
ಬೆಂಗಳೂರು (ಫೆ.10): ಬೆಂಗಳೂರಿನ ಯಲಹಂಕದ ವಾಯುಪಡೆ ನೆಲೆಯಲ್ಲಿ ಸೋಮವಾರದಿಂದ ಐದು ದಿನಗಳ ಏರೋ ಇಂಡಿಯಾ ಶೋ ನಡೆಯಲಿದೆ. ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ಹಲವಾರು ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿದ್ಧವಾಗಿವೆ. ಈ ವೈಮಾನಿಕ ಪ್ರದರ್ಶನದ ವೈಶಿಷ್ಟ್ಯ ಇಲ್ಲಿದೆ.
90- ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುತ್ತಿರುವ ದೇಶಗಳ ಸಂಖ್ಯೆ.
70 - ಏರ್‌ಶೋದಲ್ಲಿ ಪ್ರದರ್ಶನ ನೀಡಲಿರುವ ಯುದ್ಧ ವಿಮಾನ, ಸರಕು, ತರಬೇತಿ ವಿಮಾನಗಳು
30- ಏರ್ ಶೋದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ವಿಮಾನಗಳು, ಹೆಲಿಕಾಪ್ಟರ್‌ಗಳು
750 - ಏರ್‌ಶೋದಲ್ಲಿ ಭಾಗಿಯಾಗಲಿರುವ ಭಾರತದ ಕಂಪನಿಗಳು
100 - ಏರ್‌ಶೋದಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ
7 ಲಕ್ಷ - ಏರ್‌ಶೋಗೆ 5 ದಿನಗಳಲ್ಲಿ 7 ಲಕ್ಷ ಜನರು ಆಗಮಿಸುವ ನಿರೀಕ್ಷೆ
30- ಏರ್‌ಶೋದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ರಕ್ಷಣಾಮಂತ್ರಿಗಳು
42000 ಚ.ಮೀ.: ವಿಮಾನಗಳು, ರಕ್ಷಣಾ ಉತ್ಪನ್ನಗಳ ಪ್ರದರ್ಶನಕ್ಕೆ ಮೀಸಲಿಟ್ಟ ಜಾಗ
5ನೇ ತಲೆಮಾರಿನ ಯುದ್ಧ ವಿಮಾನ ಸುಖೋಯ್ ಎಸ್‌ಯು-57 ಲ್ಯಾಂಡ್: ಈ ಬಾರಿಯ ಏರೋಇಂಡಿಯಾ 2025ರ ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಐದನೇ ತಲೆಮಾರಿನ ಯುದ್ಧ ವಿಮಾನ ರಷ್ಯಾದ ‘ಸುಖೋಯ್ ಎಸ್‌ಯು-57ಇ’ ಯಲಹಂಕ ವಾಯುಪಡೆ ನೆಲೆಗೆ ಬಂದಿಳಿದಿದೆ. ರಹಸ್ಯ ಕಾರ್ಯಾಚರಣೆ ತಂತ್ರಜ್ಞಾನ ಹೊಂದಿರುವ, ಸಾಮಾನ್ಯ ಯುದ್ಧ ವಿಮಾನಗಳಿಗಿಂತ ಹೆಚ್ಚು ಕ್ಷಿಪಣಿ ಮತ್ತು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಎಸ್‌ಯು-57 ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ.
ಏರ್‌ಶೋನಲ್ಲಿ ಅಮೆರಿಕದ ಎಫ್ - 35, ರಷ್ಯಾದ ಎಸ್‌ಯು-35 ಯುದ್ಧ ವಿಮಾನ ಆಕರ್ಷಣೆ
ಎಸ್‌ಯು-57 ಮಾರಾಟ ಮಾಡಲು ರಷ್ಯಾ ಆಸಕ್ತಿ ಹೊಂದಿದ್ದರೆ, ಭಾರತೀಯ ವಾಯುಸೇನೆಯು ಇದನ್ನು ಸೇರ್ಪಡೆಗೊಳಿಸಲು ಯೋಜಿಸಿದೆ ಎಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು ಎಸ್‌ಯು-57 ವಿಮಾನ ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿರುವುದರಿಂದ ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೆಯಬಹುದು ಎಂದು ಹೇಳಲಾಗಿದೆ.
ಏರ್‌ಶೋ ವೀಕ್ಷಣೆಗಾಗಿ ಪಾಸ್ ಹೀಗೆ ಖರೀದಿಸಿ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಯಸುವ ಆಸಕ್ತರು ಮೊಬೈಲ್‌ನಲ್ಲಿ ಏರೋ ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ www.aeroindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು 1 ಸಾವಿರ ರು. ಶುಲ್ಕ ಪಾವತಿಸಿ ಪಾಸ್ ಖರೀದಿಸಬಹುದು. ಫೆ.11ರಿಂದ 14ರ ವರೆಗೆ ಸಾರ್ವಜನಿಕರು ಏರೋ ಇಂಡಿಯಾ ವೀಕ್ಷಣೆಗೆ ಅವಕಾಶವಿದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಿಸಲು ₹2,500 ಮತ್ತು ಬಿಸಿನೆಸ್ ಪಾಸ್ ದರ ₹5,000 ನಿಗದಿಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ