ಪಕ್ಷಾಂತರ ಕಾಯ್ದೆ ವಿಚಾರ ಡಿಕೆಶಿ ಸಲಹೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

Published : May 28, 2020, 01:27 PM ISTUpdated : May 28, 2020, 01:33 PM IST
ಪಕ್ಷಾಂತರ ಕಾಯ್ದೆ ವಿಚಾರ ಡಿಕೆಶಿ ಸಲಹೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

ಸಾರಾಂಶ

ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಸಲಹೆಗಳು, ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅಧಿಕಾರದಾಸೆಗೆ ಬೇರೆ ಪಕ್ಷಕ್ಕೆ ವಲಸೆ ಹೋಗುವುದು ನಡೆಯಬಾರದು ಎಂದು ತಿಳಿಸಿದ್ದೇವೆ ಎಂದು ಮಾಜಿ ಸಚಿವ ಡಿಕ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು(ಮೇ 28): ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಸಲಹೆಗಳು, ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅಧಿಕಾರದಾಸೆಗೆ ಬೇರೆ ಪಕ್ಷಕ್ಕೆ ವಲಸೆ ಹೋಗುವುದು ನಡೆಯಬಾರದು ಎಂದು ತಿಳಿಸಿದ್ದೇವೆ ಎಂದು ಮಾಜಿ ಸಚಿವ ಡಿಕ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅದರ ಬಗ್ಗೆ ಅಭಿಪ್ರಾಯ ಪಡೆಯಲು ಸಭೆ ನಡೆಯಿತು. ನಾವೂ ಕೂಡ ಪಕ್ಷದ ಹಿರಿಯರ ಸಭೆ ಕರೆಯುತ್ತೇವೆ ಎಂದು ಹೇಳಿದ್ದಾರೆ.

'ಕಾಂಗ್ರೆಸ್ ಚೆಕ್‌ಗೆ ಸಹಿ ಅಧಿಕಾರ ಡಿಕೆಶಿಗೆ ಇನ್ನೂ ಸಿಕ್ಕಿಲ್ಲ'

ಅವರ ಅಭಿಪ್ರಾಯ ಪಡೆದು 10ನೇ ತಾರೀಖಿನ ಒಳಗೆ ತಿಳಿಸುತ್ತೇವೆ. ಇಂದು ಸಚಿವ ಸಂಪುಟ ಸಭೆ ಇದೆ. ಗ್ರಾಮ ಪಂಚಾಯತಿಗಳಿಗೆ ನಾಮನಿರ್ದೇಶನ ಮಾಡಲು ಹೋಗುತ್ತಿದ್ದಾರೆ. ಆದರೆ ಇದು ನಿಮಗೂ ಒಳ್ಳೆಯದಲ್ಲ, ರಾಜ್ಯಕ್ಕೆ ಒಳ್ಳೆಯದಲ್ಲ. ನೀವು ಹೀಗೆ ಮುಂದುವರಿದರೆ ನಾವು ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾಲಿಗೆ ಚಿಪ್‌ ಅಳವಡಿಸಿ ಪೊಲೀಸ್‌ ಪೇದೆ ಹುದ್ದೆಗಳ ದೈಹಿಕ ಪರೀಕ್ಷೆಗೆ ಸಿದ್ಧತೆ, ಓಟ ಮುಗಿಸ್ತಿದ್ದಂತೆ ಮೊಬೈಲ್‌ಗೆ ಬರಲಿದೆ ರಿಸಲ್ಟ್‌
14 ಹಿಂದಿಯೇತರ ರಾಜ್ಯಗಳಿಂದ ಹೋರಾಟಕ್ಕಾಗಿ ಒಕ್ಕೂಟ, ಕರ್ನಾಟಕದಿಂದ ಕರವೇ ಭಾಗಿ