ನನ್ನ ಸೈಲೆಂಟ್ ನನ್ನ ದೌರ್ಬಲ್ಯವಲ್ಲ: ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡದ ಸಚಿವ ಜಾರಕಿಹೊಳಿ

By Ravi Janekal  |  First Published Oct 19, 2023, 12:42 PM IST

ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನು ಸಂಬಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ, ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದು ಶಾಸಕರಾಗಿ ಸಚಿವರಾಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ಬೆಳಗಾವಿ (ಅ.19): ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಯಾವುದೇ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ಎಲ್ಲರನ್ನು ಸಂಬಾಳಿಸಿಕೊಂಡು ಹೋಗಬೇಕು. ನಾನು ಆರು ಬಾರಿ ಶಾಸಕನಾಗಿದ್ದೇನೆ, ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದು ಶಾಸಕರಾಗಿ ಸಚಿವರಾಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಸೈಲೆಂಟ್ ನನ್ನ ದೌರ್ಬಲ್ಯ ಅಲ್ಲ, ಕಳೆದ 30 ವರ್ಷದ ರಾಜಕೀಯದಲ್ಲಿ ಇದು ಸಕ್ಸಸ್ ಕೊಟ್ಟಿದೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರಗೆ ಟಾಂಗ್ ನೀಡಿದರು. 

Tap to resize

Latest Videos

News Hour: ಕಾಂಗ್ರೆಸ್‌ನಲ್ಲಿ ಶುರುವಾಯ್ತು ಮತ್ತೆ ಬೆಳಗಾವಿ ಬೆಂಕಿ, ಜಾರಕಿಹೊಳಿ ಪವರ್‌ಗೆ ಡಿಕೆ ಡಿಚ್ಚಿ!

ಎಲ್ಲರ ಜೊತೆಗೆ ಹೊಂದಿಕೊಂಡು ಕೆಲಸ ಮಾಡಬೇಕು. ಸವದಿ ಕೂಡ ಕಾಂಗ್ರೆಸ್ಸಿಗೆ ಬರುವಾಗ ನನ್ನ ಜೊತೆ ಮಾತನಾಡಿದ್ರು. ನೀವೆಲ್ಲಾ ಸಹಕಾರ ಮಾಡದೇ ಇದ್ದರೆ ನಾನು ಬರಲ್ಲ ಅಂದಿದ್ರು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಟೂರ್ ಪ್ಲಾನ್ ಮುಂದೆ ಕೂಡ ಇರುತ್ತೆ. ನಾವು ಟೂರು ಮಾಡಲು ಯಾವುದೇ ಅಡ್ಡಿಯಿಲ್ಲ ಶಾಸಕರು ಕ್ಷೇತ್ರದ ಕೆಲಸ ಮಾತ್ರ ಅಲ್ಲ, ಒಟ್ಟಾಗಿ ಪ್ರವಾಸ ಕೂಡ ಮಾಡಬೇಕು. ಮುಂದೆ ಆ ಬಗ್ಗೆ ಪ್ಲಾನ್ ಮಾಡುತ್ತೇವೆ ಎಂದರು.

ಡಿಕೆಶಿ ಸ್ವಾಗತಕ್ಕೆ ತೆರಳದ ಶಾಸಕರು:

ಸತೀಶ್ ಜಾರಕಿಹೊಳಿ ನಡುವೆ ಭಿನ್ನಭಿಪ್ರಾಯ ಇಲ್ಲ ಎಂದು ಡಿಕೆಶಿ ಹೇಳಿದ್ದರೂ. ವಾಸ್ತವದಲ್ಲಿ ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿಲ್ಲ ಎಂಬಂಥ ಘಟನೆಗಳು ನಡೆಯುತ್ತಿವೆ. ಡಿಕೆ ಶಿವಕುಮಾರ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ ಜಾರಕಿಹೊಳಿ ಬೆಂಬಲಿಗ ಶಾಸಕರು ಸ್ವಾಗತಕ್ಕೆ ತೆರಳದೇ ಇರುವುದು ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯೆ ಮುಸುಕಿನ ಗುದ್ದಾಟ ನಡೆದಿರುವುದು ಜಗಜ್ಜಾಹೀರು ಮಾಡಿದೆ.

ನಾನು ಸಡನ್ ಆಗಿ‌ ಪ್ಲಾನ್ ಮಾಡಿ ಹೊರಟಿದ್ದೆ ಹಾಗಾಗಿ ಯಾರೂ ಬರೋದಕ್ಕೆ ಸಾಧ್ಯವಾಗಿಲ್ಲ ಎಂದಿದ್ದ ಡಿಕೆ ಶಿವಕುಮಾರ. ಆದರೆ ಸತೀಶ್ ಜಾರಕಿಹೊಳಿ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಜಾರಕಿಹೊಳಿ, ನಾನು ಡಿಕೆ ಶಿವಕುಮಾರರನ್ನು ಭೇಟಿಯಾಗಿ ಬೆಳಗಾವಿ ಭೇಟಿ ವೇಳೆ ಇರುವುದಿಲ್ಲ ಎಂದಿದ್ದೆ. ಮೈಸೂರಿನಲ್ಲಿ ಇರುತ್ತೇನೆ ಹಾಗಾಗಿ ಬರುವುದಿಲ್ಲ ಎಂದು ತಿಳಿಸಿದ್ದೆ  ಎಂದಿದ್ದಾರೆ. ಆದರೆ ಬೆಳಗಾವಿ ಕಾಂಗ್ರೆಸ್ ಶಾಸಕರು ಸಹ ಕೆಲಸದಲ್ಲಿ ಬ್ಯುಸಿ, ಮೈಸೂರಿನಲ್ಲಿದ್ದಾರೆಂದು ಸ್ವಾಗತಕ್ಕೆ ಬಂದಿಲ್ಲ. ಇದೆಲ್ಲವೂ ಮುಂಚಿತವಾಗಿ ಪ್ಲಾನ್ ಮಾಡಿಕೊಂಡು ಬೆಳಗಾವಿ ತೊರೆದ್ರಾ ಎಂಬ ಅನುಮಾನ ಮೂಡಿಸಿದೆ.

ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತ ಶಾಸಕರು:

ಸತೀಶ್ ಜಾರಕಿಹೊಳಿ ಸಮಾನ ಮನಸ್ಕ ಶಾಸಕರನ್ನೆಲ್ಲ ಒಟ್ಟಿಗೆ ಸೇರಿಸಿ ಮೈಸೂರು ದಸರಾಗೆ ಹೊಗಲು ಚಿಂತನೆ ನಡೆಸಿದ್ದರು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಪ್ಲಾನ್ ಕ್ಯಾನ್ಸಲ್ ಆಗಿದೆ. ಇದು ಜಾರಕಿಹೊಳಿ ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಸಮಾನ ಮನಸ್ಕ ಶಾಸಕರು ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಂತಿರುವುದರಿಂದ ಡಿಕೆಶಿ ಭೇಟಿ ವೇಳೆ ಅವರು ಸಹ ಸ್ವಾಗತಕ್ಕೆ ಹೋಗದೇ ದೂರವೇ ಉಳಿದಿದ್ದಾರೆ.

ಡಿಕೆಶಿ ಶಿವಕುಮಾರ ಬೆಳಗಾವಿ ಜಿಲ್ಲೆಯಲ್ಲಿ ಹಸ್ತಕ್ಷೇಪ?

ಡಿಕೆ ಶಿವಕುಮಾರ ಬೆಳಗಾವಿ ಜಿಲ್ಲೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಆ ರೀತಿ ಏನಿಲ್ಲ ಸ್ಥಳೀಯವಾಗಿ ಸಾಕಷ್ಟು ಬಾರಿ ಆಗಿದೆ.  ಟ್ರಾನ್ಸ್‌ಫರ್ ವಿಚಾರವಾಗಿ ನಮಗೆ ಬೇಕಾದವರನ್ನ ಅವರು, ಅವರಿಗೆ ಬೇಕಾದವರನ್ನ ಹಾಕಿಸಿಕೊಂಡಿದ್ದಾರೆ. ನಾನು ಕೂಡ ಕಾಂಪ್ರಮೈಸ್ ಮಾಡಿಕೊಂಡಿದ್ದೇನೆ. ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಈ ರೀತಿ ನಡೆಗಿದೆ. ನಾನು ಅನುಸರಿಸಿಕೊಂಡು ಹೋಗ್ತಾ ಇದ್ದೇನೆ. ಪಕ್ಷದ ದೃಷ್ಟಿಯಿಂದ ಕಾಂಪ್ರಮೈಸ್ ಆಗಿದ್ದೇನೆ.ನಾನು ಟ್ರಾನ್ಸ್‌‌ಫರ್ ಗೆ  ಶಿಫಾರಸು ಮಾಡಿದ್ದೆ. ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿಗಮ ಮಂಡಳಿ ಕಾರ್ಯಕರ್ತರಿಗೆ ಕೊಡಿ ಅಂತ ಶಿಫಾರಸು ಮಾಡಿದ್ದೆ. ಕೇವಲ ಶಾಸಕರಿಗೆ ಮಾತ್ರ ಬೇಡ ಅಂತ ಹೇಳಿದ್ದೇನೆ. ಮಾಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎನ್ನುವ ಮೂಲಕ ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಜೊತೆ ಅಸಮಾಧಾನ ಇದೆ ಅಂತ ಒಪ್ಪಿಕೊಂಡ ಸತೀಶ್ ಜಾರಕಿಹೊಳಿ.

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್‌ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!

ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಶಾಸಕರು!

ಡಿಕೆ ಶಿವಕುಮಾರ- ಸತೀಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಹಾಲಿ ಶಾಸಕರು ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ  ಶಿವರಾಮ್ ಹೆಬ್ಬಾರ್, ಎಸ್.ಟಿ ಸೋಮಶೇಖರ್. ಈಗಾಗಲೇ ಈ ಇಬ್ಬರು ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳಲಾಗಿದೆ. ಇದೀಗ ಜಾರಕಿಹೊಳಿಯವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ಸೇರುವ ಬಗ್ಗೆ ಮತ್ತಷ್ಟು ಇಂಬು ಕೊಟ್ಟಂತಾಗಿದೆ. 

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ಲೆಕ್ಕ ಇದ್ದೇ ಇರುತ್ತದೆ. ಯಾರಾದ್ರೂ ಲೆಕ್ಕ ತೋರಿಸಬೇಕು. ನಾವು ಇನ್‌ ಕಂ ಟ್ಯಾಕ್ಸ್ ಲೆಕ್ಕ ಕೊಡಬೇಕು. ಕಾನೂನು ಅಡಿಯಲ್ಲಿ ಲೆಕ್ಕ ತೋರಿಸಬೇಕು, ತೋರಿಸ್ತಾರೆ ಎಂದರು.
 

click me!