ನಗರದ ಹೊಸದುರ್ಗ ತಾಲೂಕಿನಲ್ಲೂ ಇಂತಹದ್ದೇ ಮತ್ತೊಂದು ಘಟನೆ ಸಂಭವಿಸಿದ್ದು, ಕಂಚೀಪುರದಲ್ಲಿ ಭಾರೀ ಶಬ್ದದೊಂದಿಗೆ ಕ್ಷಣಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಕಳೆದ 2 ವರ್ಷಗಳ ಹಿಂದೆಯೂ ಕಂಚೀಪುರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿತ್ತು.
ಚಿತ್ರದುರ್ಗ[ನ.13]: ರಾಜ್ಯದಲ್ಲಿ ಮತ್ತೊಮ್ಮೆ ಜನರಿಗೆ ಲಘು ಭೂಕಂಪದ ಅನುಭವ ಆಗಿದೆ. ಕೆಲ ತಿಂಗಳುಗಳ ಹಿಂದೆ ಮಂಡ್ಯದಲ್ಲಿ ಭೂಕಂಪನದ ಅನುಭವ ಆಗಿತ್ತು, ಇದೀಗ ಚಿತ್ರದುರ್ಗದಲ್ಲಿ ಅಂತಹದ್ದೇ ಘಟನೆ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲೇಕೆರೆ ಗ್ರಾಮದಲ್ಲಿ ಭೂಮಿ ಕಂಪನದ ಅನುಭವ ಆಗಿದೆ. ಭೂಮಿ ಕಂಪನದ ತೀವ್ರತೆ 1.6 ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ 10.23ರ ವೇಳೆಗೆ ಭೂಮಿ ಕಂಪಿಸಿದ್ದು, ಸಿಸ್ಮೋಗ್ರಾಫ್ ಮೀಟರ್’ನಲ್ಲಿ ಭೂಮಿ ಕಂಪನದ ಬಗ್ಗೆ ಮಾಹಿತಿ ದಾಖಲಾಗಿದ್ದು, ಲಘು ಭೂಕಂಪವಾಗಿರುವುದನ್ನು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಅಧಿಕಾರಿಗಳು ಸುವರ್ಣನ್ಯೂಸ್’ಗೆ ಖಚಿತ ಪಡಿಸಿದ್ದಾರೆ.
ಇನ್ನು ನಗರದ ಹೊಸದುರ್ಗ ತಾಲೂಕಿನಲ್ಲೂ ಇಂತಹದ್ದೇ ಮತ್ತೊಂದು ಘಟನೆ ಸಂಭವಿಸಿದ್ದು, ಕಂಚೀಪುರದಲ್ಲಿ ಭಾರೀ ಶಬ್ದದೊಂದಿಗೆ ಕ್ಷಣಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಕಳೆದ 2 ವರ್ಷಗಳ ಹಿಂದೆಯೂ ಕಂಚೀಪುರ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿತ್ತು. ಇದೀಗ ಇಲ್ಲಿ ಭೂಮಿ ಕಂಪಿಸಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.