ಸಪ್ನಾಬುಕ್‌ ಹೌಸ್‌ : ಭಾರೀ ಡಿಸ್ಕೌಂಟ್‌

Published : Feb 02, 2019, 07:34 AM IST
ಸಪ್ನಾಬುಕ್‌ ಹೌಸ್‌ : ಭಾರೀ ಡಿಸ್ಕೌಂಟ್‌

ಸಾರಾಂಶ

ಬೆಂಗಳೂರಿನ ‘ಸಪ್ನ ಬುಕ್‌ ಹೌಸ್‌’ ತನ್ನ 52ರ ಸಂಭ್ರಮದಲ್ಲಿ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅ ಅವಧಿಯಲ್ಲಿ ಸಪ್ನಾದ ಎಲ್ಲಾ ಶಾಖೆಗಳಲ್ಲೂ ಪುಸ್ತಕಗಳ ಮೇಲೆ ಶೇ.10% ರಿಂದ 52%ರಷ್ಟುರಿಯಾಯಿತಿ ಇರುತ್ತದೆ. 

ಬೆಂಗ​ಳೂರು :  ನಾಡಿನ ಸುಪ್ರಸಿದ್ಧ ಪುಸ್ತಕ ಕಾಶಿ, ಬೆಂಗಳೂರಿನ ‘ಸಪ್ನ ಬುಕ್‌ ಹೌಸ್‌’ ತನ್ನ 52ರ ಸಂಭ್ರಮದಲ್ಲಿ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುವ ಮೂಲಕ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 

ಜನವರಿ 26ರಿಂದ ಫೆಬ್ರವರಿ 10ರ ತನಕ ತನ್ನೆಲ್ಲಾ ಗ್ರಾಹಕರಿಗೂ ಕೆಲವು ವಿನೂತನ ಯೋಜನೆಗಳನ್ನು ಘೋಷಿಸಿದೆ. ಅ ಅವಧಿಯಲ್ಲಿ ಸಪ್ನಾದ ಎಲ್ಲಾ ಶಾಖೆಗಳಲ್ಲೂ ಪುಸ್ತಕಗಳ ಮೇಲೆ ಶೇ.10% ರಿಂದ 52%ರಷ್ಟುರಿಯಾಯಿತಿ ಇರುತ್ತದೆ. 

ಐನೂರಕ್ಕೂ ಹೆಚ್ಚು ಮೊತ್ತದ ಪುಸ್ತಕದ ಖರೀದಿ ಮಾಡಿದವರಿಗೆ ಸಪ್ನಾ ಲಾಯಲ್ಟಿಕಾರ್ಡ್‌ ಕೊಡಲಾಗುತ್ತದೆ. ಈ ಕಾರ್ಡು ಹೊಂದಿರುವವರಿಗೆ ಬೋನಸ್‌ ಪಾಯಿಂಟುಗಳು ದೊರೆಯುತ್ತವೆ. 

ಪ್ರತಿ ನೂರು ಪಾಯಿಂಟುಗಳು ಒಟ್ಟಾದ ಕೂಡಲೇ ಮೊದಲ ನೂರು ಪಾಯಿಂಟುಗಳು ರಿಯಾಯಿತಿಗೆ ಅರ್ಹವಾಗುತ್ತವೆ. ಪುಸ್ತಕ ಖರೀದಿಗೆ ತಿಂಗಳ ಕಂತಿನ ಸೌಲಭ್ಯವನ್ನೂ ನೀಡಲಾಗುತ್ತದೆ. ಸುಮಾರು ಎರಡು ಕೋಟಿ ಶೀರ್ಷಿಕೆಗಳನ್ನು ಈ ಯೋಜನೆಯಡಿ ಖರೀದಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!