
ಬೆಂಗಳೂರು(ಮೇ.11): ಕೊರೋನಾ ಮಹಾಮಾರಿ... ಏಕಾಏಕಿ ಎಂಟ್ರಿ ಕೊಟ್ಟ ಈ ವೈರಸ್ ಇಡೀ ಮನುಕುಲವನ್ನೇ ನಡುಗಿಸಿದೆ. ಸಿಕ್ಕ ಸಿಕ್ಕವರನ್ನು ತನ್ನ ಗುರಿಯಾಗಿಸಿಕೊಳ್ಳುವ ಈ ವೈರಸ್‌ನಿಂದಾಗಿ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲೂ ಮೊದಲ ಅಲೆಗಿಂತ, ಎರಡನೇ ಅಲೆ ಮತ್ತಷ್ಟು ಭೀರಕತೆಯಿಂದ ಕೂಡಿದೆ. ಅನೇಕ ಮಂದಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದಾರೆ. ಪುಟ್ಟ, ಪುಟ್ಟ ಮಕ್ಕಳು ಈ ಮಹಾಮಾರಿಯಿಂದ ಅನಾಥರಾಗಿದ್ದಾರೆ. ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಕೆಟ್ಟಿದೆ ಎಂದರೆ ಉಸಿರಾಡುವ ಗಾಳಿಗೂ ಜನರು ಪರದಾಡುತ್ತಿದ್ದಾರೆ. ಆದರೆ ಈ ಎಲ್ಲಾ ಸಾವು ನೋವಿನ ನಡುವೆ ಸೋಂಕಿತರ ಜೀವ ಉಳಿಸಲು ತಮ್ಮ ಬಗ್ಗೆ ಯೋಚಿಸದೆ ಸೇವೆಯಲ್ಲಿ ನಿರತರಾಗಿರುವ ವೈದ್ಯ ಸಮೂಹ ಇಂದು ವಿಚಿತ್ರ ಸಂದಿಗ್ಧ ಪರಿಸ್ಥಿತಿಯಲ್ಲಿದೆ.
ಕೊರೋನಾ ಕಂಟ್ರೋಲ್ : ಸ್ವತಃ ಫೀಲ್ಡಿಗಿಳಿದ ಸಿಎಂ ಬಿಎಸ್ ಯಡಿಯೂರಪ್ಪ
ಹೌದು ವೈದ್ಯರು ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿಗೆ ಸಿಲುಕಿದ್ದಾರೆ. ಎರಡನೇ ಅಲೆಯಲ್ಲಿ ಕೊರೋನಾಗೆ ಯುವ ಸಮೂಹ ಬಲಿಯಾಗಲಾರಂಭಿಸಿದೆ. ಅತ್ತ ಹಿರಿಯರಿಗೂ ಈ ಸೋಂಕು ತಗುಲುತ್ತಿದೆ. ಹೀಗಿರುವಾಗ ವೈದ್ಯರು ಯಾರನ್ನು ಉಳಿಸುವುದು? ಯಾರಿಗೆ ಚಿಕಿತ್ಸೆ ಕೊಡೋದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಕಡಿಮೆ ತೀವ್ರತೆ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಗುಣಮುಖ ಆಗ್ತಾರೆ ಎನ್ನುವ ಭರವಸೆ ಇದೆ. ಆದರೆ ಹೆಚ್ಚು ತೀವ್ರತೆ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಿದರೂ ಗುಣಮುಖ ಆಗ್ತಿಲ್ಲ.
ಸಂದಿಗ್ಧತೆ ಏಕೆ?
ಐಸಿಯು ಬೆಡ್ ಹಾಗೂ ವೆಂಟಿಲೇಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮಧ್ಯೆ ಬೆಡ್ ಹಂಚಿಕೆ ಮಾಡುವ ವಿಚಾರದಲ್ಲಿ ವೈದ್ಯರು ಧರ್ಮ ಸಂಕಟ ಅನುಭವಿಸುತ್ತಿದ್ದಾರೆ. ಹಿರಿಯರಿಗೆ ಆದ್ಯತೆ ನೀಡೋದೇ? ಬಾಳಿ ಬದುಕಬೇಕಾದ ಯುವಜನರ ಪ್ರಾಣ ಉಳಿಸೋದಾ? ಇಂತಹ ಪರಿಸ್ಥಿತಿಯಲ್ಲಿ ಯುವಜನರ ಪ್ರಾಣ ಕಾಪಾಡುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ವಿವಿಧ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
"
ಯಾವ ರಾಜ್ಯಕ್ಕೆ ಲಸಿಕೆ?
ಐಸಿಯು ಬೆಡ್ ಹಂಚಿಕೆ ವಿಚಾರದಲ್ಲಿ ವಯಸ್ಸು ಮಾನದಂಡವಾಗಬೇಕು. ಹೀಗಂತ ವಯಸ್ಸಾದ ರೋಗಿಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕೆಂದಲ್ಲ. ಆದರೆ ಈ ಮಹಾಮಾರಿಯಿಂದ ಗಂಭೀರ ಸ್ಥಿತಿಗೆ ತಲುಪಿರುವ ಯುವಕರ ಕುಟುಂಬದ ನೋವು ನೋಡಲಾಗುತ್ತಿಲ್ಲ ಎಂಬುವುದು ಐಸಿಯುನಲ್ಲಿ ಸೇವೆ ಸಲ್ಲಿಸುವ ಓರ್ವ ಸಿಬ್ಬಂದಿ ಮಾತಾಗಿದೆ.
ಲಾಕ್‌ಡೌನ್ ಇದ್ರೂ ಮುಗಿಯದ ತಿರುಗಾಟ, ಮಾಜಿ ಸಂಸದ ಅರೆಸ್ಟ್!
ನನ್ನ 35 ವರ್ಷ ವೃತ್ತಿ ಬದುಕಿನಲ್ಲಿ ನಾನು ಇಂತಹ ನೈತಿಕ ಗೊಂದಲಕ್ಕೆ ಯಾವತ್ತೂ ಸಿಕ್ಕಾಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೀಮಿತ ಸೌಲಭ್ಯವಿದ್ದಾಗ ಯಾರಿಗೆ ಆದ್ಯತೆ ನೋಡೋದು? ಓಬ್ಬ ವೈದ್ಯ ಹಿರಿಯರು ಮತ್ತು ಯುವಕರು ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಆದರೀಗ ಪರಿಸ್ಥಿತಿ ಭಿನ್ನವಾಗಿದೆ. ಅನಾರೋಗ್ಯಕ್ಕೀಡಾದ ಬದುಕಕುವ ಸಾಧ್ಯತೆ ಕಡಿಮೆ ಇರುವ ಹಿರಿಯರು ಹಾಗೂ ಬದುಕುಳಿಯುವ ಸಾಧ್ಯತೆಗಳಿರುವ ಯುವಕರ ಮಧ್ಯೆ ನನ್ನ ಆಯ್ಕೆ ಎರಡನೆಯದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾವು ಕುಟುಂಬ ಸದಸ್ಯರಿಗೂ ರೋಗಿಯ ಪರಿಸ್ಥಿತಿಇಯನ್ನು ಅರ್ಥೈಸುತ್ತೇವೆ ಎಂಬುವುದು ಪಶ್ಚಿಮ ಬೆಂಗಳೂರಿನ ಆಸ್ಪತ್ರೆಯ ವೈದ್ಯರೊಬ್ಬರ ಮಾತಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ