ಶಾಸಕ ಬಸನನಗೌಡ ದದ್ದಲ್ ಸೇರಿ ಉಳಿದ ಕಡೆಯೂ ಇಡಿ ಅಧಿಕಾರಿಗಳು ದಾಳಿಯನ್ನ ಮುಂದುವರೆಸಿದ್ದಾರೆ. ಜಾರಿ ನಿರ್ದೇಶನಾಲಯ ಒಟ್ಟು ಹದಿನೆಂಟಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ರಾತ್ರಿ ಹನ್ನೆರಡು ಗಂಟೆಗೆ ದಾಳಿಗೆ ಅಧಿಕಾರಿಗಳು ವಿರಾಮ ನೀಡಿದ್ದರು. ಆದ್ರೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದ ಸ್ಥಳದಲ್ಲೇ ಉಳಿದುಕೊಂಡಿದೆ. ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಉಳಿದುಕೊಂಡಿದೆ. ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಇದೆ.
ಬೆಂಗಳೂರು(ಜು.11): ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ., ನಾಗೇಂದ್ರ ನಿವಾಸದಲ್ಲಿ ಇಡಿ(ಜಾರಿ ನಿರ್ದೇಶನಾಲಯ) ದಾಳಿ ಮುಂದುವರೆದಿದೆ. ಹೌದು, ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಇಡಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಯುತ್ತಿದ್ದಾರೆ.
ಶಾಸಕ ಬಸನನಗೌಡ ದದ್ದಲ್ ಸೇರಿ ಉಳಿದ ಕಡೆಯೂ ಇಡಿ ಅಧಿಕಾರಿಗಳು ದಾಳಿಯನ್ನ ಮುಂದುವರೆಸಿದ್ದಾರೆ. ಜಾರಿ ನಿರ್ದೇಶನಾಲಯ ಒಟ್ಟು ಹದಿನೆಂಟಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ರಾತ್ರಿ ಹನ್ನೆರಡು ಗಂಟೆಗೆ ದಾಳಿಗೆ ಅಧಿಕಾರಿಗಳು ವಿರಾಮ ನೀಡಿದ್ದರು. ಆದ್ರೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದ ಸ್ಥಳದಲ್ಲೇ ಉಳಿದುಕೊಂಡಿದೆ. ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಉಳಿದುಕೊಂಡಿದೆ. ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಇದೆ.
ವಾಲ್ಮೀಕಿ ನಿಗಮದ ಹಗರಣದ ಆಡಿಯೋ ಬಾಂಬ್..!
ಇಂದು ಬೆಳಗ್ಗೆ 6:30ಕ್ಕೆ ಗಂಟೆ ಬಳಿಕ ಮತ್ತೆ ಪರಿಶೀಲನೆ ಆರಂಭವಾಗಿದೆ. ಇಂದೂ ಸಹ ಪೂರ್ತಿ ದಿನ ವಿಚಾರಣೆ ನಡೆಯಲಿದೆ. ದಾಳಿ ಮಾಡಿರುವ ಎಲ್ಲಾ ಕಡೆ ಕೆಲಸ ಮುಗಿಯುವ ತನಕ ಇಡಿ ಅಧಿಕಾರಿಗಳು ಹೋಗಲ್ಲ. ಒಂದೇ ಕಾಲಕ್ಕೆ ಹದಿನೆಂಟಕ್ಕು ಹೆಚ್ಚು ಸ್ಥಳದಲ್ಲಿ ದಾಳಿ ನಡೆಸಲಾಗಿದೆ. ಎಲ್ಲ ದಾಳಿ ಸ್ಥಳದಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ನಂತ್ರ ಇಂಟರ್ ಲಿಂಕ್ ಇರುವ ಸ್ಥಳದಲ್ಲಿ ಮತ್ತೆ ಪರಿಶೀಲನೆ ನಡೆಸಲಿದ್ದಾರೆ. ಕೊನೆಗೆ ಎಲ್ಲವನ್ನೂ ಸಂಪೂರ್ಣ ಮುಗಿಸಿದ ನಂತರ ಇಡಿ ಅಧಿಕಾರಿಗಳು ಒಟ್ಟಿಗೆ ದಾಳಿ ಅಂತ್ಯ ಮಾಡಲಿದ್ದಾರೆ.