
ಬೆಂಗಳೂರು(ಜ.26): ಕುಮಾರಸ್ವಾಮಿ ಲೇಔಟ್ ಸಮೀಪ ಸುಮಾರು 22 ಎಕರೆಯಲ್ಲಿ ಬಿಬಿಎಂಪಿಯ ಚುಂಚಘಟ್ಟಕೆರೆಗೆ ಹರಿಸಲಾಗುತ್ತಿದ್ದ ಕೊಳಚೆ ನೀರನ್ನು ನಿಲ್ಲಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಗೆ ಕೊಳಚೆ ನೀರು ಹರಿಯ ಬಿಟ್ಟಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಬ್ಬರು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಕುರಿತು ಶುಕ್ರವಾರ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಲಮಂಡಳಿ ಅಧಿಕಾರಿಗಳು ಕೆರೆಗೆ ಹರಿಯುತ್ತಿದ್ದ ಒಳಚರಂಡಿ ನೀರನ್ನು ನಿಲ್ಲಿಸಿದೆ.
ಮತ್ತೆ ವಕೀಲಿಕೆ ಆರಂಭಿಸ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?
ಈ ಕುರಿತು ಪ್ರತಿಕ್ರಿಯೆ ನೀಡಿದ ಜಲಮಂಡಳಿಯ ಎಂಜಿನಿಯರ್ ಶ್ರೀನಿವಾಸ್, ಕೆರೆಯ ಬಳಿಯ ಕೊಳಚೆ ನೀರು ಹರಿಯುವ ಕೊಳವೆ ಮಾರ್ಗ ಬ್ಲಾಕ್ ಆಗಿತ್ತು. ಅದನ್ನು ಸರಿ ಪಡಿಸಿ ಕೊಳಚೆ ನೀರನ್ನು ಕೊಳವೆ ಮೂಲಕ ಹರಿಸಲಾಗುತ್ತಿದೆ. ಕೆರೆಗೆ ಹರಿಯುತ್ತಿದ್ದ ಕೊಳಚೆ ನೀರನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಕೆರೆ ವಿಭಾಗದ ಮುಖ್ಯಎಂಜಿನಿಯರ್ ಮೋಹನ್ ಕೃಷ್ಣ, ಕಳೆದ ಆಗಸ್ಟ್‌ನಲ್ಲಿ ಚುಂಚಘಟ್ಟಕೆರೆ ಅಭಿವೃದ್ಧಿಪಡಿಸಲಾಗಿತ್ತು. ಕಳೆದ ನವೆಂಬರ್‌ನಿಂದ ಜಲಮಂಡಳಿಯ ಕೊಳಚೆ ನೀರನ್ನು ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಜಲಮಂಡಳಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೋನ್ ಮಾಡಿದರೂ ಜಲಮಂಡಳಿ ಅಧಿಕಾರಿಗಳು ಸ್ವೀಕರಿಸುತ್ತಿರಲಿಲ್ಲ. ಅನಿವಾಯವಾಗಿ ಪೊಲೀಸ್ ದೂರು ನೀಡಬೇಕಾಯಿತು. ಇದೀಗ ಕೆರೆಗೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಉದ್ದಿಮೆ ಪರವಾನಗಿಗಾಗಿ ಇನ್ನು ಕಚೇರಿಗೆ ಅಲೆಯಬೇಕಿಲ್ಲ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ