
ಬೆಂಗಳೂರು (ಆ.14): ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ಗುರುವಾರ ವಿಧಾನಸಭೆಯಲ್ಲಿ ಚರ್ಚೆಯ ವಿಚಾರವಾಗಿತ್ತು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಇದರ ಬಗ್ಗೆ ಮಾತನಾಡಲು ಆರಂಭಿಸಿದರು. ಆ ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಧರ್ಮಸ್ಥಳದ ವಿಚಾರದಲ್ಲಿ ಸರ್ವರ ಭಾವನೆಗಳೂ ನಮಗೆ ಅರ್ಥವಾಗುತ್ತದೆ. ಧರ್ಮಸ್ಥಳದ ಬಗ್ಗೆ ಬಿಜೆಪಿಗಿಂತ ಹೆಚ್ಚಿನ ಕಾಳಜಿ ನಮಗಿದೆ ಎಂದೂ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಯಾವುದೇ ಗೊಂದಲ ಇರಬಾರದು ಎನ್ನುವ ಕಾರಣಕ್ಕೆ ಎಸ್ಐಟಿ ರಚನೆ ಮಾಡಿದ್ದೇವೆ ಎಂದಿರುವ ಡಿಸಿಎಂ, ಮುಂದಿನ ದಿನಕ್ಕೆ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಿದವರಿಗೂ ಶಿಕ್ಷೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಧರ್ಮಸ್ಥಳದ ವಿಚಾರದಲ್ಲಿ ಎಲ್ಲರ ಭಾವನೆಗಳೂ ನಮಗೆ ಅರ್ಥವಾಗುತ್ತದೆ. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಅದರಲ್ಲಿ ನಂಬಿಕೆ ಇಡೋನು ನಾನು. ಧರ್ಮಸ್ಥಳದ ಬಗ್ಗೆಯೂ ನಂಬಿಕೆ ಇರೋನು, ಆ ದೇವಸ್ಥಾನದ ಬಗ್ಗೆಯೂ ನಂಬಿಕೆ ಇರೋನು, ಧರ್ಮಾಧಿಕಾರಿಗಳ ಬಗ್ಗೆಯೂ ನಂಬಿಕೆ ಇರೋನು, ಅವರ ಆಚಾರ ವಿಚಾರಗಳ ಬಗ್ಗೆಯೂ ನಮಗೂ ಅರಿವಿದೆ.
ಆದರೆ, ಅಲ್ಲಿನ ಪರಿಸ್ಥಿತಿ ಏನಿದೆ ಅನ್ನೋದನ್ನ ಗೃಹ ಸಚಿವರು ಹೇಳುತ್ತಾರೆ. ಅವರು ಗೃಹ ಸಚಿವರು ವಿಷಯದ ಬಗ್ಗೆ ಆಳವಾಗಿ ಜ್ಞಾನವಿದೆ. ನಮಗೆ ಅದರ ಬಗ್ಗೆ ಗೊತ್ತಿದೆ ಅಷ್ಟೇ.
ಇಡೀ ದೇಶದಲ್ಲಿ ಎಲ್ಲೂ ಅನ್ನ ದಾಸೋಹ ಪ್ರಾರಂಭ ಮಾಡದೇ ಇದ್ದಾಗ ಮೊದಲು ಆರಂಭವಾಗಿದ್ದು ಧರ್ಮಸ್ಥಳದಲ್ಲಿ ಇದರ ಬಗ್ಗೆ ನಮಗೆ ಅರಿವಿದೆ.ಇದನ್ನು ರಾಜಕೀಯಕ್ಕೆ ಲಿಂಕ್ ಮಾಡೋದು ಬೇಡ. ಕಾಂಗ್ರೆಸ್, ಕಾಂಗ್ರೆಸ್ ಹೈಕಮಾಂಡ್ ಅಂತಾ ಯಾಕೆ ಹೇಳ್ತೀರಿ? ಪಕ್ಷವನ್ನು ಯಾಕೆ ಇಲ್ಲಿ ಸೇರಿಸ್ತೀರಿ.
ಯಾವನೋ ಒಬ್ಬ ಬಂದು ಏನೋ ಒಂದು ಹೇಳಿದೆ. ನಮ್ಮ ಪಕ್ಷದಲ್ಲೇ ಶಿವಲಿಂಗೇಗೌಡರು, ರೈಗಳು ಸಿಎಲ್‌ಪಿ ಸಭೆಯಲ್ಲಿ ಧರ್ಮಸ್ಥಳದ ಧಾರ್ಮಿಕವಾದ ಗೌರವಕ್ಕೆ ಯಾವುದೇ ಧಕ್ಕೆ ಬರಬಾರದು ಎಂದು ಹೇಳಿದ್ದರು. ಭಕ್ತರು ಹಾಗೂ ಭಗವಂತನಿಗೆ ಇರುವ ಸಂಬಂಧದಲ್ಲಿ ಯಾವುದೇ ಗೊಂದಲಗಳು ಇರಬಾರದು.
ಧರ್ಮಸ್ಥಳದ ಸಾಮಾಜಿಕ ಕಾರ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲ. ನಮ್ಮ ಪಕ್ಷ ಅವರ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದ ಬಗ್ಗೆ ಮೆಚ್ಚುಗೆ ಇದ. ಆದರೆ, ಕೆಲವರು ಬಂದು ಕೋರ್ಟ್‌ನಲ್ಲಿ ಆರೋಪ ಮಾಡಿದ್ದಾರೆ. ಆಗ ಒಂದು ಸರ್ಕಾರವಾಗಿ ಗೃಹ ಸಚಿವರಾಗಿ ಸುಮ್ಮನಿರಲು ಆಗುತ್ತಾ?
ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರಾಗಲಿ, ಅವರ ಪರಂಪರೆಯಾಗಲಿ, ದೇವಸ್ಥಾನವಾಗಲಿ, ಧಾರ್ಮಿಕ ವಿಚಾರವಾಗಲಿ, ಧರ್ಮವಾಗಾಲಿ ನಿಮಗೆ ಎಷ್ಟು ಕಾಳಜಿ ಇದೆಯೋ ನಮಗೆ ಅದಕ್ಕಿಂತ ಹೆಚ್ಚಿಗೆ ಇದೆ ಅನ್ನೋದು ನಿಮ್ಮ ಗಮನದಲ್ಲಿರಲಿ. ಈಗ ಸೋಶಿಯಲ್ ಮೀಡಿಯಾ ಬಂದುಬಿಟ್ಟಿದೆ. ಸೋಶಿಯಲ್ ಮೀಡಿಯಾವನ್ನು ಕಂಟ್ರೋಲ್ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ