
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಅ.10): ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ವಿ.ಸೋಮಣ್ಣ ಬಿಜೆಪಿಗೆ ಬಂದು ನಾಲ್ಕು ಬಾರಿ ಸೋತೆ ಎನ್ನುತ್ತಾರೆ. ಆದ್ರೆ, ಸೋಮಣ್ಣ ಎರಡು ಬಾರಿ ಸೋತಾಗಲು ಮಂತ್ರಿ ಮಾಡಿದ್ದಾರೆ ಅದನ್ನೂ ಹೇಳಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ವಿ.ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮಣ್ಣ ಬಿಜೆಪಿಗೆ ಬಂದು ನಾಲ್ಕು ಬಾರಿ ಸೋತೆ ಎಂದಿದ್ದಾರೆ. ನಾವು ಬಿಜೆಪಿಯಲ್ಲಿ ಇದ್ದೇ ನಾಲ್ಕು ಬಾರಿ ಸೋತಿದ್ದೇನೆ ಎಂದು ಹೇಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಸೋತಿದ್ದನ್ನ ಮಾತ್ರ ಹೇಳಬಾರದು, ಗೆದ್ದಿದ್ದು, ಮಂತ್ರಿಯಾಗಿದ್ದನ್ನೂ ಹೇಳಬೇಕು ಎಂದರು.
ಹಮಾಸ್ ಉಗ್ರರ ವಿರುದ್ದ ಇಸ್ರೇಲ್ ಪ್ರತಿದಾಳಿಗೆ ಕೆರಳಿದ ಕಾಂಗ್ರೆಸ್, ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಣೆ!
ಹೋದ ಪಕ್ಷದಲ್ಲೆಲ್ಲಾ ಅಧಿಕಾರ ಮಾಡ್ತೀವಿ ಅನ್ನೋ ಮನಸ್ಥಿತಿ ಸರಿಯಲ್ಲ. ಇರೋ ಪಕ್ಷಕ್ಕೆ ನಿಷ್ಠೆ ತೋರಬೇಕು. ಪಕ್ಷಕ್ಕೆ ಸೋಲಾದಾಗ ಪಕ್ಷದ ಜೊತೆ ನಿಲ್ಲಬೇಕು ಎಂದಿದ್ದಾರೆ. ಇದೇ ವೇಳೆ, ಇಸ್ರೇಲ್-ಹಮಾಸ್ ಯುದ್ಧದ ಸಂಬಂಧ ವಿಚಾರ ಮಾತನಾಡಿದ ಅವರು, ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದಾಗ ವಾಜಪೇಯಿಯವರು ದೇಶಕ್ಕಾಗಿ ನೀವು ದುರ್ಗಿಯ ಅವತಾರ ತಾಳಿ, ನಾವು ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎಂದಿದ್ದರು. ಆದರೆ, ವಿರೋಧ ಪಕ್ಷ ಮಾಡಬೇಕಾದ ಕೆಲಸ ಇದು. ದೇಶ ಒಂದು ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ಮತ್ತೊಂದು ತೀರ್ಮಾನ ಮಾಡುತ್ತೆ. ಕಾಂಗ್ರೆಸ್ ರಾಜಕಾರಣ ಹಾಗೂ ಮತ ಬ್ಯಾಂಕಿಗಾಗಿ ಪ್ಯಾಲಸ್ತೇನ್ ಪರ ನಿಲ್ತೀವಿ ಅನ್ನುತ್ತೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2009ರಲ್ಲಿ ಜಾತಿ ಕೇಳಲ್ಲ, 2023ರಲ್ಲಿ ಎಲ್ಲರ ಜಾತಿ ಗೊತ್ತಾಗಬೇಕು;ರಾಹುಲ್ ಯೂಟರ್ನ್ ವಿಡಿಯೋ ವೈರಲ್!
ಒಳಗೆ ಏನು ಬೇಕಾದ್ರು ಹೋರಾಡೋಣ. ಆದ್ರೆ, ದೇಶ, ಭದ್ರತೆ, ಅಂತರಾಷ್ಟ್ರೀಯ ವಿಚಾರ ಬಂದಾಗ ದೇಶದ ಪರ ನಿಲ್ಲಬೇಕು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ