ಬಾಂಧವ ಸಂಸ್ಥೆಯಿಂದ ಉಚಿತ ಮಣ್ಣಿನ ಗೌರಿ ಗಣೇಶ ಮೂರ್ತಿ ವಿತರಣೆ

Kannadaprabha News   | Asianet News
Published : Aug 19, 2020, 09:14 AM IST
ಬಾಂಧವ ಸಂಸ್ಥೆಯಿಂದ ಉಚಿತ ಮಣ್ಣಿನ ಗೌರಿ ಗಣೇಶ ಮೂರ್ತಿ ವಿತರಣೆ

ಸಾರಾಂಶ

ಜಯನಗರದ ಕಾಂಪ್ಲೆಕ್ಸ್‌ನಲ್ಲಿರುವ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ಮಣ್ಣಿನ ಗೌರಿ- ಗಣೇಶ ಮೂರ್ತಿ ವಿತರಣೆ|  ಸತತವಾಗಿ ಆರು ವರ್ಷಗಳಿಂದ ಮಣ್ಣಿನ ಗೌರಿ- ಗಣೇಶ ಮೂರ್ತಿ ವಿತರಣೆ ಮಾಡುತ್ತಿರುವ ಬಾಂಧವ ಸಂಸ್ಥೆ| ಮೊದಲು ಬಂದವರಿಗೆ ಆದ್ಯತೆ| 

ಬೆಂಗಳೂರು(ಆ.19): ಗೌರಿ-ಗಣೇಶ ಹಬ್ಬದ ಅಂಗವಾಗಿ ಜಯನಗರದಲ್ಲಿರುವ ಬಾಂಧವ ಸಂಸ್ಥೆಯು ಮೂರು ಸಾವಿರದ ಒಂದು (3001) ಗೌರಿ- ಗಣೇಶ ಮಣ್ಣಿನ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. 

ಮಣ್ಣಿನ ಗೌರಿ- ಗಣೇಶ ಮೂರ್ತಿಗಳನ್ನು ಜಯನಗರದ ಕಾಂಪ್ಲೆಕ್ಸ್‌ನಲ್ಲಿರುವ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ವಿತರಣೆ ಮಾಡಲಾಗುತ್ತದೆ. ಬಾಂಧವ ಸಂಸ್ಥೆಯ ಎನ್‌. ನಾಗರಾಜ್‌ ವಿತರಣೆ ಮಾಡುತ್ತಿದ್ದು, ಸಂಸ್ಥೆ ವತಿಯಿಂದ ಸತತವಾಗಿ ಆರು ವರ್ಷಗಳಿಂದ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬರಲಾಗುತ್ತಿದೆ. 

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

ಆಸಕ್ತರು ಜಯನಗರಕ್ಕೆ ಆಗಮಿಸಿ ಮೂರ್ತಿಗಳನ್ನು ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. ದೂ. 94484 80777 ಸಂಪರ್ಕಿಸಬಹುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!