ಪ್ರಸ್ತುತ ಸಂದರ್ಭದಲ್ಲಿ ಚುನಾವಣೆ ವ್ಯವಸ್ಥೆ ದೇಶದ ಆಡಳಿತ ವ್ಯವಸ್ಥೆ ಸೇರಿದಂತೆ ಸಮಾಜದ ಪ್ರತಿ ಸ್ತರವನ್ನು ಕಲುಷಿತಗೊಳಿಸಿದೆ. ಪ್ರಜಾಪ್ರಭುತ್ವದ ಆಶಯದಂತೆ ಚುನಾವಣೆ ನಡೆಯುತ್ತಿಲ್ಲ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಾಧ ವ್ಯಕ್ತಪಡಿಸಿದರು.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜು.20): ಪ್ರಸ್ತುತ ಸಂದರ್ಭದಲ್ಲಿ ಚುನಾವಣೆ ವ್ಯವಸ್ಥೆ ದೇಶದ ಆಡಳಿತ ವ್ಯವಸ್ಥೆ ಸೇರಿದಂತೆ ಸಮಾಜದ ಪ್ರತಿ ಸ್ತರವನ್ನು ಕಲುಷಿತಗೊಳಿಸಿದೆ. ಪ್ರಜಾಪ್ರಭುತ್ವದ ಆಶಯದಂತೆ ಚುನಾವಣೆ ನಡೆಯುತ್ತಿಲ್ಲ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಾಧ ವ್ಯಕ್ತಪಡಿಸಿದರು. ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರಾಷ್ಟ್ರಕವಿ ಕುವೆಂಪು ಅವರು ಚುನಾವಣೆ ಕುರಿತು ಹೇಳಿರುವ ಮಾತು ಇಂದಿನ ಪರಿಸ್ಥಿತಿಗೆ ತಕ್ಕಂತೆ ಇದೆ.
undefined
ಇಂದಿನ ಚುನಾವಣೆ ಜಾತಿ, ತೊಳ್ಬಲ, ಹಣ ಬಲ ಪಕ್ಷಾಂತರದಿಂದ ಕಲುಷಿತವಾಗಿದೆ. ನಾವು ಮತಹಾಕುತ್ತಿಲ್ಲ ಬದಲಿಗೆ ಹಣ ಮತದಾನ ಮಾಡುವ ಪರಿಸ್ಥಿತಿ ಉಂಟಾಗಿದೆ ಇದು ದುರಂತ. ಚುನಾವಣಾ ವ್ಯವಸ್ಥೆ ಬಹಳ ದಾರಿ ತಪ್ಪಿದೆ ಇದರಿಂದ ಸರ್ಕಾರದ ಆಡಳಿತ ವ್ಯವಸ್ಥೆ ಹಾಗೂ ಸಮಾಜದ ವ್ಯವಸ್ಥೆ ಜನರ ಭಾವನೆಗಳಿಗೆ ವಿರುದ್ದವಾಗಿ ರೂಪಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಚುನಾವಣೆ ವ್ಯವಸ್ಥೆಯಲ್ಲಿ ಪ್ರಜೆಗಳ ಜವಾಬ್ದಾರಿ ದೊಡ್ಡದು ಪ್ರಜೆಗಳು ಜಾಗೃತರಾಗಬೇಕಿದೆ. ಸಮಾಜದಲ್ಲಿ ನಾವೆಲ್ಲ ಒಂದು ವಿಷ ವರ್ತುಲದಲ್ಲಿ ಬದುಕಿದ್ದೇವೆ.
ಮದರಸಾ ಟೆರರಿಸ್ಟ್ ತಯಾರು ಮಾಡುವ ಕೇಂದ್ರಗಳಾಗ್ತಿವೆ: ಮುತಾಲಿಕ್
ಆದರ್ಶ ಮೌಲ್ಯ, ತತ್ವ ಸಿದ್ಧಾಂತ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಶಾಸಕಾಂಗವನ್ನು ರಂಜನೀಯವಾಗಿ ಬಿಂಬಿಸಲಾಗುತ್ತಿದೆ. ಸಾಮಾನ್ಯರೊಬ್ಬರು ದೇಶದ ಪ್ರಧಾನಿಯಾಗಲು ಹಾಗೂ ಮುಖ್ಯ ಮಂತ್ರಿಯಾಗಲು ಅಂಬೇಡ್ಕರ್ ಸಂವಿಧಾನವೇ ಕಾರಣ. ಭಾರತವನ್ನು ಎತ್ತರದಲ್ಲಿರಿಸಿದೆ ನಮ್ಮ ಹೆಮ್ಮೆಯ ಸಂವಿಧಾನ. ಕಾರ್ಯಾಂಗದಲ್ಲಿ ಇಂದಿಗೂ ಬ್ರಿಟೀಷ್ ವ್ಯವಸ್ಥೆ ಜಾರಿಯಲ್ಲಿದೆ ಇದು ಇಂದಿನ ದುರಂತ. ಕಾರ್ಯಾಂಗದ ವ್ಯವಸ್ಥೆ ಜಟಿಲಗೊಂಡಿದೆ ಮತ್ತು ಮಾನವೀಯತೆ ಕಳೆದುಕೊಂಡಿದೆ ಸರ್ಕ್ಯೂಲರ್ ಆಧಾರಿತವಾಗಿ ಆಡಳಿತ ನಡೆಯುತ್ತಿದೆ. ಮಾನವೀಯತೆಯ ಭಾಗ ಇಲ್ಲದಾಗಿದೆ.
ನ್ಯಾಯಾಂಗ ವ್ಯವಸ್ಥೆ ಪವಿತ್ರವಾದ ಕ್ಷೇತ್ರವಾಗಿ ಉಳಿದಿಲ್ಲ: ಇಲ್ಲಿನ ನ್ಯಾಯಾಂಗ ವ್ಯವಸ್ಥೆ ನೋಡಿದರೆ ಭಯವಾಗುತ್ತದೆ. ಮೌಲ್ಯಾರ್ದಶಗಳ ಕೊರತೆ ಇದೆ. ನ್ಯಾಯಾಂಗದಲ್ಲಿ ನ್ಯಾಯ ಸಿಗುವುದಿಲ್ಲ ಜಡ್ಜ್ ಮೆಂಟ್ ಸಿಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಜವಾಬ್ದಾರಿಯುತವಾಗಿದೆ. ಇಂದು ಬ್ರೇಕಿಂಗ್ ಸುದ್ದಿಗಳ ಹಾವಳಿಗೆ ಒಳಗಾಗಿ ಸುದ್ದಿ ಮೂಲದ ಅರಿವು ಎಲ್ಲಿದೆ ಎಂಬುದು ನಂತರ ತಿಳಿದುಬರುತ್ತದೆ ಎಂದು ವಿಷಾದಿಸಿದರು. ಯಾವ ಚುನಾವಣೆಗಳು ಪವಿತ್ರವಾಗಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಮತ್ತಷ್ಟು ಗಟ್ಟಿಯಾಗಬೇಕಿದೆ ಎಂದು ತಿಳಿಸಿದರು.
ಬೊಮ್ಮಾಯಿ ಅಲ್ಲ ಬೇಕಾದ್ರೆ ಮೋದಿ ಬಂದು ಸ್ಪರ್ಧಿಸಲಿ: ಮಲ್ಲಿಕಾರ್ಜುನ್ ಸವಾಲು
ಮತ ಮಾರಾಟಿಕ್ಕಿಲ್ಲ ಎಂದು ಯುವಕರು ಸಂಕಲ್ಪವನ್ನು ಮಾಡ್ಬೇಕು: ಮತ ಮಾರಾಟಿಕ್ಕಿಲ್ಲ ಎಂದು ಯುವಕರು ಸಂಕಲ್ಪವನ್ನು ಮಾಡ್ಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆದಂತೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರಲ್ಲಿ ಸಂದೇಶ ರವಾನಿಸಿದರು. ವೇದಿಕೆಯಲ್ಲಿ ಶಾಸಕ ಎಸ್.ಎ ರವೀಂದ್ರನಾಥ್,ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ ರಿಷ್ಯಂತ್, ಸಿಇಒ ಡಾ.ಚನ್ನಪ್ಪ, ದಾವಣಗೆರೆ ವಿವಿ ಉಪಕುಲಪತಿ ಬಸವಂತಪ್ಪ ದೊಡ್ಡ ಮಲ್ಲಪ್ಪ ಕುಂಬಾರ್ ಅಧಿಕಾರಿವರ್ಗ, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.