ವಿಜಯಪುರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನ

By Govindaraj SFirst Published Aug 23, 2022, 3:30 AM IST
Highlights

ಕಳೆದ ಕೆಲ ವರ್ಷಗಳಿಂದ ಆಗಾಗ ಭೂಕಂಪನಕ್ಕೆ ಸಾಕ್ಷಿಯಾಗುತ್ತಿರುವ ವಿಜಯಪುರ ಜಿಲ್ಲೆಯಲ್ಲಿ ಸೋಮವಾರವೂ ಭೂಕಂಪನ ಸಂಭವಿಸಿದೆ. ಇದು ಸತತ ಮೂರನೇ ದಿನ ನಡೆಯುತ್ತಿರುವ ಭೂಕಂಪನವಾಗಿದ್ದು ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ.

ವಿಜಯಪುರ (ಆ.23): ಕಳೆದ ಕೆಲ ವರ್ಷಗಳಿಂದ ಆಗಾಗ ಭೂಕಂಪನಕ್ಕೆ ಸಾಕ್ಷಿಯಾಗುತ್ತಿರುವ ವಿಜಯಪುರ ಜಿಲ್ಲೆಯಲ್ಲಿ ಸೋಮವಾರವೂ ಭೂಕಂಪನ ಸಂಭವಿಸಿದೆ. ಇದು ಸತತ ಮೂರನೇ ದಿನ ನಡೆಯುತ್ತಿರುವ ಭೂಕಂಪನವಾಗಿದ್ದು ಜನರು ತೀವ್ರ ಆತಂಕಕ್ಕೀಡಾಗಿದ್ದಾರೆ. ಶನಿವಾರ ವಿಜಯಪುರ ನಗರದಲ್ಲಿ ಭೂಕಂಪನ ಜನರ ಅನುಭವಕ್ಕೆ ಬಂದಿದೆ. ಭಾನುವಾರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ. 

ಸೋಮವಾರ ಸಂಜೆ 4.26ಕ್ಕೆ ವಿಜಯಪುರದಲ್ಲಿ ಮತ್ತೆ ಭೂಕಂಪನವಾಗಿದೆ. ಭೂಮಿಯಿಂದ 10 ಕಿ.ಮಿ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪಕದಲ್ಲಿ 2.6ರಷ್ಟು ತೀವ್ರತೆ ದಾಖಲಾಗಿದೆ. ಈ ಭೂಕಂಪನದ ಕೇಂದ್ರ ಬಿಂದು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಗ್ನೇಯ ಭಾಗದಲ್ಲಿ 2.9 ಕಿಮಿ ದೂರದಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ.

Vijayapura: ಮೈನವಿರೇಳಿಸಿದ ಟಗರಿನ ಕಾಳಗ: ವೀಕ್ಷಣೆಗೆ ಅಪಾರ ಜನಸ್ತೋಮ

ನಗರದಾದ್ಯಂತ ಭೂಕಂಪನ ಅನುಭವ: ವಿಜಯಪುರ ನಗರದಾಧ್ಯಂತ ಭೂಕಂಪನ ಅನುಭವವಾಗಿದೆ. ಸರಿಯಾಗಿ ರಾತ್ರಿ 8.16 ನಿಮಿಷಕ್ಕೆ ಭೂಕಂಪನ ಅನುಭವವಾಗಿದೆ. ನಗರದ ಗೋಳಗುಮ್ಮಟ ಏರಿಯಾ, ಬಸವ ನಗರ, ಐಶ್ವರ್ಯ ನಗರ, ಠಕ್ಕೆ, ರಾಜಕುಮಾರ್‌ ಲೇಔಟ್‌ ಸೇರಿದಂತೆ ನಗರದಲ್ಲೆಡೆ ಭೂಕಂಪನ ಅನುಭವಾಗಿದೆ. ಮನೆಯಲ್ಲಿದ್ದವರಿಗೆ ಭೂಕಂಪನದ ಸ್ಪಷ್ಟ ಅನುಭವ ಉಂಟಾಗಿದೆ. ಅದ್ರಲ್ಲು ಎರಡಂತಸ್ಥಿನ ಮನೆಗಳಲ್ಲಿ ವಾಸವಿರುವವರಿಗೆ ಹೆಚ್ಚಿನ ಕಂಪನದ ಅನುಭವ ಉಂಟಾಗಿದೆ.

ಭೂಕಂಪನ ಆಫ್‌ಗಳಲ್ಲು ಕಂಪನ ದಾಖಲು: ಭೂಕಂಪನದ ಅಪಡೇಟ್‌ ಹಾಗೂ ತೀವ್ರತೆಗಳ ಬಗ್ಗೆ ಮಾಹಿತಿ ನೀಡುವ ಆಫ್‌ಗಳಲ್ಲು ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದ ಬಗ್ಗೆ ದಾಖಲಾಗಿದೆ. ವಿಜಯಪುರ ನಗರ ಅಷ್ಟೇ ಅಲ್ಲದೆ ಬಸವನ ಬಾಗೇವಾಡಿ, ಇಂಡಿ, ಸಿಂದಗಿ ಭಾಗಗಳಲ್ಲು ಭೂಕಂಪನ ಉಂಟಾಗಿರುವ ಬಗ್ಗೆ ಆಫ್‌ಗಳಲ್ಲಿ ಮಾಹಿತಿ ಅಪಡೇಟ್‌ ಆಗಿದೆ.

ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲು ಕಂಪನ?: ವಿಜಯಪುರ ಜಿಲ್ಲೆ ಅಷ್ಟೆ ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲು ಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಉಂಟಾದ ಭೂಕಂಪನಕ್ಕಿಂತಲು ತೀವ್ರತೆ ಕಮ್ಮಿ ಇರಬಹುದು ಎಂದು ಶಂಕಿಸಲಾಗಿದೆ.

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ಕಳೆದ ತಿಂಗಳು ಸಹ ಸಂಭವಿಸಿದ್ದ ಭೂಕಂಪನ: ಕಳೆದ ತಿಂಗಳು ಜುಲೈ 9ರಂದು ಸಹ ಭೂಕಂಪನ ಸಂಭವಿಸಿತ್ತು. ಅಂದು ಎರಡು ಬಾರಿ ಭೂಮಿ ಕಂಪಿಸಿತ್ತು. ಬೆಳಗಿನ ಜಾವ 6.22 ನಿಮಿಷಕ್ಕೆ 4.9 ರಷ್ಟು ತೀವ್ರತೆ ದಾಖಲಾಗಿತ್ತು. 6 ಗಂಟೆ 24 ನಿಮಿಷಕ್ಕೆ 4.6 ನಷ್ಟು ತೀವ್ರತೆ ದಾಖಲಾಗಿತ್ತು. ಹಾಗೇ ನೋಡಿದ್ರೆ ಕಳೆದ ವರ್ಷ ವಿಜಯಪುರದಲ್ಲಿ ಉಂಟಾದ ಭೂಕಂಪನಕ್ಕಿಂತಲು ನಡುಗಿದ ಪ್ರಮಾಣ ಹೆಚ್ಚಿತ್ತು ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡೆಸಿದ್ದರು. ಮಹಾರಾಷ್ಟ್ರ ರಾಜ್ಯದ ಸಾಂಗಲಿ ಹಾಗೂ ಸೊಲ್ಲಾಪುರಗಳು ಭೂಕಂಪನ ಕೇಂದ್ರಗಳು ಎನ್ನಲಾಗಿತ್ತು.

click me!