ಡಿಕೆ ಶಿವಕುಮಾರ್ ಪತ್ನಿ, ತಾಯಿಗೂ ಇಡಿ ಬುಲಾವ್..!

By Web Desk  |  First Published Oct 14, 2019, 3:21 PM IST

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಇಡಿ ವಿಚಾರಣೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅವರ ನಿವಾಸ, ಕಚೇರಿಗಳ ಮೇಲೆ ಕಳೆದ ಹಲವು ದಿನಗಳ ಹಿಂದೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಜಾರಿ ಇರ್ದೇಶನಾಲಯ ಡಿಕೆಶಿ ಕುಟುಂಬದ ಬೆನ್ನುಬಿದ್ದಿದೆ, ದಾಳಿ ವೇಳೆ ಪತ್ತೆಯಾದ ಆಸ್ತಿ ಬಗ್ಗೆ ವಿವರಣೆ ನೀಡಲು ವಿಚಾರಣೆಗೆ ಹಾಜರಾಗುವಂತೆ ಅತ್ತ, ಸೊಸೆಗೆ ಇಡಿ ಸಮನ್ಸ್ ನೀಡಿದೆ.


ನವದೆಹಲಿ/ಬೆಂಗಳೂರು, (ಅ.14): ಅಕ್ರಮ ಹಣ ಹಾಗೂ ಆಸ್ತಿ ಪತ್ತೆ ಪ್ರಕರಣ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಕಂಟಕ ಎದುರಾಗಿದೆ.

"

Tap to resize

Latest Videos

undefined

ಕನಕಪುರ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಹಣ ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಸಹೋದರ ಡಿಕೆ ಸುರೇಶ್, ಪುತ್ರಿ ಐಶ್ವರ್ಯಗೆ ಇಡಿ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಿತ್ತು. ಆದ್ರೆ, ಇದೀಗ ಡಿಕೆಶಿ ಪತ್ನಿ ಉಷಾ ಹಾಗೂ ತಾಯಿ ಗೌರಮ್ಮಗೂ ಇಡಿ ಸಮನ್ಸ್ ಜಾರಿ ಮಾಡಿದೆ.

ಮುಗಿಯದ ಜೈಲು ವಾಸ: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!

ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿದ್ದು ಅಲ್ಲದೇ ಗೌರಮ್ಮ ಹಾಗೂ ಡಿಕೆ ಶಿವಕುಮಾರ್, ಸುರೇಶ್ ಮಧ್ಯೆ ಹಣದ ವ್ಯವಹಾರವೂ ನಡೆದಿದೆ. ಗೌರಮ್ಮ ಅವರ ಬಳಿ 273 ಕೋಟಿ ರೂ ಬೇನಾಮಿ ಆಸ್ತಿ ಪತ್ತೆಯಾಗಿದೆ. ಹಾಗೆಯೇ ಐಶ್ವರ್ಯಗೂ 5 ಎಕರೆ ಜಮೀನು ಗಿಫ್ಟ್‌ ಡೀಡ್ ಆಗಿ ನೀಡಿದ್ದಾರೆ.

ಇದೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇಡಿ ಸಮನ್ಸ್ ಜಾರಿ ಮಾಡಿದೆ. ಇಡಿ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಗೌರಮ್ಮ ನಾಳೆ ಅಂದ್ರೆ ಮಂಗಳವಾರ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ಹೋಗಬೇಕಿದೆ.

ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?

ಡಿಕೆಶಿ ಪತ್ನಿಗೂ ಸಮನ್ಸ್
ಹೌದು...ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಪತ್ನಿಗೂ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆ.17ರ ಗುರುವಾರ ಹಾಜರಾಗಿ ವಿಚಾರಣೆ ಎದುರಿಸುವಂತೆ ಅಧಿಕಾರಿಗಳು ಪತ್ನಿ ಉಷಾ ಅವರಿಗೆ ಸಮನ್ಸ್​ ಕಳುಹಿಸಿದ್ದಾರೆ.

ಉಷಾ ಶಿವಕುಮಾರ್​ ಒಟ್ಟು ಆಸ್ತಿ
ಉಷಾ ಶಿವಕುಮಾರ್​ ಹೊಂದಿರುವ  ಒಟ್ಟು ಆಸ್ತಿ 112 ಕೋಟಿ ರೂ. 
ಉಷಾ ಹೆಸರಿನಲ್ಲಿ ಬೆಂಗಳೂರು ಸುತ್ತ ಸಾಕಷ್ಟು ಆಸ್ತಿ ಮಾಡಿದ್ದ ಡಿಕೆಶಿ 
ಉಷಾ ಹೆಸರಿನ ಬ್ಯಾಂಕ್‌ ಖಾತೆಗಳ ಮೂಲಕ ವ್ಯವಹಾರ ನಡೆಸಿದ್ದ ಡಿಕೆಶಿ
ಉಷಾ ಹೆಸರಿನಲ್ಲಿ ದೆಹಲಿ,ಬೆಂಗಳೂರು, ಕನಕಪುರ ಸೇರಿ ಹಲವೆಡೆ ಆಸ್ತಿ
ಚುನಾವಣೆ ಅಫಡವಿಟ್ ನಲ್ಲಿ ಪತ್ನಿ ಉಷಾರದ್ದು ಕೃಷಿ ಆದಾಯದ ಮೂಲ ಎಂದಿದ್ದ ಡಿಕೆಶಿ
ಮೈದುನ ಡಿ.ಕೆ.ಸುರೇಶ್ ಗೆ 11 ಕೋಟಿ ರೂ.ಸಾಲ ನೀಡಿರುವ ಉಷಾ
ಪತಿ ಶಿವಕುಮಾರ್ 2.6 ಕೋಟಿ ರೂ. ಸಾಲ ನೀಡಿರುವ ಉಷಾ
10 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಆಸ್ತಿ
28.83 ಕೋಟಿ ಮೌಲ್ಯದ ಜಮೀನು ಖರೀದಿಸಿರುವ ಉಷಾ 
ವಿವಿಧ ಹಂತದಲ್ಲಿರುವ ಕಟ್ಟಡಗಳ ನಿರ್ಮಾಣಕ್ಕೆ 2.63 ಕೋಟಿ ಹೂಡಿಕೆ ಮಾಡಿರುವ ಉಷಾ
ಉಷಾ ಶಿವಕುಮಾರ್​ ಸ್ವತಃ ಖರೀದಿ ಮಾಡಿರುವ  ಆಸ್ತಿ ಮೌಲ್ಯ 57.07 ಕೋಟಿ ರೂ.
ಪಿತ್ರಾರ್ಜಿತವಾಗಿ, ಪತಿಯ ಮೂಲಕ ವರ್ಗಾವಣೆ ಆದ ಉಷಾ ಆಸ್ತಿ ಮೌಲ್ಯ 29.87 ಕೋಟಿ ರೂ.
44.56 ಕೋಟಿ ರೂ. ಸಾಲ ಪಡೆದಿರುವ ಉಷಾ
5 ಅಕೌಂಟ್ ಗಳಲ್ಲಿ 1.06 ಕೋಟಿ ನಗದು ಹೊಂದಿರುವ ಉಷಾ 
25.04 ಕೋಟಿ ಚರಾಸ್ತಿ, 86.95 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಉಷಾ

ಇವೆಲ್ಲವುಗಳಿಗೆ ಆದಾಯ ಎಲ್ಲಿಂದ ಬಂತು ಎನ್ನುವ ವಿವರಣೆ ಕೇಳಲು ಇಡಿ ಅಧಿಕಾರಿಗಳು ಅತ್ತೆ ಹಾಗೂ ಸೊಸೆಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ.

ಈ ಹಿಂದೆ ಪುತ್ರಿ ಐಶ್ವರ್ಯ ಮತ್ತು ಸಹೋದರ ಡಿ.ಕೆ ಸುರೇಶ್ ಅವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದರು. ಇನ್ನು ಡಿಕೆ ಶಿವಕುಮಾರ್ ಇದೇ ಪ್ರಕರಣದಲ್ಲಿ ಪ್ರಸ್ತುತ ತಿಹಾರ್‌ ಜೈಲಿನಲ್ಲಿದ್ದು, ಅವರು ಜಾಮೀನು ಅರ್ಜಿ ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ಒಟ್ಟಿನಲ್ಲಿ ಇಡಿ ಅಧಿಕಾರಿಗಳು ಇಡೀ ಕುಟುಂಬದ ಸದಸ್ಯರನ್ನು ವಿಚಾರಣೆ ಮಾಡಲು ಮುಂದಾಗಿದ್ದು, ಆಸ್ತಿ ವಿವರಣೆ ಕೇಳಲಿದ್ದಾರೆ.

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!