿತ ಪತ್ರದಲ್ಲಿ ತಿಳಿಸಿದ್ದಾರೆ.

ಸಮಜಾಯಿಸಿಕೊಂಡ ಇನ್ಫಿ:
ಐಟಿ ಕ್ಷೇತ್ರದ ದೈತ್ಯ ಕಂಪನಿ ಇನ್ಫೋಸಿಸ್‌ ತನ್ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ನಂತರವೂ ಮೂರು ಪ್ರಯತ್ನಗಳಲ್ಲಿ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕೆ ಹೊಸದಾಗಿ ನೇಮಕಗೊಂಡ 300 ಉದ್ಯೋಗಿಗಳನ್ನು ತೆಗೆದು ಹಾಕಿದೆ ಎಂಬ ಆರೋಪಕ್ಕೆ ಇನ್ಫಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ.

ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್

ಈ ಬಗ್ಗೆ ಇನ್ಫೋಸಿಸ್‌ ಪ್ರತಿಕ್ರಿಯಿಸಿದ್ದು, ‘ನಾವು ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ಹೊಸದಾಗಿ ನೇಮಕಗೊಂಡವರು ನಮ್ಮ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿಯನ್ನು ಪಡೆದ ಬಳಿಕವೂ ಮೂರು ಅವಕಾಶ ನೀಡಿದರೂ ಆಂತರಿಕ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಸಂಸ್ಥೆಯೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ. ಈ ಷರತ್ತನ್ನು ಅವರ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ’ ಎಂದಿದೆ.

ಇನ್ನು ಇನ್ಫೋಸಿಸ್‌ ಸಂಸ್ಥೆಯ ಈ ದಿಢೀರ್‌ ನಿರ್ಧಾರಕ್ಕೆ ಐಟಿ ಉದ್ಯೋಗಿಗಳ ಸಂಘ ಎನ್‌ಐಟಿಇಎಸ್‌ ಆಕ್ರೋಶ ವ್ಯಕ್ತ ಪಡಿಸಿದ್ದು, ಹೊಸ ಉದ್ಯೋಗಳು ಇದರಿಂದ ಹೆಚ್ಚು ಬಾಧಿತರಾಗುತ್ತಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಇನ್ಫೋಸಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅಧಿಕೃತ ದೂರು ನೀಡಿದೆ. ಮೈಸೂರು ಸೇರಿ ಇನ್ಫೋಸಿಸ್ ಸುಮಾರು 700 ಕ್ಯಾಂಪಸ್ ನೇಮಕಾತಿಗಳನ್ನು ವಜಾಗೊಳಿಸಿದೆ ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ