ಅಂತರ ಜಿಲ್ಲಾ ಪ್ರಯಾಣಕ್ಕೆ ಇ-ಪಾಸ್ ಪಡೆಯುವುದು ಹೇಗೆ?

Suvarna News   | Asianet News
Published : May 14, 2020, 03:38 PM ISTUpdated : May 14, 2020, 04:58 PM IST
ಅಂತರ ಜಿಲ್ಲಾ ಪ್ರಯಾಣಕ್ಕೆ ಇ-ಪಾಸ್ ಪಡೆಯುವುದು ಹೇಗೆ?

ಸಾರಾಂಶ

ಲಾಕ್‌ಡೌನ್ ಸಡಿಲಿಕೆಯಿಂದ ಕೆಲ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಕಂಪನಿ, ಕೈಗಾರಿಕೆಗಳು ಪುನರ್ ಆರಂಭಗೊಂಡಿದೆ. ಹೀಗಾಗಿ ಜನರ ಓಡಾಟ ಆರಂಭಗೊಂಡಿದೆ. ಆದರೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಅಗತ್ಯವಿದೆ. ಪಾಸ್ ಇಲ್ಲದ ವಾಹನಗಳನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರವೇಶ ನಿರಾಕರಿಸಲಾಗಿದೆ. ಅಂತರ್ ಜಿಲ್ಲಾ ಪಾಸ್ ಪಡೆಯುವುದು ಹೇಗೆ ? ಇಲ್ಲಿದೆ ವಿವರ.

ಬೆಂಗಳೂರು(ಮೇ.14): ಕೊರೋನಾ ಹಾಟ್‌ಸ್ಪಾಟ್, ರೆಡ್ ಝೋನ್ ಹಾಗೂ ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಿಯಮ ಕಟ್ಟು ನಿಟ್ಟಾಗಿದೆ. ಆದರೆ ಇನ್ನುಳಿದ ವಲಯಗಳಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಇ ಪಾಸ್ ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಕೆಲ ನಿಯಮಗಳನ್ನು  ರೂಪಿಸಲಾಗಿದೆ.

ಲಾಕ್‌ಡೌನ್:‌ ಕೆಲಸ ಕಳೆದುಕೊಂಡವರಿಗಾಗಿ ಹೊಸ ಪ್ರಯತ್ನ, ನೋಂದಣಿ ಆರಂಭ.

ಸರ್ಕಾರದ ಆದೇಶದ ಪ್ರಕಾರ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ತುರ್ತು ಅಗತ್ಯವಿರುವವರಿಗೆ ನೀಡಲಾಗುತ್ತಿದೆ. ಈ ರೀತಿ ನೀಡುವ ಪಾಸುಗಳು ಕೇವಲ ಒಂದು ಬಾರಿ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಈ ಪಾಸ್ ಬಳಿಸಿ ವಾಪಸ್ ಬರುವಂತಿಲ್ಲ. ಪಾಸ್ ಪಡೆಯಲು ಹತ್ತಿರದ ತಹಶಿಲ್ದಾರ್ ಕಚೇರಿಗೆ ತೆರಳಿ ಅಗತ್ಯವಿರುವ ದಾಖಲೆ ಪತ್ರಗಳನ್ನು ನೀಡಿ ಪಾಸ್ ಪಡೆದುಕೊಳ್ಳಬಹುದು.

ಮೂರನೇ ಹಂತದ ಲಾಕ್‌ಡೌನ್‌ ಕೊನೆ, ಹೇಗಿರಲಿದೆ 4.0?

ಆರೋಗ್ಯ ತುರ್ತು ಅವಶ್ಯಕತೆ ಇದ್ದವರಿಗೆ, ಮೆಡಿಕಲ್ ಉತ್ಪನ್ನಗಳ ಸಾಗಾಣೆ ಸೇರಿದಂತೆ ಕೆಲ ಅಗತ್ಯ ಕ್ಷೇತ್ರದ ಕಾರ್ಮಿಕರಿಗೆ ಅಂತರ್ ಜಿಲ್ಲಾ ಪಾಸ್ ವಿತರಿಸಲಾಗುತ್ತಿದೆ. ಮೆಡಿಕಲ್ ಸರ್ಟಿಫಿಕೇಟ್, ಕಂಪನಿ ಪತ್ರ, ಕಂಪನಿ ಗುರುತಿನ ಚೀಟಿಯನ್ನು ಇ ಪಾಸ್ ಪಡೆದುಕೊಳ್ಳಲು ನೀಡಬೇಕು. 

ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ತಹಶಿಲ್ದಾರ್ ಹಾಗೂ ಡೆಪ್ಯೂಟಿ ಕಮಿಶನರ್ ಪರಿಶೀಲಿಸಿ ಪಾಸ್ ನೀಡಲಿದ್ದಾರೆ. 

8 ಅಂತರ್ ಜಿಲ್ಲಾ ಪ್ರಯಾಣ ಫ್ರೀ:
ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಅಕ್ಕಪಕ್ಕದ 8 ಜಿಲ್ಲೆಗಳಿಗೆ ಪ್ರಯಾಣ ಮಾಡಲು ಯಾವುದೇ ಪಾಸ್ ಬೇಕಿಲ್ಲ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರಿಗೆ ಪಾಸ್ ಮುಕ್ತ ಓಡಾಟಕ್ಕೆ ಅವಕಾಶ ನೀಡಲಾಗಿದೆ.

ಪಾಸ್ ಮುಕ್ತ ಓಡಾಟಕ್ಕೆ 8 ಜಿಲ್ಲೆಗಳನ್ನು 2 ಘಟಕಗಳಾಗಿ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಯನ್ನು  ಒಂದು ಘಟಕವಾಗಿ ವಿಂಗಡಿಸಲಾಗಿದೆ. ಇನ್ನೊಂದು ಘಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯನ್ನು ಸೇರಿಸಲಾಗಿದೆ.

ಪಾಸ್ ಮುಕ್ತ ಓಡಾಟದ ಅವಕಾಶವನ್ನು ಕಾರ್ಮಿಕರು, ಉದ್ಯೋಗಿಗಳು ಮಾತ್ರವೇ ಅಥವಾ ಇತರರಿಗೆ ಅನ್ವಯಿಸಲಾಗುತ್ತಾ ಅನ್ನೋ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

ಪಾಸ್ ಪಡೆಯಲು ಇಲ್ಲಿ ಕ್ಲಿಕ್ಕಿಸಿ, ಅಗತ್ಯ ಮಾಹಿತಿಗಳನ್ನು ನೀಡಿ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!