ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ

Published : Mar 17, 2023, 02:40 AM IST
ರಾಯಚೂರು ಜನತೆಯ ಸಹನೆ ಪರೀಕ್ಷಿಸಬೇಡಿ: ಮಂತ್ರಾಲಯ ಶ್ರೀಗಳಿಂದ ಸರ್ಕಾರಕ್ಕೆ ಖಡಕ್ ಸಂದೇಶ ರವಾನೆ

ಸಾರಾಂಶ

ಇಲ್ಲಿ ದಿನೇ ದಿನೇ ಏಮ್ಸ್‌ಗಾಗಿ ನಡೆದ ಹೋರಾಟ  ತೀವ್ರ ಸ್ವರೂಪ ಪಡೆಯುತ್ತಿದೆ. ಕಳೆದ 308 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿದರು. ರಾಯಚೂರು ಜಿಲ್ಲೆಗೆ ಏಮ್ಸ್ ಬದಲಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆಗೆ ಮಂಜೂರು ಮಾಡಿದ್ದಾರೆ. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಮಾ.17): ಇಲ್ಲಿ ದಿನೇ ದಿನೇ ಏಮ್ಸ್‌ಗಾಗಿ ನಡೆದ ಹೋರಾಟ  ತೀವ್ರ ಸ್ವರೂಪ ಪಡೆಯುತ್ತಿದೆ. ಕಳೆದ 308 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿದರು. ರಾಯಚೂರು ಜಿಲ್ಲೆಗೆ ಏಮ್ಸ್ ಬದಲಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆಗೆ ಮಂಜೂರು ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಎಲ್ಲಿಯೂ ಇಲ್ಲದ ಏಮ್ಸ್ ಮಾದರಿ ಆಸ್ಪತ್ರೆ ರಾಯಚೂರಿಗೆ ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ‌ಮಾಡಿದ್ದು, ಏಮ್ಸ್ ಹೋರಾಟ ಸಮಿತಿ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಏಮ್ಸ್ ಸಂಸ್ಥೆ ಕೇಳಿದ್ದೇವೆ. ಏಮ್ಸ್ ಮಾದರಿ ಅಲ್ಲ. ಏಕೆಂದರೆ ರಾಯಚೂರು ಜಿಲ್ಲೆಯೂ ಅಪೌಷ್ಠಿಕತೆ, ರೋಗಗ್ರಸ್ಥ ಜಿಲ್ಲೆಯಾಗಿದೆ. 

ಕೇಂದ್ರ ಸರ್ಕಾರವೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯನ್ನ ಮಹಾತ್ವಕಾಂಕ್ಷಿ ಜಿಲ್ಲೆಯೆಂದು ಗುರುತಿಸಿದೆ. ಈ ಜಿಲ್ಲೆಯ ಜನರ ಆರೋಗ್ಯ ಸುಧಾರಣೆಗಾಗಿ ಏಮ್ಸ್ ಸಂಸ್ಥೆಯ ಅವಶ್ಯಕತೆ ಇದೆ. ಈ ಹಿಂದಿನ ಸರ್ಕಾರವೂ ರಾಯಚೂರು ಜಿಲ್ಲೆಗೆ ಐಐಟಿ ನೀಡದೇ ಅನ್ಯಾಯ ಮಾಡಿತ್ತು. ಐಐಟಿ ಹೋದ್ರೆ ಹೋಗಲಿ ರಾಜ್ಯಕ್ಕೆ ಏಮ್ಸ್ ‌ಬಂದ್ರೆ ರಾಯಚೂರು ಜಿಲ್ಲೆಗೆ ನೀಡುವುದಾಗಿ ಹೇಳಿದ್ರು. ಹೇಳಿದಂತೆ ಯಾವ ಸರ್ಕಾರವೂ ತಮ್ಮ ಮಾತಿಗೆ ಬದ್ಧವಾಗಿ ಇಲ್ಲ. ಪ್ರಧಾನಿ ಮೋದಿಯವರು 2020ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏಮ್ಸ್ ‌ನೀಡುವುದಾಗಿ ಘೋಷಣೆ ‌ಮಾಡಿದ್ರು. ಹೀಗಾಗಿ ‌ಕರ್ನಾಟಕಕ್ಕೆ ನೀಡುವ  ಏಮ್ಸ್ ರಾಯಚೂರು ಜಿಲ್ಲೆಗೆ ನೀಡಿ ಎಂದು ನಾವು ಹೋರಾಟ ಮುಂದುವರೆಸಿದ್ದೇವೆ.

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

308 ದಿನಗಳಿಂದ ಹೋರಾಟ 58 ದಿನಗಳಿಂದ ಇಬ್ಬರು ಉಪವಾಸ ಸತ್ಯಾಗ್ರಹ: ರಾಯಚೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಏಮ್ಸ್ ಗಾಗಿ ನಿರಂತರವಾಗಿ ಹೋರಾಟ ನಡೆದಿದೆ. ಏಮ್ಸ್ ಹೋರಾಟಕ್ಕೆ ಇಡೀ ಜಿಲ್ಲೆಯ ಸರ್ವಪಕ್ಷದ ನಾಯಕರು ಬೆಂಬಲ ಸೂಚಿಸಿದ್ದಾರೆ.ಅದರಲ್ಲೂ ಶಾಸಕರು ಮತ್ತು ಸಂಸದರು ಬೆಂಬಲಕ್ಕೆ ‌ನಿಂತಿದ್ದಾರೆ. ಆದ್ರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ನಾವು 308 ದಿನಗಳ ಕಾಲ ಹೋರಾಟ ನಡೆಸಿದ್ರೂ, ನಮ್ಮ ಕೂಗು ಯಾರಿಗೂ ಕೇಳದಂತೆ ಆಗಿದೆ. ಈಗ ನಮ್ಮ ಹೋರಾಟಕ್ಕೆ ಬಲಬಂದಂತೆ ಆಗಿದೆ. ಮಂತ್ರಾಲಯ ಶ್ರೀಗಳೇ ಖುದ್ದು ಏಮ್ಸ್ ಹೋರಾಟಕ್ಕೆ ‌ಆಗಮಿಸಿ ಬೆಂಬಲ ನೀಡಿದ್ದಾರೆ. ನಾವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮುಖಾಂತರ ‌ಏಮ್ಸ್ ನೀಡುವಂತೆ ‌ಸರ್ಕಾರಕ್ಕೆ‌ ಮನವಿ‌ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್. ಬಿ.ಪಾಟೀಲ್ ಮುನೇನಕೊಪ್ಪ ನಾಲ್ಕು ಸಾರಿ ಬಂದಾಗಲೂ ನಮ್ಮ ಸಿಎಂ ಬೊಮ್ಮಾಯಿ ಅವರ ಮೇಲೆ ವಿಶ್ವಾಸಯಿಡಿ ಎಂದು ಹೇಳಿದ್ರು. 

ಅಷ್ಟೇ ಅಲ್ಲದೇ ಏಮ್ಸ್ ‌ರಾಜ್ಯದಲ್ಲಿ ಸ್ಥಾಪನೆ ‌ಆಗುವುದಾದರೇ ರಾಯಚೂರಿನಲ್ಲಿ ‌ಮಾತ್ರ ಆಗುತ್ತೆ ‌ಎಂದು ಉಸ್ತುವಾರಿ ಸಚಿವರು ಭರವಸೆ ‌ನೀಡಿದ್ರು. ಅಲ್ಲದೇ ಸಿಎಂ ಬೊಮ್ಮಾಯಿ ಅವರು ಎರಡು ಬಾರಿ ರಾಯಚೂರು ಜಿಲ್ಲೆಗೆ ಭೇಟಿ ‌ನೀಡಿದ್ರು. ಕಳೆದ ಆಗಸ್ಟ್ 27, ಅಕ್ಟೋಬರ್ 11ರಂದು ಈ ಸಿಎಂ ಅವರೇ ಹೇಳಿದ್ರು. ರಾಯಚೂರು ಜಿಲ್ಲೆಗೆ ಏಮ್ಸ್ ‌ಕೊಡುವುದಾಗಿ ಭರವಸೆ ‌ನೀಡಿದ್ರು. ಆದ್ರೆ ಸಿಎಂ ಅವರು ಬಜೆಟ್ ನಲ್ಲಿ ಏಮ್ಸ್ ‌ಬದಲು ಏಮ್ಸ್ ‌ಮಾದರಿ ಆಸ್ಪತ್ರೆಗೆ  ನೀಡಿದ್ದಾರೆ. ಇದು ಕಲ್ಯಾಣ ಕರ್ನಾಟಕದ ಜನತೆಯ ದಿಕ್ಕು ತಪ್ಪಿಸುವುದು ಆಗಿದೆ. ಪ್ರಾಣ ಬಿಟ್ಟವು ಅದ್ರೆ ರಾಯಚೂರಿಗೆ ಏಮ್ಸ್ ‌ಬಿಡುವುದು ಇಲ್ಲವೆಂದು ಏಮ್ಸ್ ‌ಹೋರಾಟ ಸಮಿತಿ ಬಸವರಾಜ್ ಕಳಸದ ಸರ್ಕಾರದ ವಿರುದ್ಧ ಕಿಡಿಕಾರಿದರು.

ಏಮ್ಸ್ ಹೋರಾಟಕ್ಕೆ ಮಂತ್ರಾಲಯ ಶ್ರೀಗಳು ಸಾಥ್: ಕಳೆದ 308ದಿನಗಳಿಂದ ನಿರಂತರವಾಗಿ ‌ರಾಯಚೂರಿನಲ್ಲಿ ನಡೆದ ಏಮ್ಸ್ ಹೋರಾಟಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಾಥ್ ನೀಡಿದ್ರು. ತಾವೇ ಖುದ್ದು ಹೋರಾಟಕ್ಕೆ ಆಗಮಿಸಿ ಏಮ್ಸ್ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಏಮ್ಸ್ ಹೋರಾಟ ಬೆಂಬಲಿಸಿ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು, ರಾಯಚೂರಿನಲ್ಲಿ ಕಳೆದ 308 ದಿನಗಳಿಂದ ಏಮ್ಸ್ ಗಾಗಿ ಹೋರಾಟ ನಡೆದಿದೆ. ಹೋರಾಟಕ್ಕೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ‌. ರಾಯಚೂರಿಗೆ ಏಮ್ಸ್ ನೀಡಲು ನಾವು ಶ್ರೀಮಠದಿಂದ ಎಲ್ಲರ ಗಮನಕ್ಕೂ ತಂದಿದ್ದೇವೆ‌. 

ಸರ್ಕಾರಿ ವೈದ್ಯೆಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು?: ವೈದ್ಯೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ

ಏಮ್ಸ್ ಮಹತ್ವದ ಕುರಿತು ಸಿಎಂ ಬೊಮ್ಮಾಯಿಗೂ ನಾವು ತಿಳಿಸಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ ಸೇರಿದಂತೆ ಇತರೆ ಮಂತ್ರಿಗಳ ಗಮನಕ್ಕೆ ತಂದು ರಾಯಚೂರು ಜಿಲ್ಲೆಗೆ ಏಮ್ಸ್ ನೀಡಬೇಕೆಂದು ಕೇಳಿದ್ದೇವೆ.ಏಮ್ಸ್ ಹೋರಾಟಗಾರು ನಾವು ನಿರಾಸೆ ಆಗುವುದು ಬೇಡ. ಶಾಂತಿಯುತ ಹೋರಾಟ ಮಾಡಿ ರಾಯಚೂರು ಜಿಲ್ಲೆಗೆ ಏಮ್ಸ್ ‌ಬರುವಂತೆ ಮಾಡೋಣ, ಏಮ್ಸ್ ಸಿಗುವರೆಗೂ ನಾವು ಸಂಘಟಿತರಾಗಿ ಹೋರಾಟ ಮಾಡೋಣ, ರಾಯಚೂರಿಗೆ ನಾವೂ ಯಾರು ಏಮ್ಸ್ ‌ಮಾದರಿ ಆಸ್ಪತ್ರೆ ಕೇಳಿಲ್ಲ. ಏಮ್ಸ್ ಮಾದರಿ ಸಂಸ್ಥೆ ಎಂಬುವುದು ಎಲ್ಲಿಯೂ ಇಲ್ಲ. ನಮಗೆ ಏಮ್ಸ್ ಮಾದರಿ ಬೇಡ. ಏಮ್ಸ್  ಬೇಕು ಎಂಬುವುದು ನಮ್ಮ ಬಲವಾದ ಕೂಗು ಆಗಿದೆ ಎಂದು ಮಂತ್ರಾಲಯ ಶ್ರೀಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ