ವಿದ್ಯುತ್ ಆಯ್ತು, ಈಗ ಕುಡಿಯುವ ನೀರಿನ ದರ ಏರಿಕೆ: 4 ಸ್ಲ್ಯಾಬ್‌ನಡಿ ಪರಿಷ್ಕರಣೆ

Published : Apr 10, 2025, 08:54 AM ISTUpdated : Apr 10, 2025, 08:57 AM IST
ವಿದ್ಯುತ್ ಆಯ್ತು, ಈಗ ಕುಡಿಯುವ ನೀರಿನ ದರ ಏರಿಕೆ: 4 ಸ್ಲ್ಯಾಬ್‌ನಡಿ ಪರಿಷ್ಕರಣೆ

ಸಾರಾಂಶ

ಕುಡಿಯುವ ನೀರಿನ ದರ ಏಪ್ರಿಲ್‌ನಿಂದಲೇ ಏರಿಕೆಯಾಗಲಿದ್ದು, ಪ್ರತಿ ಸಾವಿರ ಲೀಟರ್‌ಗೆ 1.50 ರು.ನಿಂದ 10 ರು.ವರೆಗೆ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. 

ಬೆಂಗಳೂರು (ಏ.10): ಕುಡಿಯುವ ನೀರಿನ ದರ ಏಪ್ರಿಲ್‌ನಿಂದಲೇ ಏರಿಕೆಯಾಗಲಿದ್ದು, ಪ್ರತಿ ಸಾವಿರ ಲೀಟರ್‌ಗೆ 1.50 ರು.ನಿಂದ 10 ರು.ವರೆಗೆ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾವೇರಿ ನೀರಿನ ದರ ಪರಿಷ್ಕರಣೆ ಅಧಿಕೃತ ಆದೇಶ ಗುರುವಾರ ಪ್ರಕಟಿಸಲಾಗುತ್ತಿದ್ದು, ಪ್ರತಿ ಲೀಟರ್‌ಗೆ ಗರಿಷ್ಠ 1 ಪೈಸೆ ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ಈ ಪ್ರಕಾರ, ಮಾಸಿಕ 8 ಸಾವಿರ ಲೀಟರ್‌ ಬಳಕೆದಾರರಿಗೆ 12 ರು, 50 ಸಾವಿರ ಲೀಟರ್ ಬಳಕೆದಾರರಿಗೆ 500 ರು. ಹೆಚ್ಚಳವಾಗಲಿದೆ ಎಂದು ವಿವರಿಸಿದರು.

ಗೃಹ, ಅಪಾರ್ಟ್‌ಮೆಂಟ್‌ ಹಾಗೂ ವಸತಿಯೇತರ ಬಳಕೆಯ ನೀರಿನ ದರವನ್ನು ತಲಾ 4 ಸ್ಲ್ಯಾಬ್‌ನಡಿ ಪರಿಷ್ಕರಿಸಿದೆ. ಗೃಹ ಬಳಕೆಯ ಪ್ರತಿ ಲೀಟರ್‌ಗೆ ಕನಿಷ್ಠ 0.015 ನಿಂದ ಗರಿಷ್ಠ 1 ಪೈಸೆ ವರೆಗೆ ಹೆಚ್ಚಿಸಿದೆ. ಅಪಾರ್ಟ್‌ಮೆಂಟ್‌ಗೆ ಕನಿಷ್ಠ 0.030 ನಿಂದ ಗರಿಷ್ಠ 1 ಪೈಸೆ, ವಾಣಿಜ್ಯ ಬಳಕೆಗೆ 1 ಪೈಸೆಯಿಂದ 1.50 ಪೈಸೆ ಹೆಚ್ಚಿಸಿದೆ. ಕೈಗಾರಿಕೆ, ಈಜುಕೊಳ ಸೇರಿ ಸಗಟು ನೀರಿನ ಬಳಕೆದಾರರಿಗೆ ಸಾವಿರ ಲೀಟರ್‌ಗೆ 90 ರು.ನಿಂದ 99 ರು.ಗೆ ಹೆಚ್ಚಳ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಗವರ್ನರ್‌ಗೆ ಮತ್ತೊಂದು ದೂರು ಸಲ್ಲಿಕೆ

ಸ್ಯಾನಿಟರಿ ನೀರಿನ ದರ ಭಾರೀ ಏರಿಕೆ: ಕುಡಿಯುವ ನೀರಿನ ದರ ಏರಿಕೆಗಿಂತ, ಸ್ಯಾನಿಟರಿ ನೀರಿನ ದರ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಈವರೆಗೆ ಬಳಕೆ ಮಾಡುವ ನೀರಿನ ದರಕ್ಕೆ ಶೇ.25ರಷ್ಟು ಸ್ಯಾನಿಟರಿ ನೀರಿಗೆ ಶುಲ್ಕ ವಿಧಿಸಲಾಗಿತ್ತು. ಅದನ್ನು ಏಕಾಏಕಿ ಶೇ.50ಕ್ಕೆ ಹೆಚ್ಚಿಸಲಾಗಿದೆ. 14 ರು. ಸ್ಯಾನಿಟರಿ ನೀರಿನ ಶುಲ್ಕ ಪಾವತಿ ಮಾಡುತ್ತಿದ್ದವರು, ಇದೀಗ 34 ರು. ಪಾವತಿಸಬೇಕಾಗಲಿದೆ.

ಉದಾಹರಣೆ: ಗೃಹ ಬಳಕೆಯ ಗರಿಷ್ಠ 8 ಸಾವಿರ ಲೀಟರ್‌ ಬಳಕೆದಾರರು, ಈವರೆಗೆ 56 ರು. ನೀರಿನ ದರ, 30 ಮೀಟರ್‌ ದರ ಹಾಗೂ ಸ್ಯಾನಿಟರಿ ನೀರಿನ ದರ 14 ರು. ಸೇರಿ ಮಾಸಿಕ ಒಟ್ಟು 100 ರು. ಪಾವತಿಸಬೇಕಾಗಿತ್ತು. ಪರಿಷ್ಕೃತ ದರ ಜಾರಿಗೆ ಬಂದರೆ ಹೆಚ್ಚುವರಿ 32 ರು. ಸೇರಿಸಿ ಒಟ್ಟು132 ರು. ಪಾವತಿಸಬೇಕಾಗಲಿದೆ. ಒಂದು ವೇಳೆ ಕೊಳವೆ ಬಾವಿ ಹೊಂದಿದ್ದರೆ 100 ರು. ಸೇರಿಸಿ 232 ರು. ಪಾವತಿಸಬೇಕಾಗಲಿದೆ. ಇದು, ನೀರಿನ ಬಳಕೆ ಹಾಗೂ ಮೀಟರ್‌ ದರದ ಆಧಾರದಲ್ಲಿ ವ್ಯತ್ಯಾಸವಾಗಲಿದೆ.

ಪ್ರತಿ ವರ್ಷ ಶೇ.3 ರಷ್ಟು ಏರಿಕೆಗೆ ಪ್ರಸ್ತಾವನೆ: ಹಲವು ವರ್ಷದ ಬಳಿಕ ಏಕಾಏಕಿ ದರ ಹೆಚ್ಚಳದಿಂದ ಜನರಿಗೆ ಹೊರೆಯಾಗಲಿದೆ. ಜತೆಗೆ, ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಏಪ್ರಿಲ್‌ನಿಂದ ನೀರಿನ ದರ ಶೇ.3 ರಷ್ಟು ಏರಿಕೆಗೆ ತೀರ್ಮಾನಿಸಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕರೆ ಪ್ರತಿ ವರ್ಷ ಶೇ.3 ರಷ್ಟು ದರ ಏರಿಕೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಡಾ.ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಶೇ.50 ರಷ್ಟು ಹೊರೆ ಕಡಿಮೆ: ರಾಜ್ಯ ಸರ್ಕಾರಕ್ಕೆ ಪ್ರತಿ ಲೀಟರ್‌ಗೆ 8 ಪೈಸೆಯಿಂದ 15 ಪೈಸೆ ವರೆಗೆ ಏರಿಕೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ನಗರದ ಶಾಸಕರೊಂದಿಗೆ ಸಭೆಯಲ್ಲಿ ಪ್ರಸ್ತಾಪಿಸಲಾದ ಅಂಶಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರ ಜಲಮಂಡಳಿಗೆ ನೀಡಿತ್ತು. ಜಲಮಂಡಳಿ ನಿರ್ದೇಶಕರ ಸಭೆ ನಡೆಸಿ ಗರಿಷ್ಠ 1 ಪೈಸೆ ಹೆಚ್ಚಳಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು. ದರ ಏರಿಕೆಯಿಂದ ಜಲಮಂಡಳಿ ಆರ್ಥಿಕ ಹೊರೆ ಶೇ.50 ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.

ಜಲಮಂಡಳಿ ಬಾಕಿ ವಸೂಲಿಗೂ ಒಟಿಎಸ್‌: ಆಸ್ತಿ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ಜಾರಿಗೊಳಿಸಿದ ಒನ್ ಟೈಮ್ ಸೆಟಲ್ಮೆಂಟ್‌(ಒಟಿಎಸ್) ಯೋಜನೆ ಜಾರಿಗೆ ಇದೀಗ ಬೆಂಗಳೂರು ಜಲಮಂಡಳಿಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. 700 ಕೋಟಿ ರು. ನೀರಿನ ಬಾಕಿ ಬರಬೇಕಿದೆ. ಬಡ್ಡಿ ಹಾಗೂ ದಂಡ ಕಡಿತಗೊಳಿಸಿ ಬಾಕಿ ಪಾವತಿಗೆ 2 ತಿಂಗಳು ಅವಕಾಶ ನೀಡಲು ಪ್ರಸ್ತಾವ ಸಲ್ಲಿಕೆ ಮಾಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಚೆಕ್‌ಬೌನ್ಸ್‌ ಕೇಸಲ್ಲಿ ನಾಗೇಂದ್ರಗೆ ದಂಡ: ತಪ್ಪಿದರೆ ಜೈಲು ಶಿಕ್ಷೆ

ದರ ಏರಿಕೆ ವಿವರ
- ಗೃಹ, ಅಪಾರ್ಟ್ಮೆಂಟ್‌, ವಸತಿಯೇತರ ಬಳಕೆ ನೀರು ದರ 4 ಸ್ಲ್ಯಾಬ್‌ನಡಿ ಪರಿಷ್ಕರಣೆ
- ಗೃಹ ಬಳಕೆಯ ಪ್ರತಿ ಲೀಟರ್‌ಗೆ ಕನಿಷ್ಠ 0.015 ನಿಂದ ಗರಿಷ್ಠ 1 ಪೈಸೆ ವರೆಗೆ ಏರಿಕೆ
- ಅಪಾರ್ಟ್‌ಮೆಂಟ್‌ಗೆ 0.030 ನಿಂದ 1 ಪೈಸೆ, ವಾಣಿಜ್ಯ ಬಳಕೆಗೆ 1ರಿಂದ 1.50 ರು.
- ಕೈಗಾರಿಕೆ/ಈಜುಕೊಳ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 90 ರು.ನಿಂದ 99 ರು.
- ಇನ್ನು ಹಾಲಿ 14 ರು. ಇದ್ದ ಸ್ಯಾನಿಟರಿ ನೀರಿನ ಶುಲ್ಕವನ್ನು 34 ರು.ಗೆ ಏರಿಸಿ ಆದೇಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂದ ಎರಡೂ ಹಡಗುಗಳನ್ನು ಗುಜರಾತ್‌ಗೆ ಏಕೆ ಕಳುಹಿಸಿದರು: ಜೋಶಿ ರಾಜ್ಯದ ಹಿತಕ್ಕೆ ಕೆಲಸ ಮಾಡಬೇಕು: ಡಿಕೆಶಿ
ಚಿಕ್ಕಮಗಳೂರು: ನಾರಾಯಣ ಹೃದಯಾಲಯದ ನರ್ಸ್‌ ಹೊಳೆಗೆ ಹಾರಿ ಸಾವಿಗೆ ಶರಣು