ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳವರಿಗೆ ಉತ್ತಮ ಅವಕಾಶವಿದ್ದು, ಉಚಿತವಾದ ಆನ್‌ಲೈನ್ ತರಬೇತಿ ಪಡೆಯಲು ಸಾಧ್ಯವಿದೆ. ಉಚಿತವಾಗಿ ಆನ್‌ಲೈನ್ ಮೂಲಕ ಪತ್ರಿಕೋದ್ಯಮ ತರಬೇತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಈ ಸುದ್ದಿ ಓದಿ
ಬೆಂಗಳೂರು(ಅ.30): ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳವರಿಗೆ ಉತ್ತಮ ಅವಕಾಶವಿದ್ದು, ಉಚಿತವಾದ ಆನ್‌ಲೈನ್ ತರಬೇತಿ ಪಡೆಯಲು ಸಾಧ್ಯವಿದೆ. ಉಚಿತವಾಗಿ ಆನ್‌ಲೈನ್ ಮೂಲಕ ಪತ್ರಿಕೋದ್ಯಮ ತರಬೇತಿಯನ್ನು ಪಡೆಯಬಹುದು.
ಬದುಕು ಕಮ್ಯುನಿಟಿ ಕಾಲೇಜು ನವ ಪತ್ರಕರ್ತರು ಹಾಗೂ ಅರೆಕಾಲಿಕ ವರದಿಗಾರರಾಗಿ ವೃತ್ತಿ ಆರಂಭಿಸುತ್ತಿರುವವರಿಗೆ ‘ಅನ್ವೇಷಣೆ ರಿಪೋರ್ಟಿಂಗ್’ ಎಂಬ ಆನ್‌ಲೈನ್ ಕೋರ್ಸ್ ಮೂಲಕ ತರಬೇತಿ ನೀಡುತ್ತಿದೆ.
ಬೆಂಗಳೂರು: ತಿಂಗಳಾದರೂ ಆರಂಭವಾಗದ ವೈಟ್‌ಟಾಪಿಂಗ್ ಕಾಮಗಾರಿ
ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅಗತ್ಯವಿರುವ ತಾಂತ್ರಿಕ ಕೌಶಲ್ಯ ಹಾಗೂ ಬರವಣಿಗೆಯ ವಿವಿಧ ಆಯಾಮಗಳನ್ನು ಕೋರ್ಸ್‌ನಲ್ಲಿ ಕಲಿಸಲಾಗುತ್ತಿದೆ. ಇದೊಂದು ಉಚಿತ ಹಾಗೂ ಆನ್‌ಲೈನ್ ಕೋರ್ಸ್ ಆಗಿರುವುದರಿಂದ ಇಲ್ಲಿ ಯಾವುದೇ ಒತ್ತಡ ಇರುವುದಿಲ್ಲ.
ಅರ್ಹರು 2ನೇ ಕ್ರಾಸ್, ನಗರ ಕೇಂದ್ರ ಗ್ರಂಥಾಲಯ ಹಿಂಭಾಗ, 3ನೇ ಬ್ಲಾಕ್, ಜಯನಗರದಲ್ಲಿನ ಸಂಸ್ಥೆಗೆ ಭೇಟಿ ನೀಡಬಹುದು ಅಥವಾ 080 41674949ಗೆ ಸಂಪರ್ಕಿಸಬಹುದು.
ಲಕ್ಷ್ಮೇಶ್ವರ: ದೀಪಾವಳಿಯಲ್ಲಿ ನಕಲಿ ನೋಟುಗಳ ಹಾವಳಿ