ಕೆಲವೇ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಸುಧಾರಣೆ: ಸಚಿವ ಜಾರ್ಜ್‌

By Kannadaprabha News  |  First Published Aug 16, 2023, 12:00 AM IST

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬಂದ ಮಳೆಗೆ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಕಲ್ಲಿದ್ದಲು ನೆಂದು ಹಾಳಾಗಿದೆ. ಹೀಗಾಗಿ, ಅದರ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಇದು ಒಂದು ದಿನದಲ್ಲಿ ಮುಗಿಯುವ ಕೆಲಸ ಅಲ್ಲ. ಹೀಗಾಗಿ, ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ಜೊತೆಗೆ, ಮಳೆಗಾಲದ ಅವಧಿಯಲ್ಲಿ ಸ್ಥಾವರದ ದುರಸ್ತಿ ಕೆಲಸ ಮಾಡಲಾಗುತ್ತದೆ: ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌


ಚಿಕ್ಕಮಗಳೂರು(ಆ.16): ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ಆದೇಶ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಸುಧಾರಣೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬಂದ ಮಳೆಗೆ ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಕಲ್ಲಿದ್ದಲು ನೆಂದು ಹಾಳಾಗಿದೆ. ಹೀಗಾಗಿ, ಅದರ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಇದು ಒಂದು ದಿನದಲ್ಲಿ ಮುಗಿಯುವ ಕೆಲಸ ಅಲ್ಲ. ಹೀಗಾಗಿ, ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಂಡಿತ್ತು. ಜೊತೆಗೆ, ಮಳೆಗಾಲದ ಅವಧಿಯಲ್ಲಿ ಸ್ಥಾವರದ ದುರಸ್ತಿ ಕೆಲಸ ಮಾಡಲಾಗುತ್ತದೆ. ಇದೇ ವೇಳೆ, ದಿಢೀರ್‌ ಮಳೆ ಕಡಿಮೆಯಾಯಿತು. ಹೀಗಾಗಿ, ವಿದ್ಯುತ್‌ ಉತ್ಪಾದನೆ ಕ್ಷೀಣಿಸಿ, ಸಮಸ್ಯೆ ಎದುರಾಗಿತ್ತು. ಮಳೆ ಕಡಿಮೆಯಾಗಿದ್ದರಿಂದ ಕೂಡಲೇ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಎರಡು ದಿನಗಳ ಹಿಂದೆ ಆದೇಶ ನೀಡಲಾಗಿದೆ. ಇನ್ನು 8-10 ದಿನಗಳಲ್ಲಿ ಪ್ಲಾಂಟ್‌ಗಳ ದುರಸ್ತಿ ಕಾರ್ಯವೂ ಪೂರ್ಣಗೊಳ್ಳಲಿದೆ ಎಂದರು.

Tap to resize

Latest Videos

ನಾನು ಸಂಘದ ಸ್ವಯಂ ಸೇವಕ, ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ಸಿ.ಟಿ ರವಿ

ಕಳೆದ ನಾಲ್ಕು ದಿನಗಳಿಂದ ಗಾಳಿ ಪ್ರಮಾಣ ಕೂಡ ಇಳಿಮುಖವಾಗಿತ್ತು. ಬರೀ ನಮ್ಮ ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಗಾಳಿ ಇಳಿಮುಖವಾಗಿತ್ತು. ಆದ್ದರಿಂದ ಪವನ ವಿದ್ಯುತ್‌ ಉತ್ಪಾದನೆಯೂ ಕುಸಿದಿತ್ತು. ನಿನ್ನೆ, ಮೊನ್ನೆಯಿಂದ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದರು.

ಸಬ್‌ ಸ್ಟೇಷನ್‌ ಇರುವ ಕಡೆ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡಲು ರಾಜ್ಯದಲ್ಲಿ ಸರ್ವೇ ಮಾಡಲಾಗಿದೆ. ರೈತರಿಗೆ ಸೋಲಾರ್‌ ಪಂಪ್‌ಸೆಟ್‌ ನೀಡಲು ಉದ್ದೇಶಿಸಲಾಗಿದೆ. ಆಕ್ಸಿಜನ್‌ ಮತ್ತು ಹೈಡ್ರೋಜನ್‌ ಪ್ರತ್ಯೇಕಿಸಿ, ಅದನ್ನು ಅಮೋನಿಯಾದಲ್ಲಿ ಸಂಗ್ರಹ ಮಾಡಿದರೆ ಅದನ್ನು ವಿದ್ಯುತ್‌ ಆಗಿ ಪರಿವರ್ತನೆ ಮಾಡುವ ಹೊಸ ಆವಿಷ್ಕಾರ ಆಗಿದೆ. ಈ ತಂತ್ರಜ್ಞಾನವನ್ನೂ ಕೂಡ ಅಳವಡಿಸಲು ಯೋಚಿಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

click me!