ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ: ಸೋಂಕಿತರ ಸೇವೆಯಲ್ಲಿ ವೈದ್ಯ!

By Kannadaprabha News  |  First Published Apr 11, 2020, 8:14 AM IST

ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ!| ಕೊರೋನಾ ರೋಗಿಗಳ ಸೇವೆಯಲ್ಲಿ ಶುಶ್ರೂಷಕ ವಿದ್ಯಾನಂದ ಕೊರಗು| ಆದರೆ ರೋಗಿಗಳ ಸೇವೆ ಮಾಡುತ್ತಿರುವ ಬಗ್ಗೆ ಹೆಮ್ಮೆ


ಬೆಂಗಳೂರು(ಏ.11): ತನ್ನ ಪತ್ನಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ಬರೋಬ್ಬರಿ ಹದಿನೈದು ಕಳೆದಿದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ರೋಗಿಗಳ ಸೇವೆಯಲ್ಲಿ ತೊಡಗಿರುವ ವಿಕ್ಟೋರಿಯಾ ಆಸ್ಪತ್ರೆ ಶುಶ್ರೂಷಕ ವಿದ್ಯಾನಂದ್‌ ಮಂಗಾವತಿಗೆ ಇನ್ನೂ ಪುತ್ರಿಯ ಮುಖ ಕಣ್ತುಂಬಿಕೊಳ್ಳಲು ಆಗಿಲ್ಲ.

- ಪ್ರಸ್ತುತ ಕ್ವಾರಂಟೈನ್‌ನಲ್ಲಿರುವುದರಿಂದ ಇನ್ನೂ ಒಂದು ತಿಂಗಳು ಮಗು ನೋಡಲು ಆಗದಿರಬಹುದು. ಆದರೆ, ಈ ಬಗ್ಗೆ ವಿದ್ಯಾನಂದ್‌ಗೆ ಹೆಮ್ಮೆ ಇದೆ.

Tap to resize

Latest Videos

‘ಹೆಂಡತಿಯ ಚೊಚ್ಚಲ ಹೆರಿಗೆ ವೇಳೆ ಜೊತೆಗಿರಲು ಆಗಿಲ್ಲ. ಮಗು ಜನಿಸಿ 15 ದಿನವಾದರೂ ನೋಡಲಾಗಿಲ್ಲ ಎಂಬ ಕೊರಗಿದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಕೊರೋನಾದಂತಹ ತುರ್ತು ಪರಿಸ್ಥಿತಿಯಲ್ಲಿ ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿ ದೇಶ ಸೇವೆಯಲ್ಲಿ ತೊಡಗಿದ್ದೇನೆ ಎಂಬ ಹೆಮ್ಮೆ ನನಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌, ಇಂದು ತೀರ್ಮಾನ: ಎಲ್ಲಾ ಸಿಎಂಗಳ ಜತೆ ಮೋದಿ ಸಂವಾದ!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತರು ಹಾಗೂ ಸೋಂಕಿತರ ಸೇವೆಯಲ್ಲಿ ತೊಡಗಿರುವ ಶುಶ್ರೂಷಕ ವಿದ್ಯಾನಂದ್‌ ಮಂಗಾವತಿ ಅವರ ಪತ್ನಿ ಮಾ. 27ರಂದು ಬೆಳಗಾವಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕೊರೋನಾ ಸೇವೆಯಿಂದ ಕೋವಿಡ್‌-19 ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೇವೆಗೆ ಸಿಕ್ಕ ಅವಕಾಶವನ್ನು ಕೈಚೆಲ್ಲದೆ ಸೇವೆಯಲ್ಲಿ ಮುಂದುವರೆಸಿದ್ದಾರೆ. ಸದ್ಯ ಅವರ ಪಾಳಿ ಮುಗಿದಿದ್ದರೂ ಕೋವಿಡ್‌ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸಿರುವುದರಿಂದ ಕಡ್ಡಾಯವಾಗಿ ಮುಂದಿನ 28 ದಿನ ಕ್ವಾರಂಟೈನ್‌ನಲ್ಲಿ ಇರಬೇಕಿದೆ. ಹೀಗಾಗಿ, ಆಸ್ಪತ್ರೆ ಸೂಚಿಸಿರುವ ಸಾಮೂಹಿಕ ಕ್ವಾರಂಟೈನ್‌ ಘಟಕದಲ್ಲಿದ್ದಾರೆ. ಹೆಂಡತಿ, ಮಗು ಭೇಟಿಗೆ ಕನಿಷ್ಠ ಇನ್ನೂ ಒಂದು ತಿಂಗಳಾಗಬಹುದು ಎನ್ನಲಾಗಿದೆ.

click me!