Latest Videos

ಡಿ.ಕೆ.ಶಿವಕುಮಾರ್‌ ಚಿಕ್ಕವನಾದ್ರೂ ಸಂಘಟನೆಯಲ್ಲಿ ನನಗಿಂತಲೂ ಮುಂದಿದ್ದಾರೆ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published Dec 31, 2023, 4:47 PM IST
Highlights

ಡಿ.ಕೆ.ಶಿವಕುಮಾರ್ ಕ್ರಿಯಾ ಶೀಲ ವ್ಯಕ್ತಿ, ಸಂಘಟನೆಯಲ್ಲಿ ಚತುರತೆ ಇರುವ ವ್ಯಕ್ತಿ. ಆದರೆ ನನಗಿಂತ ಚಿಕ್ಕವನಾದ್ರೂ ಸಂಘಟನೆಯಲ್ಲಿ ನನಗಿಂತಲೂ ಮುಂದಿದ್ದಾರೆ.

ಬೆಂಗಳೂರು (ಡಿ.31): ಡಿ.ಕೆ.ಶಿವಕುಮಾರ್ ಕ್ರಿಯಾ ಶೀಲ ವ್ಯಕ್ತಿ, ಸಂಘಟನೆಯಲ್ಲಿ ಚತುರತೆ ಇರುವ ವ್ಯಕ್ತಿ. ಆದರೆ, ಅವರಿಗಿಂತ ಮುಂಚಿನಿಂದಲೂ ನಾನು ರಾಜಕೀಯದಲ್ಲಿ ಇದ್ರುನೂ, ಅವರು ನನಗಿಂತ ಸಂಘಟನೆಯಲ್ಲಿ ಮುಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಇಂದು ಹಮ್ಮಿಕೊಂಡಿದ್ದ 2023ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರೆಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಈ ಬಾರಿಯೂ ಕೂಡ ಬಂದಿದ್ದೇನೆ. ನಾಳೆ ಹೊಸ ವರ್ಷ ಪ್ರಾರಂಭವಾಗ್ತಿದೆ. ಇದು ಈ ವರ್ಷದ ಕೊನೆ ದಿನ ನಾಳೆ 2024 ಪ್ರಾರಂಭವಾಗುತ್ತದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2023ರ ಸಾಲಿನ ವ್ಯಕ್ತಿಯನ್ನ ಆಯ್ಕೆ ಮಾಡಿದ್ದೀರಾ. ಹಾಗೆ ಮೂರು ಜನರಿಗೆ ವಿಶೇಷ ಪ್ರಶಸ್ತಿಗಳನ್ನ ನೀಡಿದ್ದೀರಾ. ಶಿವರಾಜ್ ಪಾಟೀಲ್ ಪ್ರಶಸ್ತಿ ಪ್ರಧಾನ ಮಾಡಿದರು. ಅವರ ಭಾಷಣದಲ್ಲಿ ಹೇಳಿದ್ರು ಪ್ರಶಸ್ತಿ ಪ್ರಧಾನ ಮಾಡೋ ಗೌರವ ಸಿಕ್ಕಿದೆ. ಅದು ನನಗೆ ಸಿಕ್ಕ ದೊಡ್ಡ ಗೌರವ ಅಂದ್ರು ಅವರಿಗೆ ಧನ್ಯವಾದಗಳು ಎಂದರು.

ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾಗಾಂಧಿ ಹೇಳಿದಂತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತಂದಿದ್ದೇನೆ!

ಇನ್ನು 2023ರ ವರ್ಷದ ವ್ಯಕ್ತಿಯಾಗಿ ಡಿ.ಕೆ.ಶಿವಕುಮಾರ್ ಅವರನ್ನ ಆಯ್ಕೆ ಮಾಡಿದ್ದೀರಾ. ಅವರು ಕ್ರಿಯಾ ಶೀಲ ವ್ಯಕ್ತಿ, ಸಂಘಟನೆಯಲ್ಲಿ ಚತುರತೆ ಇರುವ ವ್ಯಕ್ತಿ. ಆದರೆ, ಅವರಿಗಿಂತ ಮುಂಚಿನಿಂದಲೂ ನಾನು ರಾಜಕೀಯದಲ್ಲಿ ಇದ್ರುನೂ, ಅವರು ನನಗಿಂತ ಸಂಘಟನೆಯಲ್ಲಿ ಮುಂದಿದ್ದಾರೆ. ನಾನು ಜನತಾ ಪಾರ್ಟಿಯಲ್ಲಿ ಅಧ್ಯಕ್ಷನಾಗಿದ್ದೆನು. ಆ ಪಾರ್ಟಿಯಿಂದ ನನ್ನನ್ನು ತೆಗೆದು ಹಾಕಿದರು. ಆದ್ರೆ ತುಂಬಾ ಜನ ಜನತಾದಳ ಬಿಟ್ರು ಅಂತ ಬರಿತಾರೆ. ನಾನು ಬಿಟ್ಟಿಲ್ಲ ಅವರು ನನ್ನನ್ನು ಉಚ್ಚಾಟನೆ ಮಾಡಿದರು ಎಂದು ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್  ಅವರು ಹೇಳಿದ ಪ್ರಕಾರ ಸಂವಿಧಾನ ಉದ್ದೇಶವನ್ನ ಪೂರೈಸುವುದು ನಮ್ಮ ಕರ್ತವ್ಯ. ಸಂವಿಧಾನವೇ ನಮ್ಮ ಗ್ರಂಥ, ಅದನ್ನು ಧರ್ಮ ಗ್ರಂಥ ಅಂತ ಕರೆಯಬಹುದು. ರಾಜಕೀಯ ಧರ್ಮವನ್ನು ಎಲ್ಲರೂ ಅನುಸರಿಸಬೇಕು. ಆಗ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಗೆ ಆಗುತ್ತದೆ. ಸಂವಿಧಾನ ಸುಮ್ಮನೆ ರಚನೆಯಾಗಿಲ್ಲ. ದೀರ್ಘ ಕಾಲದ ಚರ್ಚೆಯ ನಂತ್ರ ಸಂವಿಧಾನ ರಚನೆಯಾಗಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆಯನ್ನ ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆಯಾಗಿದೆ. ಸಂವಿಧಾನ  ಗೌರವಿಸುವುದು ಹಾಗೂ ನಡೆದುಕೊಳ್ಳುವುದು. ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ ಹಾಗೂ ಜವಾಬ್ದಾರಿ. ಅಸಮಾನತೆ ಹೋಗಬೇಕು ಅಂದ್ರೆ ಸಂವಿಧಾನ ಉದ್ದೇಶ ಜಾರಿಯಾಗಬೇಕು. ವೋಟು ಹಾಕುವ ಅಧಿಕಾರ ಸಿಕ್ಕರೆ ಸಾಲದು, ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಅಂತ ಅಂಬೇಡ್ಕರ್ ಹೇಳಿದರು. ಧ್ವನಿ ಇಲ್ಲದವರ ಪರವಾಗಿ ಮಾಧ್ಯಮ ಧ್ವನಿ ಎತ್ತುವ ಕೆಲಸ ಮಾಡಬೇಕು. ಕ್ಷುಲ್ಲಕ ವಿಚಾರಕ್ಕೆ ಮಹತ್ವ ಕೊಡುವ ಕೆಲಸ ಮಾಡಬಾರದು ಎಂದರು.

ಕರಾವಳಿಯ ಮೊದಲ ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ರೈಲು ವೇಳಾಪಟ್ಟಿ, ಟಿಕೆಟ್‌ ದರ ಇಲ್ಲಿದೆ

ಮೌಢ್ಯಗಳು ಹಾಗೂ ಕಂದಾಚಾರಗಳನ್ನ ಬೆಳೆಸುವ ಕೆಲಸ ಮಾಡಬಾರದು. ನನ್ನ ಕಾರ್ ಮೇಲೆ ಕಾಗೆ ಕೂತಾಗ ಮುಖ್ಯಮಂತ್ರಿಯಾಗಿ ಮುಂದುವರೆಯಲ್ಲ ಅಂದ್ರು ಮುಂದುವರೆದೆ. ಯಾವುದೇ ಸರ್ಕಾರ ಇದ್ದರೂ, ಸರ್ಕಾರ ಮಾಡುವ ತಪ್ಪುಗಳನ್ನ ಜನರಿಗೆ ಸ್ಪಷ್ಟವಾಗಿ ಹೇಳಿ. ಒಳ್ಳೆ ಕೆಲಸ ಮಾಡಿದ್ರೆ ಒಳ್ಳೆ ಕೆಲಸ ಅಂತ ಹೇಳಿ. ತಪ್ಪು ಮಾಡಿದ್ರು ಅವರು ಸರಿ ಮಾಡಿದ್ರು ಅಂತ ಹೇಳಬೇಡಿ. ಬಹುತೇಕ ಮಾಧ್ಯಮ ಉದ್ಯಮಿಗಳ ಕೈಯಲ್ಲಿ ಇದೆ. ಅವರಿಗೆ ಸಮಾಜದ ಬಗ್ಗೆ ಯಾವುದೇ ಕಳಜಿ ಇರಲ್ಲ. ಆದ್ದರಿಂದ ನೀವು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ. ಪ್ರಶಸ್ತಿ ನೀಡುವ ಕೆಲಸ ಮಾಡಿದ್ದೀರಾ. ಪ್ರಶಸ್ತಿ ತೆಗೆದುಕೊಂಡಾಗ ಅವರ ಜವಾಬ್ದಾರಿ ಹೆಚ್ಚಾಗುತ್ತದೆ. ಸಮಾಜದ ಋಣ ಇದೆ ನಮ್ಮ ಮೇಲೆ ಅದನ್ನು ತೀರಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

click me!