ಸೋಲಾರ್‌ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್‌

Published : Oct 08, 2022, 02:00 AM IST
ಸೋಲಾರ್‌ ಪಾರ್ಕ್‌ನಲ್ಲಿ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ.ಕೆ.ಶಿವಕುಮಾರ್‌

ಸಾರಾಂಶ

ಸೋಲಾರ್‌ ಪಾರ್ಕ್ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆ ಯಾಕೆ? ಸಿಬಿಐ ತನಿಖೆಯನ್ನೇ ಮಾಡಿ ಎಂದು ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದ ಡಿಕೆಶಿ 

ನವದೆಹಲಿ(ಅ.08):  ತಾವು ಇಂಧನ ಸಚಿವರಾಗಿದ್ದಾಗ ಸ್ಥಾಪನೆಯಾದ ಪಾವಗಡ ಸೋಲಾರ್‌ ಪಾರ್ಕ್ಗೆ ಸಂಬಂಧಿಸಿ ತನಿಖೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾವಗಡ ಸೋಲಾರ್‌ ಪಾರ್ಕ್ ಪ್ರಕರಣದಲ್ಲಿ ನಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.

ಈ ಸಂಬಂಧ ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಲಾರ್‌ ಪಾರ್ಕ್ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆ ಯಾಕೆ? ಸಿಬಿಐ ತನಿಖೆಯನ್ನೇ ಮಾಡಿ ಎಂದು ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಹಾಕಿದರು. ಈ ಸೋಲಾರ್‌ ಪಾರ್ಕ್‌ಗೆ ಮೋದಿ ಸರ್ಕಾರವೇ ಪ್ರಶಂಸಿಸಿ ಪತ್ರ ನೀಡಿದೆ. ಈ ಪಾರ್ಕ್ ದೇಶಕ್ಕೇ ಮಾದರಿ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ನಾನು ಎಷ್ಟು ಪ್ರಾಮಾಣಿಕನಾಗಿದ್ದೆ, ಇಂಧನ ಇಲಾಖೆಗೆ ಎಷ್ಟು ಸಹಾಯ ಮಾಡಿದ್ದೇನೆ ಅನ್ನುವ ಅರಿವಿದೆ ಎಂದು ಇದೇ ವೇಳೆ ತಿಳಿಸಿದರು.

ಸಿದ್ದರಾಮೋತ್ಸವ ಜೀವಂತವಾಗಿಡಲು ಪ್ರಯತ್ನ: ಶಾಸಕ, ಎಂಎಲ್‌ಸಿ, ಕಾರ್ಯಕರ್ತರಿಗೆ ಸಿದ್ದು ಔತಣ

ಇದೇ ವೇಳೆ, ದೀನದಯಾಳ್‌ ವಸತಿ ಯೋಜನೆ ಅಡಿ ಎಷ್ಟು ಅವ್ಯವಹಾರ ಆಗಿದೆ ಅನ್ನೋದು ಸಿಐಜಿ ವರದಿಯಲ್ಲಿ ಉಲ್ಲೇಖವಾಗಿದೆ. ಅದನ್ನೂ ತನಿಖೆಗೆ ಕೊಡಿ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ