ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪ ತಡರಾತ್ರಿ 2 ಬಾರಿ ಕಂಪಿಸಿದ ಭೂಮಿ!

By Ravi Janekal  |  First Published Jan 29, 2024, 6:46 AM IST

ಗುಮ್ಮಟ ನಗರಿ ವಿಜಯಪುರದಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ .ರಾತ್ರಿ 12.22 ಹಾಗೂ ರಾತ್ರಿ‌ 1.20 ಕ್ಕೆ ಭೂಮಿ‌ ಕಂಪಿಸಿದ ಅನುಭವವಾಗಿದೆ. ಒಟ್ಟು ಎರಡು ಬಾರಿ ಕಂಪಿಸಿರುವ ಭೂಮಿ. ಭೂಕಂಪನ ತೀವ್ರತೆ ಮೊಬೈಲ್ ಆಪ್ ಗಳಲ್ಲೂ ದಾಖಲಾಗಿದೆ.


ವಿಜಯಪುರ (ಜ.29): ಗುಮ್ಮಟ ನಗರಿ ವಿಜಯಪುರದಲ್ಲಿ ನಿನ್ನೆ ತಡರಾತ್ರಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ

ರಾತ್ರಿ 12.22 ಹಾಗೂ ರಾತ್ರಿ‌ 1.20 ಕ್ಕೆ ಭೂಮಿ‌ ಕಂಪಿಸಿದ ಅನುಭವವಾಗಿದೆ. ಒಟ್ಟು ಎರಡು ಬಾರಿ ಕಂಪಿಸಿರುವ ಭೂಮಿ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್‌ ಮಾಪಕದಲ್ಲಿ 2.9 ತೀವ್ರತೆಯಲ್ಲಿ ಭೂಮಿಯ 5 ಕಿ.ಮೀ ಆಳದಲ್ಲಿ ಸಂಭವಿಸಿರುವುದು ದಾಖಲಾಗಿದೆ ಅಲ್ಲದೇ ಭೂಕಂಪನದ ಮೊಬೈಲ್ ಆಪ್ ಗಳಲ್ಲೂ ಕಂಪನದ ತೀವ್ರತೆ ದಾಖಲಾಗಿದೆ.

Tap to resize

Latest Videos

ಭೂಕಂಪದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ತಡರಾತ್ರಿ ಭೂಮಿ ನಡುಗುತ್ತಿದ್ದಂತೆಯೇ ಆತಂಕಗೊಂಡ ಜನತೆ ಮನೆಗೆ ಹಾಗೂ ತಾವಿದ್ದ ಸ್ಥಳದಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿ ಸಾಮಾನುಗಳು ಸಾಮಗ್ರಿಗಳು ಉರುಳಿವೆ.

 

ಹೊಸ ವರ್ಷದ ಮೊದಲ ದಿನವೇ ಶಾಕ್: ಜಪಾನ್‌ನಲ್ಲಿ 7.6 ತೀವ್ರತೆ ಪ್ರಬಲ ಭೂಕಂಪ; ಅಪಾಯಕಾರಿ ಸುನಾಮಿ ಎಚ್ಚರಿಕೆ

ವಿಜಯಪುರದಲ್ಲಿ ಪದೇಪದೆ ಭೂಕಂಪನ ಅನುಭವವಾಗುತ್ತಿದ್ದು, ಕಳೆದ ವರ್ಷವಂತೂ ಸುಮಾರು ಹತ್ತಕ್ಕೂ ಹೆಚ್ಚು ಸಲ ಈ ಪ್ರದೇಶದಲ್ಲಿ ಕಂಪನಗಳು ಸಂಭವಿಸಿದ್ದವು. ಇದೀಗ ಹೊಸ ವರ್ಷದಲ್ಲಿ ಮೊದಲ ಭೂಕಂಪನದ ಅನುಭವವಾಗಿದೆ ಎನ್ನುತ್ತಾರೆ ಸ್ಥಳೀಯರು.

click me!