
ಆನೇಕಲ್(ಜು.26): ಆನೆಯೊಂದು ಕಡ್ಡಿಯನ್ನು ಬಳಸಿ ಕಿವಿಯನ್ನು ಕೆರೆದುಕೊಂಡಿರುವುದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಂಡುಬಂದಿದೆ. ಮಹಾರಾಷ್ಟ್ರದ ಕೊಲ್ಲಾಪುರದ ದೇಗುಲವೊಂದರಿಂದ ಸಂರಕ್ಷಿಸಿ ಕರೆತಂದ ಆನೆ ಈ ರೀತಿ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
2014ರಲ್ಲಿ ಪಾರ್ಕ್‌ಗೆ ಬಂದ ಸುಂದರ ಎಂಬ ಆನೆ ಬಲುಬೇಗನೆ ಇತರ ಆನೆಗಳ ಜೊತೆ ಹೊಂದಿಕೊಂಡು ಇಲ್ಲಿನ ಕ್ರಮ ಬದ್ಧ ಆಹಾರ ಸೇವನೆಯಿಂದ ದಷ್ಟಪುಷ್ಟವಾಗಿ ಬೆಳೆದಿದ್ದಾನೆ. ಇತ್ತೀಚೆಗೆ ಈ ಆನೆಯ ಚಲನವಲನಗಳನ್ನು ಗಮನಿಸುತ್ತಿದ್ದ ಮಾವುತರಿಗೆ ಆನೆ ಕಡ್ಡಿಯಿಂದ ಕಿವಿಯನ್ನು ಕೆರೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.
ಇವಳೇ ನೋಡಿ ಬಾಬ್ ಕಟ್ ಸೆಂಗಮಾಲಂ: ವಿಭಿನ್ನ ಹೇರ್‌ಸ್ಟೈಲ್‌ಗೇ ಫೇಮಸ್!
ಇದೇ ಸಂದರ್ಭದಲ್ಲಿ ಇದರ ಸಂಗಾತಿ ಮೇನಕೆ ಸಹ ಇದೇ ರೀತಿ ವರ್ತನೆ ಪ್ರದರ್ಶಿಸಿದೆ. ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್, ವೈದ್ಯಾಧಿಕಾರಿಗಳಾದ ಉಮಾಶಂಕರ್, ಅಮಲಾರವರು ಈ ಅಪರೂಪದ ಮಾಹಿತಿಯನ್ನು ಜನರ ಜೊತೆ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ