ಮೋದಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

Published : Feb 01, 2019, 10:06 PM ISTUpdated : Feb 01, 2019, 10:07 PM IST
ಮೋದಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

ಸಾರಾಂಶ

ಮೋದಿ ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು! ಚಿಕ್ಕಬಳ್ಳಾಪುರ - ಗೌರಿಬಿದನೂರು,  ಗದಗ-ಯಾಳವಗಿ ಮಾರ್ಗ! ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗ ಮಂಜೂರು!ಒಟ್ಟು 1,963 ಕೋಟಿ ರೂ ವೆಚ್ಚದ ಯೋಜನೆ !

ನವದೆಹಲಿ, [ಫೆ.01]:  ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ನೈರುತ್ಯ ರೈಲ್ವೇ ಅಡಿಯಲ್ಲಿ ಮೂರು ಹೊಸ ರೈಲು ಮಾರ್ಗಗಳು ಮಂಜೂರಾಗಿದೆ. 

ಒಟ್ಟು 1,963 ಕೋಟಿ ರೂ ವೆಚ್ಚದ ಈ ಯೋಜನೆಗಳಿಗೆ ಈ ಸಾಲಿನ ಬಜೆಟ್ ನಲ್ಲಿ ಮಾತ್ರ ಕೇವಲ ತಲಾ 10 ಲಕ್ಷ ರೂಗಳನ್ನು ಮೀಸಲಿಡಲಾಗಿದೆ.

ಮೋದಿ ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

ಚಿಕ್ಕಬಳ್ಳಾಪುರ-ಗೌರಿ ಬಿದನೂರು ನ 44 ಕಿಮೀ ರೈಲ್ವೇ ಮಾರ್ಗಕ್ಕೆ 367 ಕೋಟಿ ರೂ, 58 ಕೀಮೀ ಉದ್ದದ ಗದಗ-ಯಾಳವಗಿ ರೈಲ್ವೇ ಮಾರ್ಗಕ್ಕೆ 640 ಕೋಟಿ ರೂ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಮಧ್ಯೆ 89 ಕಿಮೀ ಉದ್ದದ ರೈಲ್ವೇ ಹಳಿ ನಿರ್ಮಾಣಕ್ಕೆ 956 ಕೋಟಿ ರೂ ಮಂಜೂರು ಮಾಡಲು ರೈಲ್ವೇ ಸಚಿವಾಲಯ ಒಪ್ಪಿಕೊಂಡಿದೆ.  ಆದರೆ ಸದ್ಯ ಕೇವಲ 10 ಲಕ್ಷ ರೂಗಳನ್ನು ಮಾತ್ರ ಈ ಬಜೆಟ್ ನಲ್ಲಿ ತೆಗೆದಿಟ್ಟಿದೆ.

ಮೆಟ್ಟುಪಾಳ್ಯಂಗೂ ವಿಸ್ತಾರಗೊಳ್ಳಲಿರುವ 148 ಕೀಮೀ ಉದ್ದದ ಮೈಸೂರು-ಚಾಮರಾಜನಗರ ರೈಲ್ವೇ ಹಳಿಗಳ ಗೇಜ್ ಪರಿವರ್ತನೆಗೆ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ.

ಯಶವಂತಪುರ-ಚನ್ನಸಂದ್ರ (21.7 ಕಿಮೀ), ಬೈಯ್ಯಪ್ಪನಹಳ್ಳಿ-ಹೊಸೂರು (48ಕೀಮೀ), ಬೆಂಗಳೂರು-ವೈಟ್ ಫೀಲ್ಡ್-ಬೆಂಗಳೂರು ಸಿಟಿ-ಕೃಷ್ಣರಾಜಪುರಂ (23.08 ಕೀ.ಮೀ)ನ ಡಬ್ಲಿಂಗ್ ಕಾಮಗಾರಿ, ರಾಮನಗರ-ಮೈಸೂರು ಜೊತೆಗೆ ಕೆಂಗೇರಿ-ಮೈಸೂರಿನ ವಿದ್ಯುತೀಕರಣ, ಹೊಸದುರ್ಗ-ಚಿಕ್ಕಜಾಜೂರು (28.89 ಕಿಮೀ) ಗಳ ಅಂಶಿಕ ಡಬ್ಲಿಂಗ್ ಗೂ ಬಜೆಟ್ ನಲ್ಲಿ ಸ್ಥಾನ ಸಿಕ್ಕಿದೆ.

ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಾಗಾಮಾದ ರೈಲ್ವೇ ಹಳಿಗಳ ಡಬ್ಲಿಂಗ್ ಗೆ 159 ಕೋಟಿ ರೂ ನೀಡಲಾಗುತ್ತಿದೆ. ಯಶವಂತಪುರ-ಚಿಕ್ಕಬಾಣವಾರದ ವಿದ್ಯುತೀಕರಣ ಮತ್ತು ಬೈ ಪಾಸ್ ಗೆ ಒಪ್ಪಿಗೆ ನೀಡಲಾಗಿದೆ.

 ಮೈಸೂರು ವಿಭಾಗದಲ್ಲಿ ಕಬ್ಬಿಣದ ಅದಿರು ಸಾಗಣಿಕೆ ಆಗುವ ರೈಲ್ವೇ ನಿಲ್ದಾಣಗಳ ಉನ್ನತೀಕರಣ, ಸವಣೂರು, ತೋಲಹುಣಸೆ, ನವಲೂರು ನಿಲ್ದಾಣಗಳ ಅಭಿವೃದ್ಧಿಯ ಪ್ರಸ್ತಾಪ ಮಾಡಲಾಗಿದೆ.

ಬೆಂಗಳೂರು ಕಾಂಟೋನ್ಮೆಂಟ್ - ವೈಟ್ ಫೀಲ್ಡ್ ನ ಸ್ವಯಂಚಾಲಿತ ಸಿಗ್ನಲಿಂಗ್ ಗೆ 5 ಕೋಟಿ, ಬೈಯಪ್ಪನಹಳ್ಳಿಯಲ್ಲಿ ಮೂರನೇ ಕೋಚಿಂಗ್ ಟರ್ಮಿನಲ್ ಗೆ 20 ಕೋಟಿ, ಅಂಬೆವಾಡಿಯಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಸುಧಾರಣೆ, ಬಂಗಾರಪೇಟೆಯಲ್ಲಿ ಪ್ಲಾಟ್ ಫಾರಂ ನಂ 5 ಮತ್ತು 6 ರ ವಿಸ್ತರಣೆ, ನಾಗನಹಳ್ಳಿಯಲ್ಲಿ ಸ್ಯಾಟ್ ಲೈಟ್ ಟರ್ಮಿನಲ್ ಸೇರಿ ಒಟ್ಟು 40 ಕೋಟಿ ರೂಗಳ ಕಾಮಗಾರಿಗೆ ಬಜೆಟ್ ನಲ್ಲಿ ಅನುಮೋದನೆ ನೀಡಲಾಗಿದೆ.

ಬೆಂಗಳೂರು ಸಬ್ ಅರ್ಬನ್ ಯೋಜನೆಗೆ 11,546 ಕೋಟಿ ರೂಗಳ ಮಂಜೂರಾತಿ ಸಿಕ್ಕಿದ್ದರೂ ಕೂಡ ಈ ಬಾರಿ ಎಲವೇಟೆಡ್ ಕಾರಿಡಾರ್ ಮತ್ತು ಗ್ರೇಡ್ ಕಾರಿಡಾರ್ ನ ಪ್ರಸ್ತಾಪವನ್ನು ಮಾಡಲಾಗಿದೆ. 

ಸದ್ಯ 10 ಕೋಟಿ ರೂಗಳ ಕಾಮಗಾರಿ ನಡೆಯುತ್ತಿದ್ದು ರಾಜ್ಯ ಸರ್ಕಾರ ಮತ್ತು ವಿವಿಧ ಹೂಡಿಕೆಗಳ ನೆರವಿನಿಂದ 159 ಕೋಟಿ ರೂಗಳ ಕಾಮಗಾರಿ ನಡೆಸಲು ಮಧ್ಯಂತರ ಬಜೆಟ್ ನಲ್ಲಿ ಏರ್ಪಾಟುಗಳನ್ನು ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!