ಕೃಷಿಕರಲ್ಲದವರೂ ಭೂಮಿ ಖರೀ​ದಿ​ಸ​ಲು ಅವ​ಕಾ​ಶ

By Kannadaprabha NewsFirst Published Aug 19, 2020, 8:53 AM IST
Highlights

ಕೃಷಿ ಭೂಮಿ ಖರೀದಿ ಮಾಡಲು ಇದ್ದ ಕೆಲ ನಿರ್ಬಂಧಗಳನ್ನು ತೆಗೆದು ಹಾಕಿರುವ ಸರ್ಕಾರ ಎಲ್ಲರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡುತ್ತಿದೆ.

ಬೆಂಗಳೂರು (ಆ.19):  ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ಮೂರು ನಿರ್ಬಂಧಗಳನ್ನು ತೆಗೆದು ಹಾಕಿರುವ ಕರ್ನಾಟಕ ಭೂ ಸುಧಾರಣೆ ಕಾಯಿದೆ ತಿದ್ದುಪಡಿಯು ಅಧಿಕೃತವಾಗಿ ಬುಧವಾರದಿಂದ ಜಾರಿಗೆ ಬರಲಿದ್ದು, ಇನ್ನು ಮುಂದೆ ರಾಜ್ಯದಲ್ಲಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದಾಗಿದೆ.

ತಿದ್ದುಪಡಿ ಕಾಯಿದೆ ಅನ್ವಯ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರದವರೂ ಹಾಗೂ ಎಷ್ಟೇ ಆದಾಯ ಹೊಂದಿರುವವರೂ ಸಹ ಕೃಷಿ ಭೂಮಿ ಖರೀದಿಸಬಹುದು. ಅಲ್ಲದೆ, ವ್ಯಕ್ತಿ ಹಾಗೂ ಕುಟುಂಬ ಹೊಂದಿರಬಹುದಾದ ಭೂಮಿಯ ಮಿತಿಯೂ ಸಹ ದುಪ್ಪಟ್ಟು ಆಗಲಿದೆ. ಈ ಮೂಲಕ ಕುಟುಂಬವೊಂದು ಗರಿಷ್ಠ 216 ಎಕರೆ ಜಮೀನು ಹೊಂದಬಹುದು. ಈ ಬಗ್ಗೆ ಮಂಗಳವಾರ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ರಾಜ್ಯ ಎಲ್ಲಾ ಸಬ್‌ ರಿಜಿಸ್ಟ್ರಾರ್‌ಗಳನ್ನು ಉದ್ದೇಶಿಸಿ ಸುತ್ತೋಲೆ ಹೊರಡಿಸಿದ್ದು, ಈ ತಿದ್ದುಪಡಿ ನಿಯಮಗಳ ಅನ್ವಯ ನೋಂದಣಿ ಆರಂಭಿಸುವಂತೆ ಸೂಚನೆ ನೀಡಿದ್ದಾರೆ.

ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ರಾಜ್ಯದ ಭವಿಷ್ಯಕ್ಕೆ ಕುತ್ತು : ಎಚ್‍ಡಿಕೆ ಎಚ್ಚರಿಕೆ...

1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಈ ವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಜತೆಗೆ ಕೃಷಿಕರಲ್ಲದವರು ಖರೀದಿಸಬೇಕಾದರೆ ಆದಾಯ ಮಿತಿ ನಿಗದಿ ಮಾಡಲಾಗಿತ್ತು. ಈ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಜುಲೈ 14ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರಂತೆ ನಿಯಮಗಳನ್ನು ರೂಪಿಸಿ ಕಂದಾಯ ಇಲಾಖೆಯು ಬುಧವಾರದಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.

ಸರ್ಕಾರದ ಮನೆಹಾಳು ನಿರ್ಧಾರ ಎಂದ ಕುಮಾರಸ್ವಾಮಿಯಿಂದ ಎಚ್ಚರಿಕೆ ಸಂದೇಶ.

ಏನಿದು ಕಾಯಿದೆ ತಿದ್ದುಪಡಿ?

ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63ಎ, 79ಎ ಹಾಗೂ ಬಿ ಸೆಕ್ಷನ್‌ ಪ್ರಕಾರ ರೈತ ಹಿನ್ನೆಲೆ ಹೊಂದಿಲ್ಲದವರು ಹಾಗೂ ನಿರ್ದಿಷ್ಟಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇದೀಗ ಮೂರು ಸೆಕ್ಷನ್‌ ರದ್ದುಪಡಿಸಿದ್‌ದು ಇನ್ನು ಮುಂದೆ ಒಂದೇ ಕುಟುಂಬದಲ್ಲಿ 5 ಸದಸ್ಯರು ಇದ್ದರೆ 108 ಎಕರೆಗಿಂತ ಹೆಚ್ಚು ಜಮೀನು ಖರೀದಿಸುವಂತಿಲ್ಲ ಎಂದು ಮಾಡಲಾಗಿದೆ.

click me!